
ಕೋಲಾರ,ಮೇ,೪-ಡಬಲ್ ಎಂಜನ್ ಸರ್ಕಾರವೆಂದು ಹೇಳಿ ಕೊಂಡು ರಾಜ್ಯ ಬಿಜೆಪಿ ಸರ್ಕಾರವು ಶೇ ೪೦ ಕಮೀಷನ್ ಮೂಲಕ ಜನತೆಯ ಸಂಪತ್ತನ್ನು ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಚುನಾವಣೆ ವೀಕ್ಷಕ ಹಾಗೂ ಬಿಹಾರ ಶಾಸಕ ಡಾ. ಶಕೀಲ್ ಆಹ್ಮದ್ ಖಾನ್ ಆರೋಪಿಸಿದರು
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ರಾಷ್ಟ್ರೀಯತೇ, ಹಿಂದುತ್ವದ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಬಡಜನತೆಯ ದಿನಬಳಕೆ ವಸ್ತುಗಳ ಬೆಲೆಗಳನ್ನು ಗಗನಕ್ಕೆ ಏರಿಕೆ ಮಾಡಿದೆ. ಸೌದೆ ಬಳಕೆ ಮಾಡಬಾರದು ಇದರಿಂದ ಪರಿಸರ ಹಾಳಾಗುತ್ತದೆ ಅರಣ್ಯವನ್ನು ಸಂರಕ್ಷಿಸಿ ಪರಿಸರ ಉಳಿಸ ಬೇಕೆಂದು ಉಜ್ವಲ ಯೋಜನೆ ಜಾರಿಗೆ ತಂದು ಉಚಿತವಾಗಿ ಎರಡು ಸಿಲಿಂಡರ್ ವಿತರಿಸಿ ನಂತರ ೪೦೦ ರೂ ಇದ್ದ ಸಿಲಿಂಡರ್ ಬೆಲೆಯನ್ನು ಹಂತ,ಹಂತವಾಗಿ ಏರಿಕೆ ಮಾಡುತ್ತಾ ಇಂದು ಮೂರು ಪಟ್ಟು ಏರಿಕೆ ಅಗಿದೆ ಇದರಿಂದ ಬಡಜನತೆ ಮತ್ತೇ ಸೌದೆ ಒಲೆಗಳ ಮೊರೆ ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದೇ ರೀತಿ ಪೆಟ್ರೋಲ್, ಡಿಸೇಲ್ ಬೆಲೆಗಳನ್ನು ಏರಿಕೆ ಮಾಡಿ ವಾಹನಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಸಾರ್ವಜನಿಕರನ್ನು ಹಂತ,ಹಂತವಾಗಿ ಲೂಟಿ ಮಾಡುವ ಕುತಂತ್ರ ಮಾಡುತ್ತಿದೆ ಎಂದು ದೂರಿದರು,
ಬಿಜೆಪಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದು ಕೊಂಡಿದೆ. ಇಂತಹ ಭ್ರಷ್ಟಚಾರದ ಪಕ್ಷಕ್ಕೆ ಮತ ನೀಡದೇ ಸಮಾಜದಲ್ಲಿ ಸೌಹಾರ್ದತೆ ಬಯಸುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಬಜರಂಗದಳ ಸೇರಿದಂತೆ ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಸಂಘಟನೆಯನ್ನು ಹತ್ತಿಕ್ಕುತ್ತೇವೆ. ಜನರ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಿ ಸಮಾಜವನ್ನು ಒಡೆದು ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಈ ರೀತಿ ಅಶಾಂತಿ ಸೃಷ್ಠಿಸುವಂತ ಯಾವೂದೇ ಸಂಘಟನೆಗಳಾಗಲಿ, ಪಕ್ಷವಾಗಲಿ ಅದರ ವಿರುದ್ದ ಕಠಣ ಕ್ರಮ ಜರುಗಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ, ಅದು ಬಜರಂಗದಳ ಅಥವಾ ಪಿ.ಎಫ್.ಐ. ಸೇರಿದಂತೆ ಯಾವೂದೇ ಸಂಘಟನೆ ಅಗಿರಲಿ ಎಂದು ಮಾದ್ಯಮದವರ ಬಜರಂಗದಳ ಬ್ಯಾನ್ ಕುರಿತು ಕಾಂಗ್ರೆಸ್ ಪ್ರಾಣಾಳಿಕೆ ಕುರಿತಾದ ಪ್ರಶ್ನೆಗೆ ಅವರು ಸ್ವಷ್ಟ ಪಡೆಸಿದರು,
ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದಿಂದ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ,ಜನರ ಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ಟೀಕಿಸಿದ ಅವರು ಮಹಿಳೆಯರ ಸಶಕ್ತೀಕರಣವಾಗಿಲ್ಲ, ಇಲ್ಲಿ ಶೋಷಿತರಿಗೆ ನ್ಯಾಯ ಸಿಕ್ಕಿಲ್ಲ, ಬಿಜೆಪಿ ಸಂಸದರು ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನಡೆಸುತ್ತಿದ್ದಾರೆ ಎಂದು ಮಹಿಳೆಯರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಮೋದಿಯವರಿಗೆ ಕಾಣುತ್ತಿಲ್ಲ ಎಂದರು.
ಬಿಜೆಪಿ ಆಡಳಿತದಲ್ಲಿ ಸದ್ಬಾವನೆಯ ಮೇಲೆ ಪ್ರಹಾರ ನಡೆಯುತ್ತಿದೆ, ಕಾಂಗ್ರೆಸ್ ಪಕ್ಷ ಬಿಜೆಪಿಯಂತೆ ಸುಳ್ಳಿನ ಭರವಸೆ ನೀಡುತ್ತಿಲ್ಲ, ನಾವು ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸುತ್ತೇವೆ, ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ಪ್ರಣಾಳಿಕೆ ನಿಮ್ಮ ಮುಂದಿದೆ. ಸರ್ವರಿಗೂ ನ್ಯಾಯ ಒದಗಿಸುವ ಪ್ರಣಾಳಿಕೆ ಇದಾಗಿದೆ ಎಂದ ಅವರು, ಮೀಸಲಾತಿ ವಿಚಾರದಲ್ಲಿ ಬಿಜೆಪಿ ಗೊಂದಲ ಸೃಷ್ಟಿಸಿದೆ, ಅಲ್ಪಸಂಖ್ಯಾತರ ಮೀಸಲಾತಿ ಕಸಿದುಕೊಂಡಿದೆ, ಇಂತಹ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ನಂಬುವುದು ಹೇಗೆ ಎಂದು ಪ್ರಶ್ನಿಸಿದರು.
ಎಲ್ಲಾ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುಂದಿದೆ ಸ್ಪಷ್ಟ ಬಹುಮತ ಪಡೆಯಲಿದೆ, ಕರ್ನಾಟಕ ವಿಧಾನಸಭಾ ಚುನಾವಣೆ ಮುಂದಿನ ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ಸಿನ ಸರ್ಕಾರ ಬರಲು ಮುನ್ನುಡಿ ಬರೆಯಲಿದ್ದು, ಇದು ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿಕೊಂಡರು.
ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕಾಂಗ್ರೆಸ್ ಪದಾಧಿಕಾರಿಗಳಾದ ಮಹಮದ್ ಅಕ್ರಂ, ಸ್ಯಾಂಡ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್,ಮಣಿ ಇದ್ದರು.