ಸಮಾಜಮುಖಿ ಕೆಲಸ ಮಾಡಿದವರ ಸ್ಮರಣೆ ಅತ್ಯುತ್ತಮ :ಯಶವಂತರಾಯಗೌಡ

ಇಂಡಿ:ಜು.4:ಕದಳಿ ವೇದಿಕೆಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಾಜಮುಖಿ ಕೆಲಸ ಮಾಡಿದವರ ಸ್ಮರಣೆ ಮಾಡುತ್ತಿರುವದು ಅತ್ಯುತ್ತಮ ಕೆಲಸ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಬಸವರಾಜೇಂದ್ರ ಮಂಗಲ ಕಾರ್ಯಾಲಯದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಮಹಿಳಾ ಕದಳಿ ವೇದಿಕೆಯಿಂದ ದತ್ತಿ ಸ್ಮರಣೆ ಸಂದೇಶ ಸುರಪುರ ರವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸಂದೇಶ ಸುರಪುರರವರು ಸಮಾಜಕ್ಕೆ ಮಾಡಿದ ಸತ್ಕಾರ್ಯ ನೆನೆಯುವದರೊಂದಿಗೆ ಎಲ್ಲರಿಗೂ ತಿಳಿಯುವಂತೆ ಮಾಡುತ್ತಿರುವ ಕದಳಿ ವೇದಿಕೆ ಕಾರ್ಯ ಶ್ಲಾಘನೀಯ ಎಂದರು.

ಜೆ.ಎಸ್.ಕಲ್ಯಾಣಿ ಇವರು ಪರಿಷತ್ತು ನಡೆದ ಬಂದ ದಾರಿ,ಉಪನ್ಯಾಸ ನೀಡಿದ ಉಷಾದೇವಿ ಹಿರೇಮಠ ಕದಳಿ ವೇದಿಕೆ ಕುರಿತು,ಮ.ಗು.ಯಾದವಾಡ ಕದಳಿ ವೇದಿಕೆ ಕಾರ್ಯಕ್ರಮಗಳ ಕುರಿತು,ಅಧ್ಯಕ್ಷತೆ ವಹಿಸಿದ ಗಂಗಾ ಗಲಗಲಿ,ಸೋಮಶೇಖರ ಸುರಪುರ ಶಸಾಪ ಅಧ್ಯಕ್ಷ ಆರ್.ವಿ.ಪಾಟೀಲ ಮಾತನಾಡಿದರು.

ಇದೇ ವೇಳೆ ಸಮಾಜ ಸೇವೆ ನೀಡಿದ ವೈದ್ಯರಾದ ಡಾ|| ರಾಜೇಶ ಕೋಳೆಕರ ಮತ್ತು ಡಾ|| ಪ್ರೀತಿ ಕೋಳೆಕರ ದಂಪತಿಗಳನ್ನು ಸನ್ಮಾನಿಸಲಾಯಿತು.

ಸನ್ಮಾನಿತ ಡಾ|| ರಾಜೇಶ ಕೋಳೆಕರ, ನಿರ್ಮಲಾ ಹಂಜಗಿ, ಬಿ.ಎಸ್.ಪಾಟೀಲ, ಬಿ.ಇ.ಹಿರೇಮಠ, ದಾನಮ್ಮ ಹಿರೇಮಠ ಮಾತನಾಡಿದರು.

ವಿಜಯಲಕ್ಷ್ಮೀ ದೇಸಾಯಿ, ರಾಜಶ್ರೀ ಕ್ಷತ್ರಿ, ಭವಾನಿ ಗುಳೆದ ಗುಡ್ಡ, ಸುಮಂಗಲಾ ನಿಂಬಾಳ, ಶಶಿಕಲಾ ಮದಭಾವಿ, ರೇಣುಕಾ ಸಂಖ, ನಿರ್ಮಲಾ ತೇಲಿ, ಜಯಶ್ರೀ ಬಿರಾದಾರ ಮತ್ತಿತರಿದ್ದರು.