ಸಮಾಜಸೇವೆಯೇ ಲಯನ್ಸ್ ಸಂಸ್ಥೆಯ ಮುಖ್ಯಗುರಿ   

                                      

 ಸೊರಬ.:ಲಯನ್ಸ್ ಸಂಸ್ಥೆಯು ಸಮಾಜಸೇವೆಯನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ ಎಂದು ಲಯನ್ಸ್  ಇಂಟರ್ನಲ್ ಜಿಲ್ಲಾ ೩೧೭ ಸಿ ರಾಜ್ಯಪಾಲ ಎಂಜೆಎಫ್ ಲಯನ್ ಡಾ.ಎಂ ಕೆ ಭಟ್ ಹೇಳಿದರು.   ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ನ ಸಂಸ್ಥಾಪಕರ ದಿನಾಚರಣೆ ಮತ್ತು ನೂತನ ಕ್ಲಬ್ಬು ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಪ್ರಶಸ್ತಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಗತ್ತಿನಲ್ಲಿ ಸಮಾಜ ಸೇವೆಗಾಗಿಯೇ ಮುಡುಪಾಗಿರುವ ಸಂಸ್ಥೆ ಲಯನ್ಸ್ ಆಗಿದ್ದು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ತನ್ನ ಮಹತ್ವವನ್ನು ಉಳಿಸಿಕೊಂಡು ಬರುತ್ತಿದೆ ಎಂದರು.ಸೊರಬ ಲಯನ್ಸ್ ಕ್ಲಬ್ ನ ನೂತನ ಸದಸ್ಯರಾಗಿ ಎಸ್ ಕೃಷ್ಣಾನಂದ,ಸಂದೀಪ್ ಕುಮಾರ್,ಷಣ್ಮುಖಾಚಾರ್, ಸುಬ್ರಹ್ಮಣ್ಯ ಗುಡಿಗಾರ್, ಪ್ರಶಾಂತ್ ಎಚ್. ಎಂ. ಡಾ.ರಾಕೇಶ್ ಎಚ್.ಪ್ರತಿಜ್ಞಾವಿಧಿ ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಸಂಸ್ಥಾಪಕ ಸದಸ್ಯ ಎಚ್ ಎಸ್ ಮಂಜಪ್ಪ,ಪ್ರತಿಮಾ ಹೆಚ್.ಎಂ,ವೇದಮೂರ್ತಿ,ಕೆ ಶಿವಾನಂದ್,ಟಿ ಆರ್ ಸುರೇಶ್,ಶ್ರುತಿ  ಮತ್ತಿತರರಿದ್ದರು.