
ಗದಗ, ಮಾ. 8 : ಸಾಮಾಜಿಕ ಸೇವಾ ಸಂಘಟನೆಗಳಲ್ಲಿ ಒಂದಾಗಿರುವ ಭಾವಸಾರ ವ್ಹಿಜನ್ ಇಂಡಿಯಾದ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾಜಮುಖಿಯಾಗಿ ಕಾರ್ಯ ಮಾಡಬೇಕೆಂದು ಭಾವಸಾರ ವ್ಹಿಜನ್ ಇಂಡಿಯಾ ಏರಿಯಾ 101ರ ಜಿಲ್ಲಾ ಗವರ್ನರ್ ಪ್ರದೀಪ ಗುಜ್ಜರ ಅಭಿಪ್ರಾಯಪಟ್ಟರು.
ಅವರು ನಗರದ ವಿಠ್ಠಲ ಮಂದಿರದ ಸಭಾಂಗಣದಲ್ಲಿ ಗದಗ ಭಾವಸಾರ ವ್ಹಿಜನ್ ಇಂಡಿಯಾ ಸಂಘಟನೆಯ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಮಹಿಳಾ ಸಬಲೀಕರಣ, ಜಾಗೃತಿ, ಸ್ವಯಂ ಉದ್ಯೋಗಕ್ಕಾಗಿ ಮಹಿಳೆಯರಿಗೆ ಪ್ರೇರಣೆ ನೀಡಲಾಗುವದು. ಯುವ ಜನಾಂಗದ ಅಭಿವೃದ್ಧಿಗಾಗಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಕಾಲರ್‍ಶಿಫ್ ವಿತರಣೆ ಸೇರಿದಂತೆ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯ ಯೋಜನೆಗಳನ್ನು ನೂತನ ಪದಾಧಿಕಾರಿಗಳು ಹಮ್ಮಿಕೊಳ್ಳಬೇಕೆಂದರು.
ಮುಖ್ಯ ಅತಿಥಿ ಗದುಗಿನ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಮಂಜುನಾಥ ಕರ್ಣೆ, ಭಾವಸಾರ ವ್ಹಿಜನ್ ಇಂಡಿಯಾ ಏರಿಯಾ 101ರ ಗವರ್ನರ್ ಸೆಕ್ರೇಟರಿ ಸುನೀಲ ಹೆಬ್ಬಾರೆ ಸಮಾಜ ಮತ್ತು ಸಂಘಟನೆ ಕುರಿತು ಮಾತನಾಡಿದರು.
ವ್ಹಿಜನ್‍ದ ಮಾಜಿ ಗವರ್ನರ್ ಅರುಣ ಕುಂಠೆ, ಡಿಪ್ಯೂಟಿ ಗವರ್ನರ್ ಸಂತೋಷ ಮಿರಜಕರ, ರಾಜಶೇಖರ ಕಪಟಕರ, ಭಾವಸಾರ ಕ್ಷತ್ರೀಯ ಮಹಾಸಭಾದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಪ್ರಮೋದ ನವಲೆ, ಮಹಾಸಭಾದ ಜಿಲ್ಲಾ ಅಧ್ಯಕ್ಷ ಅಶ್ವಥ್ ಸುಲಾಖೆ, ಟ್ರಸ್ಟ ಅಧ್ಯಕ್ಷ ಜ್ಞಾನೇಶ್ವರ ಉತ್ತರಕರ ಮಾತನಾಡಿದರು.
ವೇದಿಕೆಯ ಮೇಲೆ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಹವಳೆ, ವಿಶ್ವಾದ ಉರಣಕರ, ಮಹಾಸಭಾದ ಯುವ ಘಟಕದ ಜಿಲ್ಲಾ ಅಧ್ಯಕ್ಷ ಮಂಜುನಾಥ ದಾಮೋದರ, ತಾಲೂಕ ಅಧ್ಯಕ್ಷ ಸಾಗರ ಬೇಂದ್ರೆ ಉಪಸ್ಥಿತರಿದ್ದರು.
ಭಾವಸಾರ ವ್ಹಿಜನ್ ಇಂಡಿಯಾ ಗದಗ ಘಟಕದ ನೂತನ ಅಧ್ಯಕ್ಷರಾಗಿ ಷಣ್ಮುಖ ಸುಲಾಖೆ, ಕಾರ್ಯದರ್ಶಿಯಾಗಿ ಜ್ಞಾನೇಶ್ವರ ಖೋಕಲೆ, ಇತರ ಪದಾಧಿಕಾರಿಗಳಾಗಿ ರಾಜಶೇಖರ ಕಪಟಕರ, ಮಂಜುನಾಥ ಉತ್ತರಕರ, ಪರಶುರಾಮ ನವಲೆ, ರಾಜೀವ ಬೇದ್ರೆ, ಪ್ರವೀಣ ಸರ್ವದೆ, ನಾಗರಾಜ ವಾದೋನೆ, ಕೃಷ್ಣಾ ಜಾಧವ, ವೀಣಾ ಕಪಟಕರ, ವೆಂಕಟೇಶ ಮಹೇಂದ್ರಕರ, ವೀಣಾ ಸುಲಾಖೆ, ರೇಖಾ ದಾಮೋದರ, ಜಯಶ್ರೀ ತ್ರಿಮಲ್ಲೆ, ಅಶ್ವಿನಿ ಸರ್ವದೆ, ವೆಂಕಟೇಶ ದೊಂಗಡೆ, ಸುನೀಲ ದಾಮೋದರ ಅಧಿಕಾರ ವಹಿಸಿಕೊಂಡರು.
ನೂತನ ಅಧ್ಯಕ್ಷ ಷಣ್ಮುಖ ಸುಲಾಖೆ ತಮ್ಮ ಅಧಿಕಾರದ ಅವಧಿಯಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯ ಯೋಜನೆಗಳನ್ನು ವಿವರಿಸಿದರು. ಮಂಜುನಾಥ ಉತ್ತರಕರ ಸ್ವಾಗತಿಸಿದರು ಸುನೀಲ ದಾಮೋದರ ನಿರೂಪಿಸಿದರು, ಜ್ಞಾನೇಶ್ವರ ಖೋಕಲೆ ವಂದಿಸಿದರು. ಸಮಾರಂಭದಲ್ಲಿ ಸಮಾಜಬಾಂಧವರು, ವ್ಹಿಜನ್ ಸದಸ್ಯರು ಪಾಲ್ಗೋಂಡಿದ್ದರು.