ಸಮಾಜ ಕಟ್ಟುವ ಕೆಲಸ ಮಾಡಿದವರು ಬಸವಣ್ಣ

ರಾಯಚೂರು,ಏ.೨೩- ೧೨ನೆ ಶತಮಾನದ ಚುಳುವಳಿ ದಯವೇ ಧರ್ಮದ ಮೂಲ ಅಂತ ಹೇಳಿತು.ಕಾಯಕ ತತ್ವವನ್ನು ಸಾರಿತು.ವಿಶ್ವದಲ್ಲಿ ಅನೇಕ ಕ್ರಾಂತಿಗಳನ್ನೂ ನೋಡಿದ್ದೇವೆ. ಅವೆಲ್ಲ ರಕ್ತ ಕ್ರಾಂತಿ ಆಗಿವೆ.ಆದರೆ ಬಸವ ಚಳುವಳಿಗೆ ವಚನ ಕ್ರಾಂತಿ ಆಗಿದೆ ಅದು ವಿಶಿಷ್ಟ ವಾದ ಕ್ರಾಂತಿ ಎಂದು ವೀರ ಹನುಮಾನ ಹೇಳಿದರು.
ಅವರು ರಾಯಚೂರಿನ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಗಳಾಗಿ ಭಾಗವಹಿಸಿ ಮಾತನಾಡಿದರು. ಬಸವಣ್ಣನವರು ಸಮಾಜ ಕಟ್ಟುವ ಕೆಲಸ ಮಾಡಿದರು.ಸಮ ಸಮಾಜದ ಕನಸು ಹೊತ್ತವರು.ಅವರ ವಚನ ಚಳುವಳಿ ಜಗತ್ತಿಗೆ ಮಾದರಿ ಎಂದರು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಬಸವಣ್ಣ ನವರ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎ. ರಂಗಣ್ಣ ಪಾಟೀಲ್ ವಹಿಸಿದ್ದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ್ ಬೇವಿನಬೆಂಚಿ,ಪ್ರಗತಿಪರ ಹೋರಾಟಗಾರರಾದ ಎಸ್. ಮಾರೆಪ್ಪ ವಕೀಲರು, ರುದ್ರಯ್ಯ ಗುಣಾರಿ, ಜೆ.ಬಿ.ರಾಜು,ಲಕ್ಷ್ಮಿ ರೆಡ್ಡಿ ಹೊಸೂರ, ಡಾ.ಶರಣಪ್ಪ ಗೋನಾಳ, ವಿ.ಎನ್. ಅಕ್ಕಿ, ಬಸಿರುದ್ದೀನ್ ಹೊಸಮನಿ, ದಾನಮ್ಮ, ರೇಖಾ ಬಡಿಗೇರ್, ಎನ್. ರಾಜಶಂಕರ್, ಗೌಡಪ್ಪಗೌಡ ಗುರೆಡ್ಡಿ, ಡಾ. ಅರುಣಾ ಹಿರೇಮಠ್, ಶಿವಮೂರ್ತಿ ಹಿರೇಮಠ ಸೇರಿದಂತೆ ಅನೇಕರು ಇದ್ದರು.
ಪ್ರತಿಭಾ ಗೋನಾಳ ಪ್ರಾರ್ಥಿಸಿದರು. ರಾವುತ ರಾವ್ ಬರೂರ ನಿರೂಪಿಸಿದರು. ಈರಣ್ಣ ಬೆಂಗಾಲಿ ವಂದಿಸಿದರು.