ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಮಾಧ್ಯಮದ ಸಹಕಾರ ಅಗತ್ಯ: ರಾಘವೇಂದ್ರ ರಾವ್


(ಸಂಜೆವಾಣಿ ಪ್ರತಿನಿಧಿಯಿಂದ)
ಕುರುಗೋಡು, ಜು.29: ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ತಹಸಿಲ್ದಾರ್ ಕೆ.ರಾಘವೇಂದ್ರರಾವ್ ಅವರು ಕಾರ್ಯಕ್ರಮ‌ ಉದ್ಘಾಟಿಸಿ. ಮಾಧ್ಯಮ ಕ್ಷೇತ್ರ ಬೆಳೆದು ಬಂದಿದ್ದನ್ನು ವಿವರಿಸಿ. ಮಾಧ್ಯಮ ಕ್ಷೇತ್ರ ಆಡಳಿತ ನಡೆಸುವವರ ಜವಬ್ದಾರಿ ಹೆಚ್ವಿಸುತ್ತವೆ ಎಂದ ಅವರು. ಆಡಳಿತ ನಡೆಸುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಾಜದ ಸಂಕಷ್ಟಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಮಾಧ್ಯಮ ಪ್ರತಿನಿಧಿಗಳ ವರದಿಗಳ ಮೂಲಕ ಬೆಳಕು ಚೆಲ್ಲಬೇಕು ಎಂದರು. ವಿದ್ಯಾರ್ಥಿಗಳು ದಿನ‌ನಿತ್ಯ ಪತ್ರಿಕೆಗಳನ್ನು ಓದಿದರೆ ಸತ್ಪ್ರಜೆಗಳಾಗಲು, ಸ್ಪರ್ಧಾ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ. ಗ್ರಾಮದಲ್ಲಿನ ಗ್ರಂಥಾಲಯಗಳಲ್ಲಿ ಸಹ‌ ಪತ್ರಿಕೆಗಳು ಲಭ್ಯ ಆಗುತ್ತಿವೆ ಅದರ ಸದುಪಯೋಗ ಆಗಬೇಕು ಎಂದ ಅವರು. ದೇಶದ ಸ್ವಾತಂತ್ರ ಹೋರಾಟದಲ್ಲೂ ಪತ್ರಿಕೆಗಳು ಮಹತ್ವದ ಪಾತ್ರ ವಹಿಸಿದ್ದವು. ಇಂದು ಸಹ ನಾವು ಆಡಳಿತದಲ್ಲಿ ಆದ ತಪ್ಪುಗಳ ಮೇಲೆ ಸಮಸ್ಯೆಗಳ ಬಗ್ಗೆ ವರದಿ ಮಾಡಿದಾಗ ಅವನ್ನು ಬಗೆಹರಿಸಲು ಸಹಕಾರಿಯಾಗಿದೆ. ಸರ್ಕಾರದ ಯೋಜನೆಗಳ ಬಗ್ಗೆ ಜನತೆಗೆ ಮುಟ್ಟಿಸಲು ಸಹ ಈ ಕ್ಷೇತ್ರ ಮಹತ್ವದ ಪಾತ್ರ ವಹಿಸಿದೆಂದರು.
ಸಂಘದ ತಾಲೂಕು ಅಧ್ಯಕ್ಷ ಎ.ವಾಗಿಶ್ ಅಧ್ಯಕ್ಷತೆವಹಿಸಿ ಮಾಧ್ಯಮಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ನಡೆಯುತ್ತದೆ. ಇಂದು ಬದಲಾದ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಸೋಷಿಯಲ್ ಮೀಡಿಯಾದಲ್ಲಿ ವಿಸ್ತರಿಸಿ ವಿಶ್ವ ಎಲ್ಲೇ ಇರಲಿ ಎಲ್ಲಾ ಭಾಷೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದರು.
ಕೋವಿಡ್ ಕಾಲದ ಮಾಧ್ಯಮ ಕ್ಷೇತ್ರದ ಸಂಕಷ್ಟಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್. ವೀರಭದ್ರಗೌಡ ಅವರು ಮಾತನಾಡಿ. ಕೋವಿಡ್ ಸಂಕಷ್ಟ. ಎಂಬುದು ಕೇವಲ ಮಾಧ್ಯಮ‌ಕೇತ್ರವನ್ನಷ್ಟೇ ಅಲ್ಲ ಇಡೀ ವಿಶ್ವವನ್ನೇ ಸಂಕಷ್ಟಕ್ಜೆ ಸಿಲುಕಿಸಿತ್ತು. ಕೋವಿಡ್ ಕಾಲದಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ಹೋಗಿ ಸರಬರಾಜು ಮಾಡುವ ವ್ಯವಸ್ಥೆಗೆ ಶೀಲ್ ಡೌನ ಸಮಸ್ಯೆ ತಂದಿತ್ತು. ಇನ್ನು ವರದಿಗಾರರು ಕೋವಿಡ್ ಸೋಂಕಿನ ಹರಡುವಿಕೆಯ ಮಧ್ಯೆಯೇ ಎಲ್ಲ ಪ್ರದೇಶಗಳಿಗೆ ತೆರಳಿ ಕೋವಿಡ್ ಪರಿಸ್ಥಿತಿ ಯ ವರದಿ ಮಾಡಿದ್ದರು. ಅನೇಕರು ಸೋಂಕಿನಿಂದ ಸಾವನ್ನಪ್ಪಿದರು. ಪತ್ರಿಕೆಗಳ ಪ್ರಸಾರ ಕುಸಿಯಿತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಅನೇಕ ಸಿಬ್ಬಂದಿ ಕೆಲಸ ಕಳೆದುಕೊಂಡರು. ವೇತನ ಕಡಿತ ಹೀಗೆ ಮಾಧ್ಯಮದ ಮಾಲೀಕರು ಮತ್ತು ಸಿಬ್ಬಂದಿ ಸಂಕಷ್ಟ ಎದುರಿಸಬೇಕಾಯ್ತು ಎಂದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪಿಎಸ್ ಐ ಮಣಿಕಂಠ, ಕೃಷಿ ಅಧಿಕಾರಿ ದೇವರಾಜ್, ಉಪ ನೋಂದಣಾಧಿಕಾರಿ ತೇಜಸ್ವಿನಿ ನಾಯಕ್, ಪುರಸಭೆ ಅಧಿಕಾರಿ ಪರುಶುರಾಮ್, ತಾಲೂಕು ಪಂಚಾಯ್ತಿಯ ಬಸವರಾಜ್, ಪ್ರಾಂಶುಪಾಲ ವೇಣುಗೋಪಾಲ್, ಉಪ ಪ್ರಾಂಸುಪಾಲ ಮಾರುತಿ ಗಾಳಿ, ಡಿಟಿಓ ಮಲ್ಲೇಶಪ್ಪ, ಮಾಧ್ಯಮ ಪ್ರತಿನಿಧಿಗಳಾದ ವೀರೇಶ್, ಸುಧಾಕರ್ ಮಣ್ಣೂರು, ಪಂಪಾಪತಿಗೌಡ, ಸತೀಶ್, ಬಸಯ್ಯಸ್ವಾಮಿ, ಪಂಪನಗೌಡ ಮೊದಲಾದವರು ಇದ್ದರು.