ಸಮಾಜಮುಖಿಯಾಗಿ ಬೆಳೆಯಲು ಶೈಕ್ಷಣಿಕ ಬದುಕು ಸಹಕಾರಿ: ಮಹಾಂತೇಶ ಪಾಟೀಲ್

ಅಫಜಲಪುರ:ಜೂ.1: ಜೀವನದಲ್ಲಿ ಏನಾದರೂ ಸಾಧಿಸಿ ಸಮಾಜಮುಖಿಯಾಗಿ ಬೆಳೆಯಲು ಶೈಕ್ಷಣಿಕ ಬದುಕು ಸಹಕಾರಿಯಾಗಲಿದೆ. ಹೀಗಾಗಿ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಸದುದ್ದೇಶದಿಂದ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ ಎಂದು ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ ಹೇಳಿದರು.

ತಾಲೂಕಿನ ಮಲ್ಲಾಬಾದ ಗ್ರಾಮದ ಸಿದ್ಧಾರ್ಥ ಪ್ರೌಢ ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡುವ ಮೂಲಕ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳು ಸಾಕಷ್ಟು ಪ್ರತಿಭಾವಂತರು ಹಾಗೂ ಕ್ರೀಯಾಶೀಲರು ಆಗಿದ್ದಾರೆ. ಅವರಿಗೆ ಗುಣಮಟ್ಟದ ಬೋಧನೆ, ಮತ್ತು ಸಹಕಾರ ಸಿಕ್ಕರೆ ದೊಡ್ಡ ಸಾಧನೆ ಮಾಡಬಲ್ಲರು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳನ್ನು ನಿತ್ಯ ಶಾಲೆಗೆ ಕಳಿಸುವ ಕೆಲಸ ಮಾಡಬೇಕು ಹಾಗೂ ಶಿಕ್ಷಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯಗುರು ಸಿದ್ದಾರಾಮ ಎಸ್. ಪಾಟೀಲ್, ಶಿಕ್ಷಕರಾದ ಪವನಕುಮಾರ ಪಾಟೀಲ, ರೇಣುಕಾ ವಾಲಿಕಾರ, ಭವಾನಿ ಹೊಸಮನಿ, ಆಶಾರಾಣಿ, ಅಶ್ವಿನಿ ಹಿರೋಳಿ, ಸಿದ್ದಯ್ಯ ಹಿರೇಮಠ, ಕವಿತಾ ಪುರೋಹಿತ, ಬಾಬುಗೌಡ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಇದ್ದರು.