ಸಮಾಜಮುಖೀ ಚಿಂತನೆಯಡಿ ಸ್ವಯಂ ನಿವೃತಿ ಜೀವನಸಾಗಲಿ.ಕೆ.ಅನಂತರಾಜನಾಯಕ

ಅರಕೇರಾ,ಜು.೩೧-ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಪೂರ್ತಿಯಾಗಿ ಸುಮಾರು ೨೫ ವರ್ಷಗಳ ಕಾಲ ಶೈಕ್ಷಣಿಕ ರಂಗದಲ್ಲಿ ಕಾರ್ಯಾನಿರ್ವವಹಿಸಿ ಸೇವೆಸಲ್ಲಿಸಿ ಇಂದು ಶಿಕ್ಷಕ ವೃತ್ತಿಗೆ ಸ್ವಯಂನಿವೃತಿ ಹೊಂದುತ್ತಿರುವ ಮುಖ್ಯೋಪಾದ್ಯಯರಾದ ಸೈಯದ್ ಸಿರಾಜ್ ಹುಸೇನ್ ಅವರ ಜೀವನವನ್ನು ಸಮಾಜಮುಖೀ ಚಿಂತನೆಗಲ್ಲಿ ತೋಡಗಿಸಿಕೊಳ್ಳುವ ಮೂಲಕ ಜೀವನಸಾಗಲಿ ಎಂದು ಬಿಜೆಪಿ ಹಿರಿಯ ಮುಖಂಡರಾದ ಕೆ.ಅನಂತರಾಜನಾಯಕ ಅಭಿಪ್ರಾಯಪಟ್ಟರು.
ಅವರು ಅರಕೇರಾ ಗ್ರಾಮದಲ್ಲಿನ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ವಯಂ ನಿವೃತಿಹೊಂದುತ್ತಿರುವ ಮುಖ್ಯೋಪಾದ್ಯಯರಾದ ಸೈಯದ್ ಸಿರಾಜ್ ಹುಸೇನ್ ಇವರಿಗೆ ಹಮ್ಮಿಕೊಂಡಿರುವ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರಕಾರದ ಕೆಲಸವನ್ನು ನಿಷ್ಟೇಯಿಂದ ನಿರ್ವಹಿಸಿದ್ದ ಕೀರ್ತಿ ಸುಮಾರು ೧೭ ತಿಂಗಳ ಸೇವೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕೀರ್ತಿ ಸೇವೆ ಅನನ್ಯವಾದುದು ಎಂದರು ಇವರ ಸೇವೆ ಇನ್ನೂ ನಮ್ಮಗ್ರಾಮದ ಶಾಲೆಗೆ ಬೇಕಿತ್ತು ಎಂದರು.
ಸ್ವಯಂನಿವೃತಿ ಹೊಂದಿದ ಮುಖ್ಯೋಪಾದ್ಯಯರಾದ ಸೈಯದ್ ಸಿರಾಜ್ ಹುಸೇನ್ ಸನ್ಮಾನಸ್ವೀಕರಿಸಿ ಮಾತನಾಡಿದ ಅವರು ನನ್ನ ಸೇವಾ ಅವದಿಯು ಸುಮಾರು ೨೫ ವರ್ಷಕಾಲದಲ್ಲಿ ಅರಕೇರಾದಲ್ಲಿ ಸುಮಾರು ೧೭ ತಿಂಗಳ ಕಾಲ ಸೇವೆಸಲ್ಲಿಸಿ ಇಲ್ಲಿಯ ಜನಪ್ರತಿನಿಧಿಗಳು, ಶಾಲಾಸುಧಾರಣಾ ಸಮಿತಿಯವರು ಶಿಕ್ಷಕಸಿಬ್ಬಂದಿವರ್ಗದವರು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ ಅವರು ಸರಕಾರಿ ಬಾಲಕಿಯರ ಪ್ರೌಢಶಾಲೆಯ ಎಲ್ಲಾ ಶಿಬ್ಬಂದಿವರ್ಗದವರು ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಇದ್ದೇವು ಎಂದು ಹೇಳಿದರು.
ಗ್ರಾಮಿಣಾ ಪ್ರದೇಶ ಮಕ್ಕಳಿಗೆ ಶಾಸಕ ಕೆ.ಶಿವನಗೌಡನಾಯಕರವರಿಗೆ ಮನವಿಮಾಡಿಕೊಂಡು ಬುದ್ದಿನ್ನಿ ಮತ್ತು ನಾಗೋಲಿ ಗ್ರಾಮದಲ್ಲಿನ ಹೆಣ್ಣುಮಕ್ಕಳು ಶಾಲೆ ಮತ್ತು ಶೈಕ್ಷಣಿಕದಿಂದ ವಂಚಿರಾಗಬಾರದೆಂದು ಆ ಎರಡು ಗ್ರಾಮಗಳಿಗೆ ಬಸ್ಸು ಸಂಚಾರ ವ್ಯವಸ್ಥೆಮಾಡಿದ ಶಾಸಕರಿಗೆ ಕೃತ್ಞತೆಗಳನ್ನು ಸಲ್ಲಿಸಿದರು. ಮಕ್ಕಳೊಂದಿಗೆ ಕಳೆದ ದಿನಗಳು ಅವರನ್ನು ಶ್ಯಕ್ಷಣಿಕವಾಗಿ ಸಾಮಜಿಕವಾಗಿ ತಿದ್ದಿ ಬೆಳಸಿದ ಸಾರ್ಥಕತೆ ಸೇವೆಸಲ್ಲಿಸಿದ ತೃಪ್ತಿ ನನಗಿದೆ ಎಂದರು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿದರು.ಅರಕೇರಾ ಗ್ರಾಮವನ್ನು ಜೀವನದಲ್ಲಿ ಎಂದಿಗೂ ಮರೆಯುವದಿಲ್ಲ ಶಾಸಕರು ತಾಲ್ಲೂಕಿನಲ್ಲಿರುವ ಶಾಲೆಗಳಿಗೆ ಮೂಲಸೌಕರ್ಯಗಳನ್ನು ನೀಡಿದ್ದಾರೆಂದರು ಈ ತಾಲ್ಲೂಕಿನಲ್ಲಿರುವ ನೂತನವಾಗಿ ನಿರ್ಮಾಣವಾಗಿರುವ ಶಾಲಾ ಕಟ್ಟಡಗಳು ಬೇರೆ ಯಾವತಾಲ್ಲೂಕಿನ ನೋಡಲು ಸಿಗುದಿಲ್ಲಾ ಎಂದರು. ಕಾರ್ಯಕ್ರಮದಲ್ಲಿ ಮುದಕಪ್ಪನಾಯಕ ನಿವೃತಿ ಮುಖ್ಯೋಪಾದ್ಯಯರು, ಮೈಹಿಬೂಬಲಿ ತಾ.ಪ್ರೌ.ಶಾ.ಶಿಕ್ಷಕರ ಸಂಘದ ಅಧ್ಯಕ್ಷರುದೇವದುರ್ಗ,ವೀರಭದ್ರಪ್ಪ ಮುಂತಾದವರು ಮಾತನಾಡಿದರು.ಪ್ರಾಸ್ತಾವಿಕವಾಗಿ ಚಂದಪ್ಪ ಸ.ಶಿ ಮಾತಾನಾಡಿದರು. ರಾಯಚೂರು ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯೋಪಾದಯ್ಯರು ಅವರ ಅಭಿಮಾನಿಗಳು ಬಂಧುವರ್ಗದವರು ದಂಪತಿಗಳನ್ನು ಸನ್ಮಾನಿಸಿ ಸತ್ಕರಿಸಿದರು
ವೇದಿಕೆಮೇಲೆ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಶಾಲಾಸುಧಾರಣಾ ಸಮಿತಿಯ ಅಧ್ಯಕ್ಷರಾದ ಶೇಖರಪ್ಪಗೌಡಮಾಲಿಪಾಟೀಲ್.ಜಾವೀದ್ ಆರ್ ಚಿಂಚೋಳಿಕರ್, ಹನುಮಂತ್ರಾಯ ಶಾಖೆ ಹೇಮನೂರು ತಾಲ್ಲೂಕಾ ನೌಕರಸಂಘ ಅಧ್ಯಕ್ಷರು ದೇವದುರ್ಗ ಎಸ್ಡಿಎಂಸಿ ಸದಸ್ಯರುಗಳಾದ ಚನ್ನಪ್ಪ,ಗಪೂರಸಾಬ, ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾಉಪಾಧ್ಯಕ್ಷರಾದ ವಿಶ್ವನಾಥಪಾಟೀಲ್ ,ಬಸವರಾಜಪಾಟೀಲ್ ಪ್ರಧಾನಕಾರ್ಯದರ್ಶಿ ನೇಮಣ್ಣನಾಯ್ಕ ತಾ.ಪ್ರೌ ಶಿ ಸ ಉಪಾಧ್ಯಕ್ಷರು. ಶಿವಣ್ಣ ಖಜಾಂಜಿ.ರಾಯಚೂರು ವಿವಿಧ ಶಾಲೆಯ ಶಿಕ್ಷಕವರ್ಗದವರು ಮತ್ತು ಸೈಯದ್ ಸಿರಾಜ್ ಹುಸೇನ್ ಕುಟಂಬಸ್ಥರು ಉಪಸ್ಥಿರಿದ್ದರು.