ಸಮಾಜವನ್ನು ಬಡಿದೆಬ್ಬಿಸಿದವರಲ್ಲಿ ಕನಕದಾಸರು ಒಬ್ಬರು : ಚೆಲ್ವರಾಜ್


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಡಿ.01 ಜನಸಾಮಾನ್ಯರಿಗಾಗಿ ಸಮಾಜವನ್ನು ಬಡಿದೆಬ್ಬಿಸಿದವರಲ್ಲಿ ಕನಕದಾಸರು ಒಬ್ಬರು ಎಂದು ಹಂಪಿ ವಿಶ್ವವಿದ್ಯಾಲಯದ ಪ್ರೊ. ಚೆಲುವರಾಜ್  ಹೇಳಿದರು.
 ಪಟ್ಟಣದ ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕನಕದಾಸರ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಜನಸಾಮಾನ್ಯರ ನೋವು ಕಷ್ಟಗಳನ್ನು ಅರ್ಥ ಮಾಡಿಕೊಂಡು ಜನಸಾಮಾನ್ಯರಿಗೆ  ತತ್ವ ಸಿದ್ಧಾಂತ ಕಟ್ಟಿಕೊಟ್ಟುವರು ಕನಕದಾಸರು, ಬೆವರಿನ ಬೆಲೆ ಗೊತ್ತಿರುವುದು ಬೆವರನ್ನು ಸುರಿಸಿದವರಿಗೆ ಮಾತ್ರ  ಗೊತ್ತಿರುತ್ತೆ ಹಾಗೆಯೇ ಕನಕದಾಸರು ಬದುಕಿ ತೋರಿಸಿದವರು. ಜನಸಾಮಾನ್ಯರ ಧ್ವನಿಯನ್ನು ಸಾಮಾಜಿಕ ಧ್ವನಿ ಯನ್ನಾಗಿ ಮಾಡಿದ್ದು ಕನಕ ಆದರೆ ಅವರ ವಿಚಾರಗಳನ್ನು ನಾವು ಒಂದು ಕಡೆ ಕಟ್ಟಿ ಹಾಕುವ ಮೂಲಕ ಸೀಮಿತಗೊಳಿಸಿದ್ದೇವೆ. ಆಗಿನ ಕಾಲದಲ್ಲಿ ಪ್ರಶ್ನೆಗಳನ್ನು ಮಾಡುವ ಶಕ್ತಿ ಕೇವಲ ಕನಕದಾಸರಿಗೆ ಮಾತ್ರ ಇತ್ತು, ಅವರ ಕೀರ್ತನೆಗಳನ್ನು ಕೇಳಿದರೆ ಬೆಚ್ಚಿ ಬೀಳುವಂತಹ ನೇರ ನೇರಾ ಡಾಂಭಿಕ ಪ್ರದರ್ಶನದವರಿಗೆ ಮುಟ್ಟುವಂತಿತ್ತು, ನಾವು ಇವತ್ತು ಕೇವಲ ಪ್ರಾರ್ಥನೆಗಾಗಿ ಬದುಕುವುದಕ್ಕಿಂತ ಕನಕನ ವಿಚಾರಗಳನ್ನು ಸಮಾಜ ಮುಟ್ಟುವಂತಹ ಕಾರ್ಯಗಳು ನಮ್ಮಲ್ಲಿ ಆಗಬೇಕು
 ಕನಕದಾಸರ ಪ್ರಶ್ನೆ ಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ ಎಂದರು
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಮಾತನಾಡಿ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಮೇಲು, ಕೀಳು ಎನ್ನುವ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಬಹು ದೊಡ್ಡ ಸಮರ ಸಾರುವ ಮೂಲಕ ಮನವ ಕುಲ ಒಂದೇ ಎನ್ನುವ ಸಂದೇಶವನ್ನು ಸಾರಿದ ಕನಕದಾಸರು ಜಗತ್ತಿಗೆ ಬುದ್ದ ಹೇಗೋ ನಾಡಿಗೆ ಕನಕದಾಸರು ಹಾಗೆ ಎಂದರು.
ತಾ ಪಂ ಇ ಒ ಪರಮೇಶ್ವರಪ್ಪ, ತಾಲೂಕು ಕುರುಬ ಸಂಘದ ಅಧ್ಯಕ್ಷ ಮೈನಳ್ಳಿ ಶಿವರಾಜ್ ಮಾತನಾಡಿದರು.
 ಈ ಸಂದರ್ಭದಲ್ಲಿ ಬಿಇಒ ಮೈಲೇಶ್ ಬೇವೂರ್,ಪಿ ಎಸ್ ಐ ಬಸವರಾಜ್ ಅರಭಾವಿ, ಸಮಾಜದ ಮುಖಂಡರಾದ ಬುಡ್ಡಿ ಬಸವರಾಜ್ ಮುಟಗನಹಳ್ಳಿ ಕೊಟ್ರೇಶ್, ಜಳಕಿ ಗುರು ಬಸಪ್ಪ, ಡಾಬಾ ರಾಮಣ್ಣ, ಟಿ.  ಪ್ರಭಾಕರ್, ಫೋಟೋ ರಾಮಣ್ಣ, ಮಾಲವಿ ಚೆನ್ನಬಸಪ್ಪ, ಉಮಾಶಂಕರ್, ಗುರುವಿನ ಕೊಟ್ರಯ್ಯ, ದೇವೇಂದ್ರ, ವೆಂಕಟೇಶ್, ಕರಿಬಸಪ್ಪ, ಆಂಜನೇಯ ವಕೀಲ  ಇತರರಿದ್ದರು