ಸಮಾಜದ ಮೀಸಲಾತಿ ಹೋರಾಟದಲ್ಲಿ ಯತ್ನಾಳ ಮುಂಚೂಣಿಯಲ್ಲಿದ್ದಾರೆ: ಬಸವ ಜಯಮೃತುಂಜಯ ಸ್ವಾಮೀಜಿ

ವಿಜಯಪುರ, ಎ.17-ಇಂದು ವಿಜಯಪುರದಲ್ಲಿ ಶ್ರೀ ಬಸವ ಜಯಮೃತುಂಜಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕಿತ್ತೂರ್ ನಾಡಿನ “ಪಂಚಾಶ್ವ “ಕುದುರೆಯನ್ನು ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಗನಾದ ಶ್ರೀ ರಾಮನಗೌಡ ಬಿ ಪಾಟೀಲ್ ಯತ್ನಾಳ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ ಮಾತನಾಡಿ ಬೆಂಗಳೂರಿನಲ್ಲಿ ನಡೆದ 2ಂ ಮೀಸಲಾತಿ ಧರಣಿ ಸತ್ಯಾಗ್ರಹದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಮಾಜದ ಮುಖಂಡರಾದ ಮಡಿವಾಳಪ್ಪ ಅಂಗಡಿ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕುದುರೆಯನ್ನು ಕೊಡುವುದಾಗಿ ಘೋಷಣೆ ಮಾಡಿದ್ದರು ಅದರಂತೆ ಮೊನ್ನೆ ನಡೆದ ಬೈಲಹೊಂಗಲದಲ್ಲಿ ಯತ್ನಾಳ್ ಅವರಿಗೆ ಪಂಚಶ್ವ ಕುದುರೆಯನ್ನು ನೀಡಿದ್ದರು ಅದನ್ನು ಇ0ದು ವಿಜಯಪುರ ನಗರದಲ್ಲಿ ಅವರ ಸುಪುತ್ರರಿಗೆ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಸಮಾಜದ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಾಗಿ ನಿರ್ಮಿಸಿದ ಯತ್ನಾಳ ಗೌಡ್ರಿಗೆ ಈ ಗೌರವ ಸಲ್ಲಿಸುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶಂಕರಗೌಡ ಬಿರಾದಾರ್ ಪಂಚ ಸೇನೆ ರಾಜ್ಯಾಧ್ಯಕ್ಷ ರಾದ ಡಾಕ್ಟರ್ ಬಸನಗೌಡ ಪಾಟೀಲ ನಾಗರಾಳಹುಲಿ ವಿಜಯಪುರ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಬಿಎಂ ಪಾಟೀಲ್ ದೇವರಹಿಪ್ಪರಗಿ ನಗರ ಘಟಕದ ಅಧ್ಯಕ್ಷರಾದ ಶ್ರೀಶೈಲ ಬುಕ್ಕಾಣಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಸೋಮಶೇಖರ್ ದೇವರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಸೋಲಾಪುರ ಮುಖಂಡರಾದ ರಾಜುಗೌಡ ಪೆÇಲೀಸಪಾಟೀಲ್ ಸುನೀಲ ಚಿಕ್ಕೊಂಡ ಸಂಜು ಬಿರಾದಾರ ಜಿಲ್ಲಾ ಕಾರ್ಯಾಧ್ಯಕ್ಷರಾದ ಸಿ.ಎಸ್ ಸೊಲ್ಲಾಪುರ್ ಸದಾಶಿವ ಅಳ್ಳಿಗಿಡದ ಪ್ರವೀಣ್ ಪಾಟೀಲ್ ಸಿದ್ದು ಹಳ್ಳೂರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.