
ಕೋಲಾರ,ಆ.೧- ಶಿಕ್ಷಣಕ್ಕಾಗಿ ವಿಜ್ಞಾನ ಜೊತೆ-ಜೊತೆಗೆ ಈಗ ಜನರೆಡೆಗೆ ವಿಜ್ಞಾನ ಎಂಬ ಉದ್ದೇಶದಿಂದ ವಿಜ್ಞಾನ ಹಾಸುಹೊಕ್ಕಾಗಿದ್ದು, ವಿಜ್ಞಾನ ಮತ್ತು ವಿಜ್ಞಾನಿಗಳನ್ನು ತಯ್ಯಾರ ಮಾಡುವ ಜವಾಬ್ದಾರಿ ಪ್ರತಯೊಬ್ಬರ ಮೇಲೆ ಇದೆ ಎಂದು ಶ್ರೀನಿವಾಸಪುರ ತಾಲ್ಲೂಕು ಜ್ಞಾನ ವಿಜ್ಞಾನ ಸಮಿತಿಯ ನೂತನ ಅಧ್ಯಕ್ಷ ಉಪನ್ಯಾಸಕ ಗೋಪಿನಾಥ ತಿಳಿಸಿದರು.
ಕೋಲಾರ ನಗರದ ಸರ್ಕಾರಿ ಬಾಲಕಿಯರ ಪದು ಪೂರ್ವ ಕಾಲೇಜಿನಲ್ಲಿಂದು ಜ್ಞಾನ ವಿಜ್ಞಾನ ಸಮಿತಿಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಪಡೆದು ಮಾತನಾಡಿದರು.
ಏನು..? ಏಕೆ..? ಮತ್ತು ಹೇಗೆ..? ಎಂಬ ಕುತೂಹಲ ಪ್ರಶ್ನೆಗಳನ್ನು ಆರಂಭದಿಂದಲೇ ಹುಟ್ಟುಹಾಕುವ ವಿಜ್ಞಾನ ದೇಶದ ಪ್ರಗತಿಯಲ್ಲಿ ತನ್ನದೇ ವಿಶಿಷ್ಟ ಸ್ಥಾನ ಪಡೆದಿದೆ ಎಂದರು.
ಪ್ರಯೋಗ, ರಸಪ್ರಶ್ನೆ, ಜಾಥಾ, ಪ್ರಬಂಧಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸಿ ಸಮಾಜದ ಮುಖ್ಯವಾಹಿನಿಗೆ ವಿಜ್ಞಾನ ಪರಿಚಯಿಸಲು ಪೋಷಕರ ಸಹಕಾರ ಅಗತ್ಯ ಎಂದರು.
ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ವಿಜ್ಞಾನ ಎಲ್ಲೆಡೆ ಹಾಸುಹೊಕ್ಕಾಗಿದ್ದು,ಇದನ್ನು ಅರಿಯಲು ಭಾಲ್ಯದಿಂದಲೇ ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಾರೆ. ಇದಕ್ಕಾಗಿ ಮೊದಲು ನೋಡಿ-ಕಲಿ,ಮಾಡಿ-ಕಲಿ, ಕೇಳಿ-ಕಲಿ ಎಂಬ ಮೂರಂಶದಿಂದ ಜ್ಞಾನದಾಸೋಹಿಗಳಾಗುತ್ತಾರೆ ಎಂದರು.
ಖಜಾಂಚಿ ಕೆ.ವಿ ಜಗನ್ನಾಥ ಮಾತನಾಡಿ ಸಮಿತಿಯಿಂದ ಏರ್ಪಡಿಸುವ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಶಿಕ್ಷಕರ, ಪೋಷಕರ ನೆರವು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಮುಖಂಡರುಗಳಾದ ಕಾರ್ಯದರ್ಶಿ ಶರಣಪ್ಪ ಜಮಾದಾರ್, ಸಂಚಾಲಕ ಡಿ.ಎನ್ ಮುಕುಂದ, ಸಹಕಾರ್ಯದರ್ಶಿ ಎಸ್.ಸುರೇಶ್ ಕುಮಾರ್, ತಾಲ್ಲೂಕು ಪಧಾದಿಕಾರಿಗಳಾದ ಮಾಜಿ ಅಧ್ಯಕ್ಷ ಎಸ್.ರಮಣಪ್ಪ, ಮಂಜುನಾಥ, ಮಂಜೇಶ್, ಆಂಜಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು.