ಸಮಾಜದ ಬೆಳವಣಿಗೆಗೆ ಮಹಿಳೆಯರ ಪಾತ್ರ ಹಿರಿದು

ಸಂಜೆವಾಣಿ ವಾರ್ತೆ
ಹುಮನಾಬಾದ್ :ಮಾ.24: ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ. ಹೀಗಾಗಿ ಮಹಿಳೆಯರನ್ನು ಎಲ್ಲರೂ ಗೌರವ ಮನೋಭಾವನೆಯಿಂದ ಕಾಣಬೇಕು ಎಂದು ಸಂಚಾರಿ ಪಿಎಸ್‍ಐ ರೇಣಿಕಾದೇವಿ ಹೇಳಿದರು.
ಪಟ್ಟಣದ ಟೀಚರ್ ಕಾಲೋನಿಯ ದೇವಿಂದ್ರಪ್ಪ ಪಾಟೀಲ್ ಅವರ ಮನೆಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರವ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವತಿಯರು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ಪಡೆದು ವಿವಿಧ ರಂಗಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಕಸಾಪ ಜಿಲ್ಲಾ ಉಪಾಧ್ಯಕ್ಷ ವಿರಣ್ಣ ಕುಂಬಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಅನೇಕರಿಗೆ ಗೌರವ ಹಾಗೂ ಸನ್ಮಾನ ಕಲ್ಪಿಸಿಕುಡವ ವೇದಿಕೆ ಅದರಲ್ಲು ಮಹಿಳೆಯರಿಗೆ ಗೌರವ ಕುಡುವ ನಾಗರಿಕ ಸಮಾಜದ ಕರ್ತವ್ಯ ಈ ನಿಟ್ಟಿನಲ್ಲಿ ಪರಿಷತ್ತು ತನ್ನ ಕಾರ್ಯ ಮಾಡುತ್ತಿದೆ ಎಂದು ನುಡಿದರು.
ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಗೀತಾರೆಡ್ಡಿ ಮಾತನಾಡಿ, ತಾಲ್ಲೂಕು ಕಸಾಪ ಇಲ್ಲಿವರೆಗೆ ಅನೇಕ ಕಾರ್ಯಕ್ರಮ ನಿರಂತರ ಮಾಡಿಕೊಂಡು ಬರುತ್ತಿದೆ ಅದರಲ್ಲು ವಿμÉೀಶವಾಗಿ ಮಹಿಳೆಯರಿಗೆ ಗೌರವಿಸುವ ಹಾಗೂ ಮಹಿಳೆಯರಿಗೆ ವೇದಿಕೆ ಕಲ್ಪಿಸಿಕೋಡುವ ಕಾರ್ಯ ಮಡುತ್ತಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ್ ಅಂಬಿಕಾ ಚಳಕಾಪೂರೆ, ಶಿಲಾವತಿ ಖೆಳಗಿ, ಭವ್ಯ ಕಲ್ಯಾಣ, ರೇಣುಕಾ ಸೇರಿಕಾರ, ವೀರೇಖಾ ಪಾಟೀಲ್‍ಗೆ ಕಸಾಪ ವತಿಯಿಂದ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಸಾಪ ಅಧ್ಯಕ್ಷ ಸಿದ್ಧಲಿಂಗ ನಿರ್ಣಾ, ಗೌರವ ಕಾರ್ಯದರ್ಶಿ ಶ್ರೀಕಾಂತ ಸೂಗಿ, ಮಡೆಪ್ಪ ಕುಂಬಾರ, ಶಶಿಧರ ಪಾಟೀಲ, ರಮೇಶರೆಡ್ಡಿ, ಜೈವಂತ ಉಪಾರ, ಈಶ್ವರ ತಡೋಳ, ವಿಜಯಕುಮಾರ ಚಟ್ಟಿ, ಮಲ್ಲಿಕಾರ್ಜನ ಸಂಗಮಕರ, , ಶೋಭಾ ಔರಾದೆ, ಗೀತಾ ಚಟ್ಟಿ, ರಾಜೇಶ್ರೀ ಜೇಲರ್, ಶೀಲಾ ಮಡಿವಾಳ, ರೇಷ್ಮ ಮಡಿವಾಳ, ಪ್ರೀಯಾಂಕಾ ಬತಲೆ,ಮೇಘನಾ ರೆಡ್ಡಿ, ಲಲಿತಾ, ನಿರ್ಮಲ ರಾಯಚುರಕರ, ಗೌರಮ್ಮ ಬಾಲಕುಂದೆ, ಭುವನೇಶ್ವರಿ ಪಾಟೀಲ್, ಸುನಿತಾ ಪಾಟೀಲ್ ಇದ್ದರು.