ಸಮಾಜಮುಖಿ ಕಾರ್ಯಗಳು ಅವಶ್ಯ

ಹುಬ್ಬಳ್ಳಿ,ಮಾ6 :ನಾನು ನನ್ನದು ಎಂಬ ಸ್ವಾರ್ಥವನ್ನು ಬಿಟ್ಟುಪ್ರತಿಯೊಬ್ಬರೂಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಶಾಸಕ ಪ್ರಸಾದಅಬ್ಬಯ್ಯ ಹೇಳಿದರು.
ಅವರು, ಜಿಲ್ಲಾಅಂಧತ್ವ ನಿವಾರಣಾ ಸಂಸ್ಥೆ, ಖ್ಯಾತ ನೇತೃತಜ್ಞ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ವಿಶ್ವ ಮದ್ವ ಮಹಾಪರಿಷತ್ ಹುಬ್ಬಳ್ಳಿ, ಶ್ರೀ ಗುರು ಮಹಿಪತಿರಾಜ ನೇತ್ರ ಬ್ಯಾಂಕ್ ಹಾಗೂ ಸಂಶೋಧನಾ ಸಂಸ್ಥೆ ಶ್ರೀ ಪ್ರಸಾದಅಬ್ಬಯ್ಯ ಫೌಂಡೇಶನ್‍ಅವರ ಸಂಯುಕ್ತಾಶ್ರಯದಲ್ಲಿಇಲ್ಲಿನ ಪೆಂಡಾರ್‍ಗಲ್ಲಿ 2ನಂ.ಶಾಲೆಯಲ್ಲಿ ಹಮ್ಮಿಕೊಂಡಿದ್ದಉಚಿತ ನೇತ್ರತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಹಕಾರದಲ್ಲಿ ನಿರಂತರವಾಗಿ ನಡೆಯುತ್ತಿರುವಉಚಿತಕಣ್ಣಿನತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂತಮ್ಮ ಸುತ್ತಲಿನ ಜನರಿಗೆ ಶಿಬಿರದ ಬಗ್ಗೆ ಜಾಗೃತಿ ಮೂಡಿಸಬೇಕು.ತಮ್ಮಂತೆಯೇಅವಶ್ಯವಿರುವವರಿಗೆಚಿಕಿತ್ಸೆ ದೊರಕಿಸಿಕೊಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿಪಾಲಿಕೆ ಮಾಜಿ ಸದಸ್ಯರಾದ ಮೋಹನ್‍ಅಸುಂಡಿ, ಮುಖಂಡರಾದ ಶಂಖರ ಮೋಹಿತೆ, ಶಕೀಲ್‍ಅಹ್ಮದಧಾರವಾಡ, ರಮೇಶ ಮುತ್ತಗಿ, ಯಲ್ಲಪ್ಪ ಮೆಹರವಾಡೆ, ಜ್ಯೋತಿಭಾ ಸಿಂಧೆ, ಕುಮಾರ ಕುಂದನಹಳ್ಳಿ, ವಾದಿರಾಜಕುಲಕರ್ಣಿ ಸೇರಿದಂತೆ ಮೊದಲಾದವರುಇದ್ದರು.