ದುರುಗಪ್ಪ ಹೊಸಮನಿ
ಲಿಂಗಸುಗೂರು,ಜೂ.೦೭-
ಸಮಾಜ ಕಲ್ಯಾಣ ಇಲಾಖೆ ಯಲ್ಲಿ ಕಳೆದ ಎರಡು ವರ್ಷಗಳಿಂದ ಖಾಯಂ ಹುದ್ದೆ ಖಾಲಿ ಖಾಲಿ ಇಲಾಖೆ ಎಕ್ಕುಟ್ಟಿ ಹೋಗಿದೆ ಈ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ನಿಂತು ಹೋಗಿದೆ ಇಲ್ಲಿ ಪ್ರಭಾರಿ ವಹಿಸಿಕೊಂಡ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಛೇರಿ ಕೆಲಸ ಕಾರ್ಯಗಳ ಸ್ಥಗಿತ ಗೊಂಡಿದೆ ಇಲಾಖೆಯಲ್ಲಿ ಒಬ್ಬರೇ ಕಛೇರಿ ಕೆಲಸ ಕಾರ್ಯಗಳ ಮಾಡಲು ತುಂಬಾ ತೊಂದರೆಯಾಗುತ್ತಿದೆ ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಯಚೂರು ಇವರು ಎಚ್ಚೆತ್ತುಕೊಂಡು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುದ್ದೆ ಭರ್ತಿ ಮಾಡಬೇಕು ಎಂಬುದು ವಿವಿಧ ಸಂಘಟನೆಗಳು ಮುಖಂಡರು ಒತ್ತಾಯಿಸಿದ್ದಾರೆ.
ಲಿಂಗಸುಗೂರು ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಇರುವ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಹುತೇಕ ಹುದ್ದೆಗಳು ಖಾಲಿ ಇರುವುದರಿಂದ ಹಲವು ಯೋಜನೆಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ.
ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕ ಹುದ್ದೆಗೆ ಖಾಯಂ ಅಧಿಕಾರಿ ನೇಮಕಾತಿಯಾಗಿಲ್ಲ ಅದರ ಬದಲಾಗಿ ಬೇರೆ ಇಲಾಖೆಗಳ ಅಧಿಕಾರಿಗಳಿಗೆ ಪ್ರಭಾರ ನೀಡಲಾಗುತ್ತಿದೆ.
ಕಚೇರಿಗೆ ಬಾರದ ವ್ಯವಸ್ಥಾಪಕ:
ಕಚೇರಿ ವ್ಯವಸ್ಥಾಪಕ ಬಿ.ಎಂ.ಕೋರಬಾರ ಕಚೇರಿಗೆ ಬರದೇ ಅತಿ ವಿರಳ, ವಾರಕ್ಕೊಮ್ಮೆ ಕಚೇರಿಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಮಾಡಿ ಹೋಗೋವುದೇ ಇವರ ಕಾಯಕವಾಗಿದೆ.
ಸೌಲಭ್ಯಗಳು ಗಗನ ಕುಸಮ:
ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪರಿಶಿಷ್ಟ ಜಾತಿಗೆ ಸಿಗಬೇಕಾದ ಸೌಲಭ್ಯಗಳು ಗಗನ ಕುಸಮವಾಗಿದೆ.
ಕಚೇರಿಗೆ ಎಸ್ ಡಿಎ ಯೇ ಆಸರೆ:
ಕಚೇರಿಯಲ್ಲಿ ಎಸ್ ಡಿಎ ಆಸರೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಎಸ್ ಡಿ ಎ ಮಾತ್ರ ಕಚೇರಿಯ ಎಲ್ಲಾ ಕಡತ ವಿಲೇವಾರಿ ಮಾಡುವುದು ಇವರೇ.
ತಾಲೂಕು ಕಚೇರಿಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಪರಿಶಿಷ್ಟ ಜಾತಿಗಳ ಕಲ್ಯಾಣ ಹೇಗೆ ಸಾದ್ಯ ಎಂಬದು ನಾಗರಿಕರ ಅಭಿಪ್ರಾಯವಾಗಿದೆ.