ಸಮಾಜ ಕಲ್ಯಾಣ ಇಲಾಖೆಯ ಗುರು ಬಸವರಾಜ್ ನಿವೃತ್ತಿ

ಹಗರಿಬೊಮ್ಮನಹಳ್ಳಿ.ಮೇ.೦೧ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿನ್ನೆ ನಿವೃತ್ತಿ ಹೊಂದಿದ ಗುರು ಬಸವರಾಜ್ ಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು
ಪಟ್ಟಣದ ಕಚೇರಿಯ ಸಮಾರಂಭದಲ್ಲಿ ಭಾಗವಹಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿನೇಶ್ ಮಾತನಾಡಿ ಇದುವರೆಗೆ ತುಂಬಾ ಉತ್ತಮವಾದ ಜನಪರವಾದ ಕೆಲಸಗಳನ್ನು ಮಾಡುವುದು ನಿಮ್ಮ ವೃತ್ತಿ ಪ್ರವೃತ್ತಿ ಎರಡೂ ಸಹ ಸಜ್ಜನರಾಗಿ ಎಲ್ಲರೊಂದಿಗೆ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದರು. ಸಮಾಜ ಕಲ್ಯಾಣ ಇಲಾಖೆಯ ಜೆಡಿ ದೇವರಾಜ್ ಅವರು ಪತ್ರದ ಮೂಲಕ ಸಂದೇಶ ನೀಡಿದ್ದಾರೆ
ನೀವು ನನ್ನ ಅವಧಿಯಲ್ಲಿಯೂ ಸಹ ತುಂಬಾ ಕಷ್ಟಪಟ್ಟು ನಾನು ಹೇಳಿದ ಎಲ್ಲಾ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ ನನ್ನ ಒಡನಾಡಿಯಾಗಿ ಕೆಲಸ ನಿರ್ವಹಿಸುತ್ತಿದೆ ನಿಮ್ಮ ನಿವೃತ್ತಿಯ ಬದುಕು ಸಾರ್ಥಕವಾಗಲಿ ನಿಮಗೆ ಉತ್ತಮವಾದ ಆರೋಗ್ಯ ಆಯಸ್ಸು ಐಶ್ವರ್ಯ ಸಿಗಲೆಂದು ಶುಭ ಕೋರಿದ್ದಾರೆ..
ಈ ಸಂದರ್ಭದಲ್ಲಿ ತಾ‌ಪಂ ಕುಮಾರ್ ಸ್ವಾಮಿ, ಉಪ ಖಜಾನೆ ವಾಗೀಶ್, ಗುರುಬಸವರಾಜ್,, ತಾಪಂ ಕೇಶವ, ಚಂದ್ರನಾಯ್ಕ ನಿರೂಪಣೆ, ಸ್ವಾಗತ ಶೋಭ.ಬಿ ವಂದನಾರ್ಪಣೆ ರಂಗನಾಥ ಮಾಡಿದರು.