ಸಮಾಜಮುಖಿ ಚಿಂತಕರು ಹೆಚ್ಚಾಗಲಿ : ಡಾ.ಸಾರಂಗಧರ ಶ್ರೀ

ಕಲಬುರಗಿ:ನ.15:ಸಮಾಜ ನನಗೇನು ಕೊಟ್ಟಿದೆ, ನಾನು, ನನ್ನ ಕುಟುಂಬ, ಧರ್ಮ, ಜಾತಿ ಅಭಿವೃದ್ಧಿಯಾಗಬೇಕೆಂಬ ಸ್ವಾರ್ಥ ಚಿಂತಕರ ಸಂಖ್ಯೆ ಸಮಾಜದಲ್ಲಿ ಹೆಚ್ಚಳವಾಗಿದೆಯೆಂದು ಕಳವಳ ವ್ಯಕ್ತಪಡಿಸಿದ ಶ್ರೀಶೈಲ, ಸುಲಫಲ ಮಠದ ಪರಮಪೂಜ್ಯ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳು, ಸಮಾಜದಲ್ಲಿರುವ ದೀನ, ದಲಿತ, ಆಶಕ್ತರು, ಬೆವರು, ನಿರಾಶ್ರಿತರ ಏಳ್ಗೆಗೆ ಚಿಂತನೆ ಮಾಡಿ ಅವರಿಗೆ ಸಹಾಯ ಮಾಡುವ ಸಮಾಜಮುಖಿ ಚಿಂತಕರ ಸಂಖ್ಯೆ ಇಂದು ಹೆಚ್ಚಳವಾಗಬೇಕಾಗಿದೆಯೆಂದು ಆಶಯ ವ್ಯಕ್ತಪಡಿಸಿದರು.
ಸಮಾಜ ಸೇವಕ ಎಚ್.ಬಿ.ಪಾಟೀಲ ಅವರ 40ನೇ ಜನ್ಮದಿನದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಕೆಎಚ್‍ಬಿ ಗ್ರೀನ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’, ‘ಜ್ಞಾನಾಮೃತ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರ’ ‘ಆಳಂದ ರಸ್ತೆ ಗೆಳೆಯರ ಬಳಗ’ ಇವುಗಳು ಸಂಯುಕ್ತವಾಗಿ ಶುಕ್ರವಾರ ಸಂಜೆ ನಗರದ ಖಾದ್ರಿ ಚೌಕನಲ್ಲಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ಹಮ್ಮಿಕೊಂಡಿದ್ದ ‘ಅಭಿನಂದನಾ ಸಮಾರಂಭ’ವನ್ನು ಉದ್ಘಾಟಿಸಿ ಆಶಿರ್ವಚನ ನೀಡುತ್ತಿದ್ದರು.
ಎಚ್.ಬಿ.ಪಾಟೀಲ ಅವರು ಒಬ್ಬ ವ್ಯಕ್ತಿಯಲ್ಲ. ಬದಲಿಗೆ ಅದ್ಭುತ ಶಕ್ತಿಯಾಗಿದ್ದಾರೆ. ಸರ್ಕಾರಿ ನೌಕರರಿದ್ದಾರೆ. ಉತ್ತಮ ವೇತನವಿದ್ದು, ಆರಾಮವಾಗಿ ತಮ್ಮ ಕುಟುಂಬ ಜೊತೆ ಇರಬಹುದು. ಆದರೆ ಅವರು ವೃತ್ತಿ ಸಮಯದ ನಂತರ ತಮ್ಮ ವೈಯಕ್ತಿಕ ಜೀವನದ ಸಮಯವನ್ನು ಸಮಾಜದ ಸೇವೆಗಾಗಿ ನೀಡುವ ಮೂಲಕ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತಿದ್ದಾರೆ. ನಿಸ್ವಾರ್ಥ ಸಮಾಜ ಸೇವಕರಾಗಿ ಸಮಾಜಕ್ಕೆ ಕಳೆದ ಅನೇಕ ವರ್ಷಗಳಿಂದ ಕೊಡುಗೆಯನ್ನು ನೀಡುತ್ತಿದ್ದಾರೆ. ಎಲ್ಲರು ಅವರ ಸಮಾಜ ಸೇವೆಗೆ ಪ್ರೋತ್ಸಾಹ ನೀಡುವುದು ಅವಶ್ಯಕವಾಗಿದೆಯೆಂದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಜಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಮೇಶ್ವರ ಸರಡಗಿ, ಕೆಎಚ್‍ಬಿ ಗ್ರೀನ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ, ಬಳಗದ ಕಾನೂನು ಸಲಹೆಗಾರ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಚಿಂತಕ ಶಿವಕಾಂತ ಚಿಮ್ಮಾ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಸತೀಶ ಟಿ.ಸಣಮನಿ, ಕೆ.ಬಸವರಾಜ, ನರಸಪ್ಪ ಬಿರಾದಾರ ದೇಗಾಂವ, ಚಂದ್ರಕಾಂತ ಬಿರಾದಾರ, ಚಂದ್ರಶೇಖರ ಪಾಟೀಲ, ಬಸವರಾಜ ಕುಲಕರ್ಣಿ ನಾವದಗಿ, ನಾಗೇಂದ್ರಪ್ಪ ದಂಡೋತಿಕರ್, ರಮೇಶ ಕೋರಿಶೆಟ್ಟಿ, ಡಿ.ವಿ.ಕುಲಕರ್ಣಿ, ಕೆ.ವಿ.ಕುಲಕರ್ಣಿ, ಬಾಲಕೃಷ್ಣ ಕುಲಕರ್ಣಿ, ಸೂರ್ಯಕಾಂತ ಸಾವಳಗಿ, ಬಸವರಾಜ ಹೆಳವರ ಯಾಳಗಿ, ಬಸಯ್ಯಸ್ವಾಮಿ ಹೊದಲೂರ, ರಾಜಕುಮಾರ ಬಟಗೇರಿ, ಎಸ್.ಎಸ್.ಪಾಟೀಲ ಬಡದಾಳ, ಅಮರ ಜಿ.ಬಂಗರಗಿ, ಮಹಾಂತೇಶ ಬಿರಾದಾರ, ಪ್ರಭುಲಿಂಗ ಮೂಲಗೆ, ವಿಜಯಕುಮಾರ ಪೋಮಾಜಿ, ಮಹಾದೇವ, ರೇವಣಸಿದ್ದಪ್ಪ ಪಾಟೀಲ, ವೀರಣ್ಣ ಡಿ.ಪಟ್ಟಣ, ಓಂಕಾರ ಗೌಳಿ ಸೇರಿದಂತೆ ಸಂಸ್ಥೆ, ಬಳಗದ ಸದಸ್ಯರು ಭಾಗವಹಿಸಿದ್ದರು.
ಶಿವರಾಜ ಬಿರಬಿಟ್ಟಿ ಪ್ರಾರ್ಥಿಸಿದರು. ವೀರೇಶ ಬೋಳಶೆಟ್ಟಿ ನರೋಣಾ ನಿರೂಪಿಸಿದರು. ರಾಜಶೇಖರ ಬಿ.ಮರಡಿ ವಂದಿಸಿದರು.