ಸಮಾಜ ಅಧ್ಯಯನ ವಿಷಯದಲ್ಲಿ ಏಕಕಾಲಕ್ಕೆ ಐದು ಕೃತಿ ರಚಿಸಿದ್ದು ಶ್ಲಾಘನಿಯಃ ಪ್ರೊ.ಎಸ್.ಎ. ಖಾಜಿ

ವಿಜಯಪುರ, ಜು.21-ಸಮಾಜ ಅಧ್ಯಯನ ವಿಷಯ ಅಷ್ಟೊಂದು ಸರಳ ವಿಷಯವಲ್ಲ. ಇದು ತುಂಬಾ ಸವಾಲಿನ ವಿಷಯ ಇಂತಹ ಕ್ಲಿಷ್ಟ ವಿಷಯ ಕುರಿತು ಏಕಕಾಲದಲ್ಲಿ ಐದು ಕೃತಿಗಳನ್ನು ರಚಿಸಿ, ಬಿಡುಗಡೆಗೊಳಿಸಿರುವ ಡಾ. ರಮೇಶ ಸೋನಕಾಂಬಳೆಯವರ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಪ್ರೊ.ಎಸ್.ಎ. ಖಾಜಿ ಹೇಳಿದರು.
ಅವರು ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ರಮೇಶ ಸೋನಕಾಂಬಳೆ ಅವರು ಬರೆದಿರುವ ಪುಸ್ತPಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈ ಪುಸ್ತಕಗಳು ಸಮಾಜ ಕಾರ್ಯ ಅಧ್ಯಯನವನ್ನು ಒದುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಕುಲಸಚಿವ ಪ್ರೊ.ರಮೇಶ ಕೆ. ಮಾತನಾಡಿ, ಇಂಥಹ ಲೇಖಕರಿಗೆ, ಉಪನ್ಯಾಸಕರಿಗೆ ವಿಶ್ವವಿದ್ಯಾನಿಲಯವು ಬೆನ್ನೆಲುಬಾಗಿ ನಿಂತು ಸಹಾಯ, ಬೆಂಬಲ ನೀಡುತ್ತದೆ ಎಂದು ಹೇಳಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಪ್ರೊ. ಪಿ. ಕಣ್ಣನ್ ಮಾತನಾಡಿ, ಕೃತಿಯನ್ನು ಕೊಂಡು ಓದುವ ಹವ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಆಗ ನಾವು ಸಂಪೂರ್ಣಜ್ಞಾನವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನ ನಿಕಾಯದಡೀನ ಪ್ರೊ.ಡಿ.ಎಂ.ಮದರಿ ಮಾತನಾಡಿ, ಈ ಕೃತಿಗಳಲ್ಲಿರುವ ಮಾಹಿತಿಯನ್ನು ವಿದ್ಯಾಥಿನಿಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಇದೆ ಸಂದರ್ಭದಲ್ಲಿ ಲೇಖಕ ಡಾ.ರಮೇಶ ಎಂ. ಸೋನಕಾಂಬಳೆ ಹಾಗೂ ಶ್ರೀಮತಿ ಉರ್ಮಿಳಾ ಸೋನ ಕಾಂಬಳೆಯವರನ್ನು ವಿವಿಧ ವಿಭಾಗಗಳ ಪ್ರಾದ್ಯಾಪಕರು ಸನ್ಮಾಸಿದರು. ಕಾರ್ಯಕ್ರಮದಲ್ಲಿ ಪ್ರೊ.ಜಿ. ಬಿ. ಸೋನಾರ, ಪ್ರೊ. ಲಕ್ಷ್ಮೀದೇವಿ ವೈ., ಪ್ರೊ. ಶಾಂತಾದೇವಿ ಟಿ., ಡಾ.ಅಶೋಕಕುಮಾರ ಸುರಪುರ, ಡಾ.ಎಂ.ಪಿ ಬಳಿಗಾರ, ಪ್ರೊ.ಆರ್. ವಿ. ಗಂಗಶೆಟ್ಟಿ, ಹಾಗೂ ಮತ್ತೀತರ ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕೃತಿಗಳ ಲೇಖಕ ಡಾ.ರಮೇಶ ಎಂ. ಸೋನಕಾಂಬಳೆ ಅತಿಥಿಗಳನ್ನು ಸ್ವಾಗತಿಸಿದರು.ಸಹಾಯಕ ಪ್ರಾಧ್ಯಾಪಕಿ ಡಾ.ಕಲಾವತಿ ಹೆಚ್.ಕಾಂಬಳೆ ವಂದಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ಡಾ. ವಿಷ್ಣು ಶಿಂದೆ ಕಾರ್ಯಕ್ರಮವನ್ನು ರೂಪಿಸಿದರು.