ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ

ಬೀದರ್ ಸೆ. 19:ಸುಂದರ ಸಮಾಜ ಹಾಗೂ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕರಾದ ಡಾ. ರಾಮಚಂದ್ರ ಗಣಾಪೂರ ನುಡಿದರು.
ಅವರು ತಾಲೂಕಿನ ಚಟನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚಟ್ನಳ್ಳಿ ಗ್ರಾಮ ಪಂಚಾಯತ ವತಿಯಿಂದ ಸೆಪ್ಟೆಂಬರ 17ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ ಅವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನಡಿ, ಬರಿದಾಬಾದ, ಬುಧೇರಾ ಚಟ್ನಳ್ಳಿ ಗ್ರಾಮದ ಶಿಕ್ಷಕರಿಗೆ ಉತ್ತಮ ಶಿಕ್ಷಕ ಹಾಗೂ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ತಂದೆ-ತಾಯಿ ಗುರುವಿದ್ದಂತೆ ಹೊರಗಡೆ ಶಿಕ್ಷಕರು-ಗುರು ತನ್ನ ಚಾಣಾಕ್ಷತೆಯಿಂದ ಮಗುವನ್ನು e್ಞÁನದಿಂದ ವ್ಯಕ್ತಿಯನ್ನು ಮಹಾನ ವ್ಯಕ್ತಿಯನ್ನಾಗಿಸುತ್ತಾನೆ. ಹೀಗಾಗಿ ಗುರುವಿನ ಜವಾಬ್ದಾರಿ ಕೂಡ ಮುಖ್ಯವಾಗಿದೆ ಶಾಲೆಯಿಂದ ಬಂದ ಮೇಲೆ ತಂದೆ ತಾಯಿ ಕೂಡ ಗಮನ ನೀಡಬೇಕೆಂದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅದಿಕಾರಿ ದೇವಪ್ಪ ಪ್ರಾಸ್ತಾವಿಕ ಮಾತನಾಡಿ, ಚಟ್ನಳ್ಳಿ ಗ್ರಾಮ ಪಂಚಾಯತ ಆಡಳಿತ ವತಿಯಿಂದ ಇಡೀ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶಿಕ್ಷಕರ ದಿನಾಚರಣೆ ನಿಮಿತ್ತ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ 9 ಶಾಲೆಯ ಶಿಕ್ಷಕರು ಹಾಗೂ 10 ಅಂಗನವಾಡಿಯ ಕಾರ್ಯಕರ್ತರಿಗೆ ಹಾಗೂ 30 ಉತ್ತಮ ಸಾಧಕರಿಗೆ ಗ್ರಾಮ ಪಂಚಾಯತ ಸಹಕಾರದಿಂದ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದೇವೆ ಅಲ್ಲದೇ ಸರ್ಕಾರದ ನಿಯಮದಂತೆ ಸ್ವಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಖುಶಾಬಾಯಿ ವಿಠಲ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ವೀರಶೆಟ್ಟಿ ಪಾಟೀಲ್ ನೇಳಗೆ, ಎಸ್‍ಡಿಎಂಸಿ ಅಧ್ಯಕ್ಷ ಪ್ರಭಾಕರ ಮಾಳಗೆ, ಕಮಠಾಣಾ ಮೋರಾರ್ಜಿ ದೇಸಾಯಿ ಶಾಲೆಯ ಪ್ರಾಚಾರ್ಯ ರವೀಂದ್ರ, ನಾಗೇಶ ಮೈಲಾರಿ ಮಾತನಾಡಿದರು. ಶಿಕ್ಷಕರಾದ ಪರಶುರಾಮ ರಾಠೋಡ, ಬುಧೇರಾ ಶಾಲೆಯ ಭುವನೇಶ್ವರಿ, ಸರಸ್ವತಿ, ಸೇರಿದಂತೆ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಹಾಜರಿದ್ದರು.
ಚಟ್ನಳ್ಳಿ ಶಾಲೆಯ ಮುಖ್ಯಗುರು ನಾತುಸಿಂಗ ರಾಠೋಡ ಸ್ವಾಗತಿಸಿದರು. ಶಿಕ್ಷಕರಾದ ನಾಗಶೆಟ್ಟಿ ವಂದಿಸಿದರು.
ನಂತರ 6 ಶಾಲೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಸೆ. 15ರಿಂದ ಅ. 2ರ ವರೆಗೆ ನಡೆಯಲಿರುವ ಸ್ವಚ್ಛತಾ ಹೀ ಸೇವಾ ಆಂದೋಲನ ನಿಮಿತ್ತ ಎಲ್ಲರು ಪ್ರಮಾಣ ಬೋಧನೆ ಮಾಡಿದರು.