ಸಮಾಜೋಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಪ್ರಾಪ್ತಿ

ಭಾಲ್ಕಿ:ಮೇ.27:ವ್ಯಕ್ತಿಯೂ ತನ್ನ ಕುಟುಂಬದ ಕಾರ್ಯ ಚಟುವಟಿಕೆಗಳ ಜೊತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜಕ್ಕೆ ತನ್ನದೇಯಾದ ಕೊಡುಗೆ ನೀಡುವುದರಲ್ಲಿ ನೆಮ್ಮದಿ ಲಭಿಸುತ್ತದೆ ಎಂದು ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿ ಶಿವ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತುಮಕೂರಿನಲ್ಲಿ ನಡೆದ ಗುರು ವಂದನಾ ಕಾರ್ಯಕ್ರಮದಲ್ಲಿ ಬೀದರ್ ನ ಶ್ರೀ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದ ವತಿಯಿಂದ ಗುರು ವಂದನೆ ಸ್ವೀಕರಿಸಿ ಮಾತನಮಾಡಿದರು.

ಬೀದರ್ ಜಿಲ್ಲೆಯಲ್ಲಿ ಶ್ರೀ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘ ಮೇಲಿಂದ ಮೇಲೆ ಸಮಾಜೋಪಯೋಗಿ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತಸ ತರಿಸಿದೆ ಎಂದು ತಿಳಿಸಿದರು.

ನಮ್ಮ ಮಠದ ಹಳೇ ವಿದ್ಯಾರ್ಥಿಗಳು ಸಮಾಜದ ಎಲ್ಲಾ ರಂಗಗಳಲ್ಲಿ ತೊಡಗಿಸಿಕೊಂಡು ಗುರುವಾಣಿಯಂತೆ ಪರೋಪಕಾರದ ಬದುಕು ನಡೆಸುತ್ತಿರುವುದು
ಬಹಳ ಸಂತೋಷದ ವಿಷಯ ಎಂದರು.

ಸಂಘದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಮಾತನಾಡಿ, ಸಿದ್ದಗಂಗಾ ಮಠವು ನಾಡಿಗೆ ಆದರ್ಶ ಪ್ರಾಯವಾಗಿದೆ. ಲಿಂ.ಶಿವಕುಮಾರ ಸ್ವಾಮೀಜಿ ಕಾರ್ಯ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಶ್ರೀಮಠ ವಿದ್ಯಾರ್ಥಿಗಳಿಗೆ ಉತ್ತಮವಾದ ಸಂಸ್ಕಾರ ನೀಡಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪ್ರಭಾ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದತ್ತಾತ್ರಿ ಹಂಪಾ ಪ್ರಮುಖರಾದ ಬಾಪುರಾವ್ ದೇಶಮುಖ, ಪವನಕುಮಾರ ಬಿರಾದಾರ ಕದಲಾಬಾದ, ರಾಜಕುಮಾರ ನಾಯಿಕೊಡೆ, ಸಂತೋಷ ಪೆÇಲೀಸ್ ಪಾಟೀಲ, ಬಸವರಾಜ ಕರೆಪ್ಪನೋರ್, ಜೋತಿಷ್ಯ ಹಲ್ಬರ್ಗೆ, ಸುಭಾಷ ಪಾಟೀಲ ಇದ್ದರು.