ಸಮಾಜವಾದಿ ಭಾರತ ನಿರ್ಮಿಸಲು ವಿದ್ಯಾರ್ಥಿ ಜನಗಳ ಸಂಕಲ್ಪ

ದಾವಣಗೆರೆ. ಮಾ.೨೪; ನಗರದ ರೈಲ್ವೆ ನಿಲ್ದಾಣದ ಮುಂಬಾಗ ಭಗತ್ ಸಿಂಗ್ ರವರ ಪುತ್ಥಳಿ ಎದುರು ಎಐಡಿಎಸ್ ಒ,ಎಐಡಿವೈಒ ಮತ್ತು ಎಐಎಂಎಸ್ ಎಸ್   ಸಂಘಟನೆಗಳಿಂದ 93ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ  ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಕೈದಾಳೆ ಮಾತನಾಡುತ್ತ ಇಲ್ಲಿಗೆ ಸ್ವಾತಂತ್ರ ಬಂದು 75 ವರ್ಷ ಕಳೆಯುತ್ತಾ ಬಂತು ಬದಲಾವಣೆ ಯಾರಿಗೆ ಬಂದಿದೆ.ಇದೇನಾ ಭಗತ್ ಸಿಂಗ್ ರವರ ಕನಸು.ಭಗತ್ ಸಿಂಗ್ ಅವರ ದಿನವನ್ನು  ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿಲ್ಲ ಬದಲು  ಅವರ ಅಭೂತ ಪೂರ್ವ ಹೋರಾಟ ಉನ್ನತವಾದಂತ ನೀತಿ ನೈತಿಕತೆ ಸಂಸ್ಕೃತಿ ಮೌಲ್ಯವನ್ನು ಎತ್ತಿ ಹಿಡಿಯುವಲ್ಲಿ ಇಡೀ ಜನಸಮುದಾಯಕ್ಕೆ ಭಗತ್ ಸಿಂಗ್  ಆದರ್ಶವಾಗಿದ್ದಾರೆ. ಅವರಿಗೆ ವರ್ಗ ಸಂಘರ್ಷದಲ್ಲಿ ನಂಬಿಕೆ ಇತ್ತು ಕೇವಲ ಬ್ರಿಟಿಷರನ್ನು ಭಾರತದಿಂದ ಹೊಡೆದೋಡಿಸುವುದು ಅವರ ಗುರಿಯಾಗಿರಲಿಲ್ಲ, ಆ ಸ್ಥಾನದಲ್ಲಿ ನಮ್ಮ ದೇಶದ ದೊಡ್ಡ ದೊಡ್ಡ ಬಂಡವಾಳಿಗರು ನಮ್ಮ ದೇಶದ ಜನತೆಯನ್ನು ಶೋಷಣೆ ಮಾಡುತ್ತಾರೆ ಎಂದು ಅಂದೇ ಅರಿತಿದ್ದ ಭಗತ್ ಸಿಂಘರು ತಮ್ಮ ಕ್ರಾಂತಿಕಾರಿ ಸಂಘಟನೆಯಾದ “ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್  ಅನ್ನು “ಹಿಂದುಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಆಗಿ ಬದಲಾಯಿಸುತ್ತಾರೆ.ಈ ಹಿನ್ನೆಲೆಯಲ್ಲಿ ಅವರು ಸಮಾಜವಾದಿ ಭಾರತವನ್ನು ಕಟ್ಟುವ  ದೃಢಸಂಕಲ್ಪದಿಂದ ಎಲ್ಲಿಯೂ ಸಂಧಾನ ಮಾಡಿಕೊಳ್ಳದೆ ದಿಟ್ಟತನದಿಂದ ಜನಸಾಮಾನ್ಯರ ಹೋರಾಟವನ್ನು ಕಟ್ಟಲು ಮುಂದಾದರು. ಇಂದು ಸಾವಿರಾರು  ಸಮಸ್ಯೆಗಳನ್ನ ನಮ್ಮ ಜನತೆ ಎದುರಿಸುತ್ತಿದ್ದಾರೆ ಮತ್ತೆ ನಾವೆಲ್ಲರೂ ನಮ್ಮ ಜಾತಿ ಧರ್ಮಗಳನ್ನ ಮರೆತು ಹೋರಾಟವನ್ನು ಕಟ್ಟುವಂತಹ ಅವಶ್ಯಕತೆ ಇದೆ. ಭಗತ್ ಸಿಂಗ್ ಅವರ ಕನಸಿನಂತೆ ನಮ್ಮ ದೇಶದಲ್ಲಿ ಸಮಾಜವನ್ನು ತರುವಂತಹ ಕನಸನ್ನು ಹೊತ್ತ ಓರ್ವ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರು ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಅನುಶೀಲನ್ ಸಮಿತಿಯಲ್ಲಿ ಇದ್ದವರು ಮತ್ತು ಮಾರ್ಕ್ಸ್ ವಾದಿ ಚಿಂತಕರು ಕಾಮ್ರಾಡ್ ಶಿವದಾಸ್ ಗೋಷ್ ರವರು SUCI (C) ನೈಜ್ಯ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಿದರು. ಆ ಮೂಲಕ ಭಾರತ ದೇಶದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ಜನತೆಗೆ ಕರೆಕೊಟ್ಟರು. ಇಂದು ನಡೆಯುತ್ತಿರುವ ಅನ್ಯಾಯದ ವಿರುದ್ಧ ಜನಗಳು ಒಗ್ಗಟ್ಟಾಗಿ ಹೋರಾಟವನ್ನು ಕಟ್ಟೋಣ ಎಂದು ಮಾತನಾಡಿದರು.ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ  ಮಾತನಾಡುತ್ತಾ ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಕೆಚ್ಚೆದೆಯಿಂದ ಹೋರಾಡಿದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಹೋರಾಟದ ಸ್ಪೂರ್ತಿ ಎಂದಿಗೂ ಜೀವಂತ. ನಮ್ಮ ದೇಶವನ್ನು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿಗೊಳಿಸಿ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ  ತನ್ನ 23 ನೇ ವಯಸ್ಸಿಗೆ ನಗುನಗುತ್ತಾ ಗಲ್ಗಂಭವನ್ನೇರಿದ ಭಗತ್ ಸಿಂಗ್ ಅವರ ಆದರ್ಶ ಮತ್ತು ಉದಾತ್ತ ವಿಚಾರಗಳು ಇಂದಿಗೂ ಪ್ರಸ್ತುತ ಎಂದರು.