
ಶಹಾಬಾದ,ಏ.2- ವಿದ್ಯಾರ್ಥಿ- ಉನ್ನತ ನೀತಿ-ಸಂಸ್ಕøತಿಯ ಆಧಾರದ ಮೇಲೆ ಸಮಾಜವಾದಿ ಸಮಾಜದ ಸ್ಥಾಪನೆಯಿಂದ ಮಾತ್ರ ಸಮಾನತೆಯ ಸಮಾಜವನ್ನು ಕಟ್ಟಬಹುದೆಂಬ ಸ್ಪಷ್ಟವಾದ ಅಭಿಪ್ರಾಯವನ್ನು ಭಗತಸಿಂಗ್ ಅವರು ಹೊಂದಿದ್ದರು ಎಂದು ಎಸ್.ಯು.ಸಿ.ಐ (ಸಿ) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿಗ ಕಾ. ಗಣಪತರಾವ ಕೆ ಮಾನೆ ಹೇಳಿದರು.
ಬ್ರಿಟಿಷರನ್ನು ಭಾರತದಿಂದ ಹೊರದೂಡಿದ ಮಾತ್ರಕ್ಕೆ ದೇಶದ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗದು. ಉನ್ನತ ನೀತಿ-ಸಂಸ್ಕøತಿಯ ಆಧಾರದ ಮೇಲೆ ಸಮಾಜವಾದಿ ಸಮಾಜದ ಸ್ಥಾಪನೆಯಿಂದ ಮಾತ್ರ ಸಮಾನತೆಯ ಸಮಾಜವನ್ನು ಕಟ್ಟಬಹುದೆಂಬ ಸ್ಪಷ್ಟವಾದ ಅಭಿಪ್ರಾಯವನ್ನು ಭಗತಸಿಂಗ್ ಹೊಂದಿದ್ದರು. ಆದರೆ, ಇಂದು ದೇಶವು ಸ್ವತಂತ್ರಗೊಂಡು 75 ವರ್ಷಗಳು ಗತಿಸಿದರೂ ಸಹ ಭಗತಸಿಂಗ್ ಕಂಡ ಕನಸು ನನಸಾಗದೆ ಉಳಿದಿದೆ.
ನಿರುದ್ಯೋಗ, ಬಡತನ, ಅನಕ್ಷರತೆ, ಕೋಮುಗಲಭೆ, ಮಹಿಳೆಯರ ಮೇಲಿನ ಅತ್ಯಾಚಾರ, ಭ್ರಷ್ಟಾಚಾರ, ಬೆಲೆಯೇರಿಕೆಯಂತಹ ಸಮಸ್ಯೆಗಳು ಜನಸಾಮಾನ್ಯರ ಜೀವನವನ್ನು ಪ್ರಪಾತಕ್ಕೆ ನೂಕಿದೆ ಎಂದರು.
ಅವರು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್, ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಜೇಷನ್ ಹಾಗೂ ಆಲ್ ಇಂಡಿಯಾ ಮಹಿಳಾ ಸಾಂಸ್ಕøತಿಕ ಸಂಘಟನೆ ಶಹಾಬಾದ ಸ್ಥಳೀಯ ಸಮಿತಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಯಾದ ಶಹೀದ್ ಭಗತಸಿಂಗರವರ 92ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ನಗರದಲ್ಲಿ ಸಂಜೆ ಜರುಗಿದ ಪಂಜಿನ ಮೆರವಣಿಗೆಯ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಇಂದಿನ ಎಲ್ಲಾ ದೇಶಪ್ರೇಮಿ ಜನತೆ ಬಂಡವಾಳಶಾಹಿ ವರ್ಗದ ಹೀನ ಪಿತೂರಿಯನ್ನು ಸೋಲಿಸಬೇಕಾಗಿದೆ. ಸ್ವಾತಂತ್ರ್ಯ ಆಂದೋಲನದಲ್ಲಿ ಭಗತಸಿಂಗ್ ಬಿಟ್ಟು ಹೋದ ಪರಂಪರೆಯನ್ನು ಮುಂದುವರೆಸಿಕೊಂಡು, ಬಂಡವಾಳಶಾಹಿ ವರ್ಗಗಳ ಸವಾಲಿಗೆ ಸಮರ್ಥವಾಗಿ ಉತ್ತರಿಸಬೇಕಾಗಿದೆ. ಆಳುವ ವರ್ಗಗಳ ಕುತಂತ್ರಗಳನ್ನು ಮೀರಿ, ಧರ್ಮ, ಜಾತಿ, ಪ್ರಾಂತ್ಯ, ಭಾಷೆಗಳ ಆಧಾರದ ಮೇಲೆ ವಿಭಜನೆಗೊಳ್ಳದೆ, ಒಗ್ಗಟಾಗಿ ಅನ್ಯಾಯಗಳ ವಿರುದ್ಧ ನಿರಂತರ ಹೋರಾಟಗಳನ್ನು ಬೆಳೆಸುತ್ತಾ ಭಗತಸಿಂಗ್, ನೇತಾಜಿ ಮತ್ತಿತರ ಕ್ರಾಂತಿಕಾರಿಗಳು ಕಂಡ ಸಮೃದ್ಧ, ಶೋಷಣಾರಹಿತ ನವಸಮಾಜದ ಕನಸನ್ನು ನನಸು ಮಾಡಬೇಕಾಗಿದೆ. ಆ ಉದಾತ್ತ ಉದ್ದೇಶಕ್ಕಾಗಿ ನಮ್ಮ ಜೀವನವನ್ನು ಸಮರ್ಪಿಸಿ ಕೊಳ್ಳಬೇಕಾಗಿದೆ. ಅದುವೇ ಭಗತಸಿಂಗ್ ಅವರಿಗೆ ನಾವು ಸಲ್ಲಿಸುವ ನೈಜ ಶ್ರದ್ಧಾಂಜಲಿ ಎಂದು ಹೇಳಿದರು.
ಎ.ಐ.ಕೆ.ಕೆ.ಎಮ್.ಎಸ್ ನ ಸ್ಥಳೀಯ ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಆತ್ನೂರ ರವರು ಮಾತನಾಡಿ, ನಮ್ಮ ಸಮಾಜ ಇಂದು ಒಂದು ಸರ್ವಾಂಗೀಣ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ತಮ್ಮ ಕ್ಷುಲ್ಲಕ ರಾಜಕೀಯ ಹಿತಾಸಕ್ತಿಗಾಗಿ ಹಾಗೂ ಬಂಡವಾಳಶಾಹಿಗಳ ಹಿತಕಾಯಲು ಧರ್ಮ, ಜಾತಿ, ಪ್ರಾಂತೀಯ, ಭಾಷಾಂಧ ಮನೋಭಾವನೆಗಳನ್ನು ಕೆರಳಿಸಿ ಗಲಭೆ ಸೃಷ್ಟಿಸುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ-ಯುವಜನ ಹಾಗೂ ಜನಸಾಮಾನ್ಯರ ಧ್ವನಿಯನ್ನು ಪೋಲಿಸರ ಲಾಠಿ ಮತ್ತು ಗುಂಡೇಟಿನಿಂದ ಅಡಗಿಸಲು ಪ್ರಯತ್ನಿಸುತ್ತಿದೆ. ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಜನಸಾಮಾನ್ಯರÀನ್ನು ದೇಶದ್ರೋಹಿಗಳೆಂದು ಜೈಲಿಗೆ ಹಾಕುತ್ತಿರುವ ಸರ್ಕಾರದ ಕ್ರಮವನ್ನು ನೋಡಿದಾರೆ ಜರ್ಮನಿಯ ಮಹಾಕ್ರೂರಿ ಹಿಟ್ಲರ್‍ನ ಫ್ಯಾಸಿಸಂ ನೆನಪಾಗುತ್ತದೆ ಎಂದುರು.
ಎಐಎಂಎಸ್‍ಎಸ್ ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಡಿವಾಳ ರವರು ಮಾತನಾಡಿ, ಉನ್ನತ ನೀತಿ ಸಂಸ್ಕøತಿಯನ್ನು ಬೆಳೆಸಬೇಕಾದ ಇಂದಿನ ಬಹುತೇಕ ಸಿನಿಮಾಗಳು ಆಶ್ಲೀಲತೆ, ರಕ್ತಪಾತ ಹಾಗೂ ಕ್ರೂರತೆಯ ಅಟ್ಟಹಾಸವನ್ನು ತೋರಿಸುವುದರ ಮೂಲಕ ವಿದ್ಯಾರ್ಥಿ-ಯುವಜನರನ್ನು ದಾರಿತಪ್ಪಸುತ್ತಿವೆ, ಅಲ್ಲದೇ ಸಿನಿಮಾ ಹಿರೋಗಳು ನಮಗೆ ಆದರ್ಶವಾಗದೇ ದೇಶಕ್ಕಾಗಿ ಬಲಿದಾನ ನೀಡಿದ ನೇತಾಜಿ ಸುಭಾಷಚಂದ್ರ ಬೋಸ್, ಭಗತಸಿಂಗ್ ರಂತಹ ಕ್ರಾಂತಿಕಾರಿಗಳು ನಮ್ಮ ವಿದ್ಯಾರ್ಥಿ-ಯುವಜನರಿಗೆ ಆದರ್ಶವಾಗಿ ತೆಗೆದುಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾರಂಭದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಭಗತಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂಘಟನಕಾರರಿಗೆ ಪಂಜು ನೀಡುವುದರ ಮೂಲಕ ಪಂಜಿನ ಮೆರವಣಿಗೆಯನ್ನು ಗಣ್ಯವ್ಯಕ್ತಿಗಳಾದ ರಮೇಶ ಪವಾರ ಅವರು ಉದ್ಘಾಟಿಸಿದರು. ಅತಿಥಿಗಳಾಗಿ ಂIಆಙಔ ನ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್.ಎಚ್ ಹಾಗೂ ಎಐಡಿವೈಓ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದು ಚೌಧರಿಯವರು ಮಾತನಾಡಿದರು.
ಪಂಜಿನ ಮೆರವಣಿಗೆಯಲ್ಲಿ ಸಂಘಟನೆಗಳ ನಾಯಕರಾದ ಮಹಾದೇವಿ ಮಾನೆ, ನೀಲಕಂಠ ಹುಲಿ, ರಘು ಪವಾರ, ರಮೇಶ ದೇವಕರ್, ಆನಂದ, ಮಹಾದೇವಿ ಆತ್ನೂರ, ರಾಧಿಕ ಚೌಧರಿ, ತೇಜಸ್ ಇಬ್ರಾಹಿಂಪೂರ, ಅಜಯ ಗುರುಜಾಲಕರ್ ಹಾಗೂ ಹಲವು ವಿದ್ಯಾರ್ಥಿ-ಯುವಜನ-ಮಹಿಳೆಯರು ಭಾಗವಹಿಸಿದ್ದರು. ಬಸವೇಶ್ವರ ವೃತ್ತದಿಂದ ಮುಖ್ಯ ರಸ್ತೆ ಮೂಲಕ ರೈಲ್ವೆ ನಿಲ್ದಾಣದ ವರೆಗೆ ಮೆರವಣಿಗೆಯನ್ನು ನಡೆಸಲಾಯಿತು. ಎಐಡಿಎಸ್‍ಓ ಸ್ಥಳೀಯ ಸಮಿತಿಯ ಅಧ್ಯಕ್ಷರಾದ ಕಾಮ್ರೇಡ್ ಕಿರಣ ಮಾನೆ ಯವರು ಅಧ್ಯಕ್ಷತೆ ವಹಿಸಿದ್ದರು.