ಸಮಾಜ ಒಗ್ಗೂಡಿಸುವದೇ ಧರ್ಮ ಗುರುಗಳ ಕರ್ತವ್ಯವಾಗಲಿ: ರಹಿಮ್ ಖಾನ್

ಬೀದರ: ಡಿ.7:ನಾವೆಲ್ಲರೂ ಒಂದೇ ಎಂಬ ಸದ್ಭಾವವನ್ನು ತುಂಬಿ ಕೊಡುವುದೇ ಧರ್ಮಗುರುಗಳ ನಿಜವಾದ ಕರ್ತವ್ಯವಾಗಿದೆ ಎಂದು ಸ್ಥಳಿಯ ಶಾಸಕ ರಹೀಂ ಖಾನ್ ಅಭಿಪ್ರಾಯ ಪಟ್ಟರು.

ನೌಬಾದ ಸಮಿಪದ ಭಾಲ್ಕಿ ರಸ್ತೆಯಲ್ಲಿರುವ ಜ್ಞಾನಶಿವಯೋಗಾಶ್ರಮದಲ್ಲಿ ಕಾರ್ತೀಕ ಮಾಸ ನಿಮಿತ್ತವಾಗಿ ವಿಶ್ವಶಾಂತಿ ಮತ್ತು ಲೋಕಕಲ್ಯಾಣರ್ಥ ಹಮ್ಮಿಕೊಂಡಿದ್ದ ಸಾಮೂಹಿಕ ಕಾರ್ತೀಕ ದೀಪೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಧರ್ಮವನ್ನು ಮುಂದಿಟ್ಟುಕೊಂಡು ಇಂದು ಸಮಾಜವನ್ನು ಪರಿಗಣಿಸುತ್ತಿರುವುದು ಕಳವಳಕಾರಿ ಸಂಗತಿ. ಸಮಾಜವನ್ನು ಒಡೆದಾಳುವುದು ಸುಲಭ, ಆದರೆ ಜೋಡಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಇಂದು ನಮಗೆ ಬೇಕಾಗಿರುವುದು ಸಮಾಜವನ್ನು ಒಗ್ಗೂಡಿಸುವ ಮೂಲಕ ಪರಸ್ಪರಲ್ಲಿ ಸ್ನೇಹ ಭಾವ ಮೂಡಿಸುವ ಧರ್ಮಗುರಗಳು ಬೇಕೇ ವಿನಃ ಒಡೆಯವವರಲ್ಲ. ಕಾಡಿನಲ್ಲಿದ್ದುಕೊಂಡು ಸಾತ್ವಿಕ ಜೀವನಶೈಲಿಯಿಂದ ಬದುಕುತ್ತ ಸಮಾಜದಲ್ಲಿ ಸದ್ಭಾವ ತುಂಬುವ ನಿಟ್ಟಿನಲ್ಲಿ ನಿರಂತರ ಪರಿಶ್ರಮ ಪಡುತ್ತಿರುವ ಅಪ್ಪಾಜೀಯವರ ಕಾರ್ಯ ನಮ್ಮೆಲರಿಗೂ ಆದರ್ಶ ಪ್ರಾಯವಾಗಿದೆ. ಯಾವುದೇ ಭೇದ ಭಾವ ಮಾಡದೇ ಎಲ್ಲರೂ ನಮ್ಮವರೇ ಎಂದು ಭಾವಿಸಿ ಎಲ್ಲರನ್ನೂ ವಿಶ್ವಾಸಿದೊಂದಿಗೆ ತೆಗೆದುಕೊಂಡು ಹೋಗುತ್ತಿರುವ ಪೂಜ್ಯ ಅಪ್ಪಾಜೀಯವರ ಕಾರ್ಯ ಎಲ್ಲರಿಗೂ ಪ್ರೇರಣೆದಾಯಕವಾಗಿದೆ. ನನ್ನ ಕೈಯಿಂದ ಇಂದು ಕಾತೀರ್ಕ ದೀಪೋತ್ಸವ ಉದ್ಘಾಟಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ದೀಪ ಬೆಳೆಗಿದರೆ ಕತ್ತಲೇ ಕಳೆಯುವಂತೆ ನಮ್ಮೆಲ್ಲರ ಮನಸ್ಸಿನಲ್ಲಿ ಅರಿವೆಂಬ ದೀಪವನ್ನು ಹೊತ್ತಿಸಿ ನಮ್ಮೆಲ್ಲರಲ್ಲಿ ಸದ್ಭಾವ ಎಂಬ ಬೆಳಗನ್ನು ಬೆಳಗುತ್ತಿರುವ ಪೂಜ್ಯರ ಕಾರ್ಯ ಶ್ಲಾಘನೀಯವಾಗಿದೆ ಎಂದು ಬೀದರ ಶಾಸಕ ರಹೀಂ ಖಾನ್ ಶುಭ ಹಾರೈಸಿ ನಿಡಿದರು. ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಡಾ|| ರಾಜಶೇಖ ಶಿಚಾಚಾರ್ಯರು ಮಾತನಾಡಿ ಕಾರ್ತೀಕ ದೀಪಾರಾಧನೆಯಿಂದ ಹೊರಗಿನ ಕತ್ತಲು ಕಳದು ಬೆಳಕು ಚೆಲ್ಲುವುದಲ್ಲದೇ ದೀಪ ಜ್ಞಾನದ ಸಂಕೇತವೂ ಆಗಿರುವುದರಿಂದ ಮನದಲ್ಲಿ ಮನೆ ಮಾಡಿರುವ ಅಜ್ಞಾನವೆಂಬ ಅಂಧಕಾರ ದೂರವಾಗಿ ಸುಜ್ಞಾನವೆಂಬ ಬೆಳಕು ಬೀರುವುದು. ಅದಕ್ಕಾಗಿಯೇ ಕಾರ್ತೀಕ ದೀಪಾರಾಧನೆಗೆ ವಿಶೇಷ ಮಹತ್ವ ನೀಡಲಾಗಿದೆ. ಅದರಲ್ಲೂ ಸಾರ್ವತ್ರಿಕವಾಗಿ ಸಾಮೂಹಿಕವಾಗಿ ಕಾರ್ತೀಕ ದೀಪೋತ್ಸವ ಮಾಡುವುದರಿಂದ ಸಮಾಜದಲ್ಲಿ ವರ್ಣವರ್ಗಭೇಧಗಳು ದೂರಾಗಿ ಎಲ್ಲರಲ್ಲಿ ಸ್ನೇಹ, ಭಾತೃತ್ವಗಳೆಂಬ ಸದ್ಭಾವ ಬೆಳೆದು ಬರುವುದು ಇದರಿಂದ ಸಮಾಜ, ನಾಡು ಮತ್ತು ದೇಶದಲ್ಲಿ ಶಾಂತಿ, ಸಮೃದ್ಧಿ ಬೆಳೆದು ಬರುತ್ತದೆ ಎಂದು ಶ್ರೀಗಳು ಹೇಳಿದರು.

ಇದಕ್ಕೂ ಮುಂಚೆ ಗೋಪೂಜೆ ನೇರವರಿಸಲಾಯಿತು. ನಗರಸಭೆ ಸದಸ್ಯರಾದ ಶ್ರೀಮತಿ ಮಹಾದೇವಿ ಹುಮನಾಬಾದೆ, ವೀರಶೆಟ್ಟಿ ಭಂಗೂರೆ ಮತ್ತು ಮಹಾದಪ್ಪಾ ಭಂಗೂರೆ, ಕುಶಲರಾವ ಗೌರಶೆಟ್ಟಿ, ಶ್ರೀಮಂತ ಧಬಾಲೆ, ಸಂಗಶೆಟ್ಟಿ ಚಿದ್ರಿ, ಚಂದ್ರಪ್ಪ ಭಂಗೂರೆ ಅಥಿತಿಗಳಾಗಿ ಭಾಗವಹಿಸಿದ್ದರು. ಗೋಶಾಲೆಯ ಸಂಗಮೇಶ ಬಿರಾದಾರ ಅಧ್ಯಕ್ಷತೆ ವಹಿಸಿದರು ಗಂಗಥರ ಸ್ವಾಮಿ ಪೌರೋಹಿತ್ಯವನ್ನು ನೆರವೇರಿಸಿದರು, ಕಂಟೆಪ್ಪ ಭಂಗೂರೆ ಎಲ್ಲರನ್ನೂ ಸ್ವಾಗತಿಸಿದರು, ಶ್ರೀಮತಿ ಬೇಬಿನಂದಾ ಶ್ರೀ ರಾಮೇಶ್ವರ ದಾಸೋಹ ಸೇವೆಯನ್ನು ನೇರವರಿಸಿದ್ದರು. ಪಾಂಡುರಂಗ ಪಾಂಚಾಳ ನಿರೂಪಿಸಿದರು, ಚಿದ್ರಿ ಮಹಿಳಾ ಮಂಡಳಿಯಿಂದ ಭಜನೆ ನಡೆಯಿತು, ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸಾವಿರಾರು ದೀಪಗಳನ್ನು ಬೆಳಗಿದರು.