ಸಮಾಜಮುಖಿ ಕಾರ್ಯಗಳಿಗೆ ವಸತಿನಿಲಯ ಉಪಯುಕ್ತ – ಶ್ರೀರುದ್ರಮುನಿಸ್ವಾಮಿ


ಸಂಜೆವಾಣಿ ವಾರ್ತೆ
ಕುರುಗೋಡು.ಆ.4 ಭಕ್ತರಿಗೆ ಪ್ರಸಾದವ್ಯವಸ್ಥೆ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಇತರೆ ಸಮಾಜಮುಖಿ ಕಾರ್ಯಗಳನ್ನು ಮಾಡಲು ನೂತನವಾಗಿ ನಿರ್ಮಾಣಗೊಂಡ ಶ್ರೀಸುಂಕ್ಲಮ್ಮದೇವಿ ದೇವಸ್ಥಾನದ ವಸತಿನಿಲಯ ಉಪಯುಕ್ತವಾಗಿದೆ ಎಂದು ಶ್ರೀಕ್ಷೇತ್ರ ಕಲ್ಲುಕಂಬ ಶ್ರೀರುದ್ರಮುನಿಸ್ವಾಮಿ ಹೇಳಿದರು.
ಅವರು ಪಟ್ಟಣದ ಶ್ರೀ ಸುಂಕ್ಲಮ್ಮದೇವಿ ಸೇವಾಸಮಿತಿ ಕುರುಗೋಡು ಇವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಶ್ರೀಸುಂಕ್ಲಮ್ಮದೇವಿ ದೇವಸ್ಥಾನದ ನೂತನ ವಸತಿನಿಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುರಾತನದಿಂದಲೂ ಕುರುಗೋಡು ಹಾಲುಮತ ಸಮಾಜದ ಬಂದುಗಳು ಶ್ರೀಸುಂಕ್ಲಮ್ಮದೇವಿಯ ದೇವಸ್ಥಾನದ ಆಡಳಿತ ಹಾಗು ಅರ್ಚಕರ ಸೇವೆ ಮಾಡುತ್ತಿರುವುದು ಉತ್ತಮಬೆಳೆವಣಿಗೆಯಾಗಿದೆ ಎಂದು ನುಡಿದರು. ಮುಂದಿನದಿನಗಳಲ್ಲಿಯೂ ಸಹ ಹಾಲುಮತ ಸಮಾಜದ ಬಂದುಗಳು ಶ್ರೀಸುಂಕ್ಲಮ್ಮದೇವಿಯ ಆರಾದಕರಾಗಿ, ದೇವಸ್ಥಾನದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಲು ಮುಂದಾಗಬೇಕೆಂದು ಸಮಾಜದ ಬಂದುಗಳಿಗೆ ಕರೆನೀಡಿದರು.
ಹಾಲುಮತ ಸಮಾಜದ ಕುಲಗುರು ದೇವಲಾಪುರದ ಶ್ರೀವಿರುಪಾಕ್ಷಪ್ಪ ಒಡೆಯರ್ ಮಾತನಾಡಿ, ಹಾಲುಮತ ಸಮಾಜದ ಬಂದುಗಳು ಎಲ್ಲರೂ ಒಗ್ಗಟ್ಟಿನಿಂದ ಶ್ರೀಸುಂಕ್ಲಮ್ಮದೇವಿ ದೇವಸ್ಥಾನದ ಅಭಿವೃದ್ದಿಗೆ ಕಂಕಣಬದ್ದರಾಗಬೇಕೆಂದು ಸಲಹೆ ನೀಡಿದರು. ನೀಲಮ್ಮಮಠದ ಎನ್‍ಎಂ. ಸದಾನಂದಸ್ವಾಮಿ, ಎನ್‍ಎಂ. ಪ್ರೇಮ್‍ಕುಮಾರ್‍ಸ್ವಾಮಿ ಸೇರಿದಂತೆ ಹಾಲುಮತ ಸಮಾಜದ ಬಂದುಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ, ಪ್ರಸಾದಸ್ವೀಕರಿಸಿ ಶ್ರೀಸುಂಕ್ಲಮ್ಮದೇವಿಯ ಕೃಪೆಗೆ ಪಾತ್ರರಾದರು.
ಪ್ರಾರಂಭದಲ್ಲಿ ಶ್ರೀಸುಂಕ್ಲಮ್ಮದೇವಸ್ಥಾನದಲ್ಲಿ ರುದ್ರಾಭಿಷೇಕ, ನವಗ್ರಹಪೂಜೆ, ಎಲೆಪೂಜೆ, ಕುಂಕುಮಾರ್ಚನ ಸೇರಿದಂತೆ ಇತರೆ ಕಾರ್ಯಕ್ರಮಗಳು ಧಾರ್ಮಿಕವಿಧಿ-ವಿಧಾನಗಳಿಂದ ಹಿರೇಮಠದ ರವೀಂದ್ರಸ್ವಾಮಿ, ಕೆಎಂ. ಪಂಚಾಕ್ಷರಯ್ಯಸ್ವಾಮಿಯವರ ಪುರೋಹಿತ್ಯದಲ್ಲಿ ಸಾಂಗೋಪವಾಗಿ ಜರುಗಿದವು. ನಂತರ ಶ್ರೀಕಲ್ಗುಡೆ ಡೊಳ್ಳು, ತಾಳ, ಮೇಳದೊಂದಿಗೆ ಕಳಸವನ್ನುಹೊತ್ತ ಸುಮಂಗಳೆಯರನ್ನು ಒಳಗೊಂಡ ಶ್ರೀಕಲ್ಗುಡೇಶ್ವರದೇವರುಗಳ ಮೆರವಣಿಗೆ ಡೊಳ್ಳು, ತಾಳ, ಮೇಳ ಸೇರಿದಂತೆ ಸಕಲ ವಾದ್ಯಗಳೊಂದಿಗೆ ಶ್ರೀದೊಡ್ಡಬಸವೇಶ್ವರ ದೇವಸ್ಥಾನದಿಂದ ಶ್ರೀಸುಂಕ್ಲಮ್ಮದೇವಿ ದೇವಸ್ಥಾನದ ವರೆಗೆ ಸಂಬ್ರಮದಿಂದ ಮೆರವಣಿಗೆ ಮಾಡಿದರು. ಮುತೈದಿಯರಿಗೆ ಉಡಿತುಂಬಲಾಯಿತು. ಮೆರವಣಿಗೆಯಲ್ಲಿ ಶ್ರೀಸುಂಕ್ಲಮ್ಮದೇವಿ ಸೇವಾಸಮಿತಿ ಕುರುಗೋಡು, ಹಾಲುಮತ ಸಮಾಜದ ಬಂದುಗಳು, ಹಾಗು ಊರಿನ ಮುಖಂಡರು ಇದ್ದರು. ದೇವಸ್ಥಾನದ ಸೇವಾಸಮಿತಿ ಮುಖಂಡ ಕೆ.ವಿರುಪಾಕ್ಷಗೌಡ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.