
ರಾಯಚೂರು.ಜು.೨೪-
ಮನುಷ್ಯ ಸ್ವಂತಿಕೆಯಿಂದ ಎದ್ದು ನಿಲ್ಲಬೇಕು, ಪರಾಧೀನವಾಗಬಾರದು, ಶಿಸ್ತು, ಸ್ವಾಭಿಮಾನ, ನಿರಂತರ ಪ್ರಯತ್ನ, ಉತ್ತಮ ಸಂಸ್ಕಾರ, ಗುಣಗಳನ್ನು ಹೊಂದಿ ಜೀವನ ಸಾಗಿಸಿದರೆ ಉತ್ತಮ ಗುಣಮಟ್ಟದ ಪ್ರತಿಫಲ ಸಿಗುವುದರೊಂದಿಗೆ ಪ್ರತಿಯೊಬ್ಬ ವ್ಯಕ್ತಿ, ಮಠಮಾನ್ಯಗಳು, ಸರ್ಕಾರಗಳು ಸಮಾಜಮುಖಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಿಟ್ಟಿಮಲ್ಕಾಪುರದ ಆರೂಢ ಜ್ಯೋತಿ ಶಾಂತಾಶ್ರಮ ಮಠದ ಶ್ರೀ ನಿಜಾನಂದ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ರಾಯಚೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದಿಂದ ಜುಲೈ ೧೭ ರಿಂದ ೨೩ ರವರೆಗೆ ಏಳು ದಿನಗಳ ಕಾಲ ಶಿಬಿರ ಹಮ್ಮಿ ಕೊಂಡಿದ್ದ ತಾಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದಲ್ಲಿ ಸಮಾಜ ಕಾರ್ಯ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರುಗಳಾದ ಡಾ.ಶರಣಬಸವರಾಜ, ಡಾ.ರಶ್ಮಿರಾಣಿ, ಡಾ.ಹನುಮಂತರಾಯ ಕರಡಿ, ಹಾಗೂ ಬಜಾರಪ್ಪ ರವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಸುನಿಲ್ ಕುರ್ಮಾ ಏಳು ದಿನದ ಶಿಬಿರದ ವರದಿಯನ್ನು ಮಂಡಿಸಿದರು. ಶಿಬಿರಾರ್ಥಿಗಳಾದ ಮಂಜುನಾಥ ಮತ್ತು ಇಮಾಮ್ಸ ಒಂದು ವಾರದ ಶಿಬಿರವನ್ನು ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಉದಯಕುಮಾರ ನಿರೂಪಿಸಿದರು.