ಸಮಾಜಮುಖಿ ಕಾರ್ಯದಿಂದ ವ್ಯಕ್ತಿತ್ವ ವೃದ್ಧಿಃ ಭಾರತಿ ಟಂಕಸಾಲಿ

ವಿಜಯಪುರ, ಡಿ.1- 2021- ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ವಿಶ್ವದರ್ಶನ ಕನ್ನಡ ದಿನಪತ್ರಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಗುಲ್ಬರ್ಗದಲ್ಲಿ ನಡೆಯಿತು,
ಈ ಸಂದರ್ಭದಲ್ಲಿ ವಿಜಯಪುರದ ಸಮಾಜಸೇವಕಿ ಶ್ರೀಮತಿ ಭಾರತಿ ಗೋವಿಂದರಾವ ಟಂಕಸಾಲಿ ಇವರಿಗೆ,ಅವರ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಬಸವ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿ ಸ್ವೀಕಾರ ಮಾಡುವುದರಿಂದ ಜವಾಬ್ದಾರಿ ಹೆಚ್ಚುತ್ತದೆ ತನ್ಮೂಲಕ ವ್ಯಕ್ತಿತ್ವ ವೃದ್ಧಿಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಅನೇರ ಮಠಾಧೀಶರು, ಗಣ್ಯರು ಹಾಗೂ ಸಮಸ್ತ ಭಕ್ತರು ಉಪಸ್ಥಿತರಿದ್ದರು.