ಸಮಾಜ ಕಲ್ಯಾಣ ಅಧಿಕಾರಿಗಳ ನಿರ್ಲಕ್ಷಹಾಸ್ಟಲ್ ಗಳ ವಿದ್ಯಾರ್ಥಿಗಳ ಮೇಲೆ ಹಲ್ಲೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.21:  ಜಿಲ್ಲೆಯ ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ವಾರ್ಡ್ ನ ಅವರುಗಳಿಂದ ವಿದ್ಯಾರ್ಥಿಗಳ ಮೇಲೆ  ಹಲ್ಲೆ ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ಇದಕ್ಕೆ ಇಲಾಖೆಯ ಅಧಿಕಾರಿಗಳ ಬೆರಜವಾಬ್ದಾರಿಯೇ ಕಾರಣವಾಗಿದ್ದು. ಸೂಕ್ತ ಕ್ರಮ‌ ತೆಗೆದುಕೊಳ್ಳಬೇಕೆಂದು  ಬಿಎಸ್ಪಿ ಪಕ್ಷ ಸಮಾಜ‌ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಪಕ್ಷದ  ಮುಖಂಡರು.  ನಗರದ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯದಲ್ಲಿ 9ನೇ ತರಗತಿಯ  ವಿದ್ಯಾರ್ಥಿ ಮೇಲೆ ಅಮಾನುಷ್ಯವಾಗಿ  ಕಾವಲುಗಾರ ಮನೋಹರ ಪಾಟೀಲ್ ಹಲ್ಲೆ ಮಾಡಿದ್ದಾನೆ.
ಇಂತಹ ಘಟನೆಗಳು ದಿನ ನಿತ್ಯ ಒಂದಲ್ಲಾ ಒಂದು ಕಡೆ  ನಡೆಯುತ್ತಿರುತ್ತವೆ. ಶಾಂತಿ ಮತ್ತು ಶಿಸ್ತು ನೆಲಸಬೇಕಾಗಿರುವ ವಸತಿ ನಿಲಯಗಳಲ್ಲಿ ಈ ರೀತಿಯ ದೌರ್ಜನ್ಯ ಆಧಾರಿತ ಘಟನೆಗಳು ನಡೆಯಲು ಕಾರಣವೇನು ಇಂತಹ ಘಟನೆಗಳಿಂದ ಮಕ್ಕಳ ಮೇಲೆ ದುಷ್ಪಪರಿಣಾಮ ಬೀರಲಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಬೇಜವಾಬ್ದಾರಿಯನ್ನು ತೋರುತ್ತಿದ್ದಾರೆ.
ಜಿಲ್ಲೆಯ ಯಾವುದೇ  ವಸತಿನಿಲಯಗಳಲ್ಲಿ ರಾತ್ರಿ ಹೊತ್ತಿನಲ್ಲಿ ವಾರ್ಡನ್  ಇರುವುದಿಲ್ಲ ಇವರು ಇರದ ಕಾರಣ ನಿಲಯಗಳಲ್ಲಿ ಏನು ನಡೆಯುತ್ತಿದೆ ಎಂಬುವುದು ಗೊತ್ತಾಗುವುದಿಲ್ಲ. ಇದಕ್ಕೆಲ್ಲ ಇಲಾಖೆಯ ಜಿಲ್ಲೆ ಮತ್ತು ತಾಲೂಕು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು  ಒತ್ತಾಯಿಸುತ್ತದೆಂದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಹೆಚ್. ಮುನಿಸ್ವಾಮಿ, ಮುಖಂಡರುಗಳಾದ  ಮಹಮ್ಯದ್ ಅಲಿ, ಕೆ.ಬಾಬು, ಟಿ.ಕೆ.ಕೃಷ್ಣಪ್ಪ, ಸಾಮ್ರಾಟ್,   ತಿಪ್ಪಸ್ವಾಮಿ,   ಸುಧೀರ್ ಕುಮಾರ್,  ಉಮಾಪತಿ ಮೊದಲಾದವರು ಸುದ್ದಿಗೋಷ್ಟಿಯಲ್ಲಿದ್ದರು