ಸಮಾಜವಾದಿ ಕ್ರಾಂತಿಯಿಂದ ಸಮಾಜದಲ್ಲಿ ಬದಲಾವಣೆ: ರಾಮಣ್ಣ

ಶಹಾಬಾದ:ನ.9: ಸಮಾಜವಾದಿ ಸಮಾಜವನ್ನು ನವೆಂಬರ ಮಹಾಕ್ರಾಂತಿಯ ಸಂಘಟಿಸುವ ಮೂಲಕ ಮಹಾನ್ ಲೆನಿನ್ ಮತ್ತು ಸ್ಟಾಲಿನ್ ಈ ಐತಿಹಾಸಿಕ ಗುರಿಯನ್ನು ರಷ್ಯಾದಲ್ಲಿ ಕಾರ್ಯರೂಪಕ್ಕೆ ತಂದರು ಎಂದು ಎಸ್‍ಯುಸಿಐ ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ಣ ಎಸ್.ಇಬ್ರಾಹಿಂಪೂರ ಹೇಳಿದರು

ನಗರದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮುನಿಷ್ಟ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ, ನವೆಂಬರ ಮಹಾಕ್ರಾಂತಿಯ 103 ನೇ ವಾರ್ಷಿಕೊತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಾನವ ಸಮಾಜ ಇತಿಹಾಸದಲ್ಲಿಯೇ ಮೊಟ್ಟಮೋದಲ ಬಾರಿಗೆ ಎಲ್ಲಾ ರೀತಿಯಾ ವರ್ಗಶೋಷಣೆ ಮತ್ತು ದಬ್ಬಾಳಿಕೆ ಯಿಂದ ಮುಕ್ತಗೊಳಿಸಿ ಐತಿಹಾಸಿಕ ಸಮಾಜವಾದ ರಾಷ್ರ್ಟ ಗುರಿಯನ್ನು ಕಾರ್ಯರೂಪಕ್ಕೆ ತಂದರು. ಮಾಕ್ರ್ಸವಾದ ಲೆನಿನವಾದದ ನಿರ್ದಷ್ಟ ಅಳವಡಿಕೆಯ ಆಧಾರದಲ್ಲಿ ಸಮಾಜವಾದಿ ಸಮಾಜವು ಆರ್ಥಿಕವಾಗಿ, ರಾಜಿಕೀಯವಾಗಿ, ಸಾಂಸ್ಕøತಿಕವಾಗಿ ಎಷ್ಟರ ಮಟ್ಟಿಗೆ ಪ್ರಗತಿ ಸಾದಿಸಿತ್ತೆಂದರೆ ಅದು ತನ್ನೆಲ್ಲ ಜನತೆಗೆ ಉದ್ಯೋಗವನ್ನು ಒದಗಿಸಿತ್ತು. ಹಸಿವು-ಭಿಕ್ಷಾಟನೆ-ನಿರುದ್ಯೋಗ, ರಾಷ್ಟೀಯ ಮತ್ತು ಜನಂಗೀಯಾ ಕಲಹಗಳು, ಪುರುಷರು ಮತ್ತು ಮಹಿಳೆಯರ ನಡುವಣ ಅಸಮಾನತೆಯನ್ನು ನಿರ್ಮೂಲನೆ ಮಾಡಿತು ಎಂದು ತಿಳಿಸಿದರು.
ಸ್ಥಳಿಯ ಕಾರ್ಯದರ್ಶಿ ಗಣಪತ್‍ರಾವ್ ಮಾನೆ ಮಾತನಾಡಿ, ದುಡಿಯು ಜನತೆಗೆ ಸ್ವಾತಂತ್ರ್ಯ ಮತ್ತು ಪ್ರಾಜಾತಾಂತ್ರಿಕ ಹಕ್ಕುಗಳು, ಅಗ್ಗದ ಬೆಲೆಯಲ್ಲಿ ಅಗತ್ಯ ವಸ್ತುಗಳು ,ಎಲ್ಲಾರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಮುಂತಾದವುಗಳು ಒದಗುವಂತೆ ಮಾಡಿದರು. ಮುಂದವರೆದ ಅವರು ಭಾರತದ ಮಹಾನ್ ರವಿಂದ್ರನಾಥ ಟಾಗೊರ್, ಕರ್ನಾಟಕದ ಬಿಚೀ ರವರು ಬೇಟಿನೀಡಿ ನಾನು ನಿಜವಾದ ಸ್ವರ್ಗ ರಷ್ಯದÀಲ್ಲಿ ನೋಡಿದೆ ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇಂತಹ ಸಮಾಜವಾದಿ ಕ್ರಾಂತಿÀಯ ಪ್ರಭಾವವು ಭಗತ್ ಸಿಂಗ್, ನೇತಾಜಿ,ಚಂದ್ರಶೇಖರ ಅಜಾದ ರಂತಹ ಕ್ರಾಂತಿಕಾರಿಗಳ ಮೇಲೆ ಬಹಳ ಪರಿಣಾಮ ಬಿರಿತು. ಆದ್ದರಿಂದ ನಾವು ಯುವಜನರು ನವೆಂಬರ ಮಹಾಕ್ರಾಂತಿಯ ಇತಿಹಾಸ ತಿಳಿದುಕೊಡು ಭಾರತದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೆರಿಸಲು ಮುಂದೆ ಬರಬೇಕೆಂದು ಕರೆ ನೀಡಿದರು.

ಗುಂಡಮ್ಮ ಮಡಿವಾಳ ರವರು ಪ್ರಾಸ್ತವಿಕವಾಗಿ ಮಾತನಾಡಿದರು, ಅಧ್ಯಕ್ಷತೆಯನ್ನು ರಾಘವೇಂದ್ರ ಎಮ್.ಜಿ ವಹಿಸದ್ದರು. ಜಗನ್ನಾಥ ಎಸ್,ಎಚ್, ಸಿದ್ದು ಚೌದರಿ, ತುಳಜರಾಮ್ ಎನ್.ಕೆ, ಮಹಾಮಾದೇವಿ ಮಾನೆ , ಶಿವುಕುಮಾರ ಇ.ಕೆ, ಮಾಹಾದೇವ ಸ್ವಾಮಿ, ರಮೇಶ ದೇವಕರ್ ನೀಲಕಂಠ ಎಮ್.ಹುಲಿ, ತಿಮ್ಮಾಯ್ಯ ಬಿ ಮಾನೆ ಇದ್ದರು.