ಸಮಾಜ ಅಭಿವೃದ್ಧಿಗೆ ಕೈ ಜೋಡಿಸಿ ಯುವಕರಿಗೆ ಶ್ರೀಗಳ ಕರೆ

ಕೆ.ಆರ್.ಪುರ, ನ.೬- ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಯುವಕರು ಶ್ರಮಿಸುವಂತೆ ಆದಿಚುಂಚನಗಿರಿ ಮಠದ ಪಿಠಾಧ್ಯಕ್ಷ ಶ್ರೀ ನಿರ್ಮಾಲಾನಂದ ಸ್ವಾಮಿಜಿ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಹೂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಸರ್ವತೋಮುಖ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ,ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸುವಂತೆ ಕಿವಿಮಾತು ಹೇಳಿದರು.
ದೇಶದ ಅಭಿವೃದ್ಧಿ ಹಾಗೂ ಪ್ರಗತಿಗೆ ಯುವಕರ ಪಾತ್ರ ಅಮೋಘವಾಗಿದ್ದು ಯುವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಲಿ, ಸಂಸದ ಮುನಿಸ್ವಾಮಿ,ಆಯೋಜಕ ಕಬ್ಬಡ್ಡಿಪಿಳ್ಳಪ್ಪ, ಕ್ಷೇತ್ರದ ಅಧ್ಯಕ್ಷ ಮನೋಹರ ರೆಡ್ಡಿ, ಮಾಜಿ ಅಧ್ಯಕ್ಷ ರಾಜಾರೆಡ್ಡಿ,ವೆಂಕಟಸ್ವಾಮಿ ರೆಡ್ಡಿ, ಚನ್ನಸಂದ್ರ ಚಂದ್ರಶೇಖರ, ರಾಜೇಶ್, ಪ್ರಶಾಂತ ರೆಡ್ಡಿ, ಮಹೇಂದ್ರ ಮೋದಿ ಇದ್ದರು.