ಸಮಾಜ ಕಲ್ಯಾಣ ಇಲಾಖೆ: 5 ತಿಂಗಳ ಬಾಕಿ ವೇತನ ನೀಡಲು ಒತ್ತಾಯ

ಚಿಂಚೋಳಿ,ಜು.13- ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಹೊರ ಮೂಲ ಸಂಸ್ಥೆಯ ಸಿಬ್ಬಂದಿಗಳು ವಿವಿಧ ವಸತಿ ನಿಲಯಗಳಲ್ಲಿ ಅಡುಗೆ, ಅಡಿಗೆ ಸಹಾಯಕರು, ರಾತ್ರಿ ಕಾವಲುಗರಾರು ಹೊರ ಮೂಲ ಸಂಸ್ಥೆಯಿಂದ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದು, ಅವರ 5 ತಿಂಗಳ ಬಾಕಿ ವೇತನವನ್ನು ನೀಡುವಂತೆ ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ್ ಆರ್ ಯಾಕಾಪೂರ ರವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಚಿಂಚೋಳಿ ಇವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಲಾಯಿತು.
ಅತೀಶೀಘ್ರದಲ್ಲಿ ಹೊರ ಮೂಲ ಸಂಸ್ಥೆಯ ನೌಕರರಿಗೆ 5 ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕೆಂದು ಒತ್ತಾಯಿಸಿದರು ಒಂದು ವೇಳೆ ಐದು ತಿಂಗಳ ವೇತನವನ್ನು ನೀಡದಿದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಂಜೀವನ್ ಆರ್ ಯಾಕಾಪೂರ, ಎಚ್ಚರಿಸಿದರು
ಈ ಸಂಧರ್ಭದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷರಾದ ರವಿಶಂಕರ್ ರೆಡ್ಡಿ ಮುತ್ತಂಗಿ,ಮುಖಂಡರಾದ ವಿಷ್ಣುಕಾಂತ್ ಮೂಲಗಿ, ಹಣಮಂತ ಪೂಜಾರಿ,ಹಣಮಂತ ರೆಡ್ಡಿ ದೋಟಿಕೋಳ್, ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಹುಲ ಸಂಜೀವನ್ ಯಾಕಾಪೂರ, ಮಲ್ಲಿಕಾರ್ಜುನ್ ಪೂಜಾರಿ ಅಣವಾರ, ಬಸಯ್ಯ ಸ್ವಾಮಿ ಅಣವಾರ, ಯಲ್ಲಪ್ಪ ಅಣವಾರ,ಸುರೇಂದ್ರ ಶಿವರೆಡ್ಡಿಪಲ್ಲಿ,ಜೆಡಿಎಸ್ ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷರಾದ ಮಕ್ತುಮ್ ಜಬ್ಬಾರ, ಶೇಕ್ ಅಮೀರ್, ಮಾಪಣ್ಣ, ಜಗನ್ನಾಥ್ ಬೆಲಕಟ್ಟುರ್, ಸೇರಿದಂತೆ ಅನೇಕ ಅಡುಗೆ ಸಹಾಯಕ, ಸಹಾಯಕಿಯರು ಉಪಸ್ಥಿತರಿದ್ದರು.