
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.06: ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಡಿ.ಕಗ್ಗಲ್(ರಿ) ಬಳ್ಳಾರಿ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಐತಿಹಾಸಿಕ ಮತ್ತು ಪೌರಾಣಿಕ ನಾಟಕೋತ್ಸವ-2023 ಎನ್ನುವ ಕಾರ್ಯಕ್ರಮವನ್ನು ಡಿ.ಹಿರೇಹಾಳು ಗ್ರಾಮದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು
ಎರಡನೇ ದಿನದ ಸಮಾರೋಪ ಸಮಾರಂಭದಲ್ಲಿ
ಕಲೆಯನ್ನು ಬೆಳೆಸಿ ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕಲೆಯು ಸಹ ತುಂಬಾ ಅವಶ್ಯಕ ಗಡಿ ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇನ್ನು ಹೆಚ್ಚಿನದಾಗಿ ಹಮ್ಮಿಕೊಳ್ಳಬೇಕು ಎಂದು ಶಟ್ರು ಸುರೇಶ ರವರು ಹೇಳಿದರು
ಡಿ ಹಿರೇಹಾಳು ಗ್ರಾಮದಲ್ಲಿ ನಾಟಕಗಳನ್ನ ಇನ್ನು ಮುಂದೆ ಹೆಚ್ಚಾಗಿ ಪ್ರದರ್ಶಿಸುತ್ತೇವೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ನಾಟಕಗಳನ್ನು ವೀಕ್ಷಿಸಿ ನಮ್ಮ ಐತಿಹಾಸಿಕ ನಿಲುವುಗಳನ್ನ ತಿಳಿದುಕೊಳ್ಳಬೇಕು ಎಂದು ಸಿಂಗಾಡಿ ಜಗದೀಶ ರವರು ಹೇಳಿದರು
ಸಮಾಜವನ್ನು ಬದಲಾಯಿಸುವ ಸಾಮರ್ಥ್ಯ ನಾಟಕಕ್ಕಿದೆ ಮಾಧ್ಯಮದ ಹಾವಳಿಗಳಿಂದ ಯುವ ಜನಾಂಗ ಹೊರಬಂದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಕೆಲಸವನ್ನು ಮಾಡಬೇಕು ಇದಕ್ಕೆ ನಾಟಕ ಸಂಗೀತ ಸಹಾಯವಾಗುತ್ತದೆ ಎಂದು ಸಿಂಗಾಡಿ ಮಂಜುನಾಥ ನುಡಿದರು
ನಮ್ಮ ಗ್ರಾಮದ ಕಲಾವಿದರು ಎಲ್ಲಾ ಭಾಗದಲ್ಲೂ ಮಿಂಚುತ್ತಿದ್ದಾರೆ ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಇವರ ಯಶಸ್ಸಿನ ಪಯಣ ಹೀಗೆ ಮುಂದುವರೆಯಲಿ ಇವರಿಗೆ ನಮ್ಮ ಪ್ರೋತ್ಸಾಹ ಇದ್ದೆ ಇರುತ್ತದೆ ಎಂದು ಕರಡಿ ಮಲ್ಲಿಕಾರ್ಜುನ ನುಡಿದರು
ವೇದಿಕೆ ಮೇಲೆ ವೈ ತಿಪ್ಪೇಸ್ವಾಮಿ ನಿವೃತ್ತ ಶಿಕ್ಷಕರು.ಡಿ. ಹಿರೇಹಾಳು ಮಂಡಲ ಮೈನಾರಿಟಿ ಸಂಘದ ಮುಖ್ಯಸ್ಥರಾದ ಶ್ರೀ ಎಚ್,ರಾಮತುಲ್ಲಾ. ಎಸ್. ಶಿವಶಂಕರಪ್ಪ.
ಎ, ಚಂದ್ರ ಮೌಳಿ ನಿವೃತ್ತ ಲೈನ್ ಮ್ಯಾನ್ ಕೆಬಿ. ತಿಪ್ಪೇಸ್ವಾಮಿ ಹಡಪದ. ಉಪಸ್ಥಿತರಿದ್ದರು
ಡಾ.ಪವಿತ್ರ ಸಹಾಯಕ ಪ್ರಾಧ್ಯಾಪಕರು ನಾಟಕ ವಿಭಾಗ ಬೆಂಗಳೂರು ಇವರು “ಸಾಂಸ್ಕೃತಿಕ ಕ್ಷೇತ್ರದಲ್ಲಿ ಯುವ ಜನಾಂಗದ ಪಾತ್ರ” ಎನ್ನುವ ವಿಷಯವನ್ನು ಕುರಿತು ಉಪನ್ಯಾಸವನ್ನು ನೀಡಿದರು.
ನಂತರ ರಂಗ ಗೀತೆಗಳು. ಹಾಗೂ ನೃತ್ಯ ರೂಪಕ. ಮತ್ತು ರಾಮಾಯಣ(ಸೀತಾಪಹರಣ) ಎನ್ನುವ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಯಿತು ಕಾರ್ಯಕ್ರಮದ ನಿರೂಪಣೆ ರಂಗ ಜಂಗಮ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಸ್ವಾಗತ ವಿಷ್ಣು ಹಡಪದ ವಂದನಾರ್ಪಣೆ ರೇಷ್ಮೆ ಸುಮತಿ ನೆರವೇರಿಸಿಕೊಟ್ಟರು
ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರ.ದಾದಾ ಕಲಂದರ. ಶಿವಕುಮಾರ. ವಿದ್ಯಾರ್ಥಿಗಳು ಹಾಗೂ ಮಜ್ಜಿಗೆ ಶರಣ.ಚಂದ್ರ. ಸಿಂಗಾಡಿ ನಾಗರಾಜ.ಅನಿಲ. ಆದರ್ಶ ಹಾಗೂ
ಡಿ. ಹಿರೇಹಾಳು ಗ್ರಾಮಸ್ಥರು ಪಾಲ್ಗೊಂಡು ಎರಡನೇ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು