ಸಮಾಜದ ಬದಲಾವಣೆಯಾಗಬೇಕಾದರೆ ಮಾದ್ಯಮ ಬಹುಮುಖ್ಯಪಾತ್ರವಹಿಸುತ್ತದೆ

ಪಿರಿಯಾಪಟ್ಟಣ: ಜು.31:- ಸಮಾಜದಲ್ಲಿನ ಅನ್ಯಾಯ ಅಕ್ರಮಗಳು ಜನರಿಗೆ ತಲುಪಿಸಿ ಸಮಾಜದ ಬದಲಾವಣೆಯಾಗಬೇಕಾದರೆ ಮಾದ್ಯಮ ಬಹುಮುಖ್ಯಪಾತ್ರವಹಿಸುತ್ತದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣ ತಾ.ಪಂ. ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡಿದರು. ನಾನೂ ಕೂಡ ಬಹಳ ಹಿಂದೆ ಆಂದೋಲನ ಪತ್ರಿಕೆಯಲ್ಲಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ್ದೆ. ಇಂದು ಪತ್ರಿಕೆಗಳ ಹೆಚ್ಚು ಬರುತ್ತಿವೆ ಅವುಗಳ ನಡುವೆ ಪೈಪೆÇೀಟಿಯೂ ಇದೆ. ಇದರ ನಡುವೆ ಪತ್ರಕರ್ತರು ಸತ್ಯವಿಚಾರಗಳ ಪರವಾಗಿ ಸಾಮಾಜಿಕ ಬದ್ಧತೆಯನ್ನು ಇಟ್ಟುಕೊಂಡು ಕೆಲಸ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ನಿವೇಶನ ಮಂಜೂರು
ಪತ್ರಕರ್ತರ ಸಂಘದ ಕಚೇರಿ ನಿರ್ಮಾಣಕ್ಕೆ ಪಟ್ಟಣದ ವ್ಯಾಪ್ತಿಯಲ್ಲಿ 2 ಗುಂಟೆ ನಿವೇಶನವನ್ನು ಕೊಡಿಸುವ ಸಂಬಂಧ ಕ್ರಮವಹಿಸಲಾಗುವುದು. ಮತ್ತು ಮನೆ ಇಲ್ಲದೆ ಇರುವ ಪತ್ರಕರ್ತರಿಗೆ ಪುರಸಭೆ ನಿವೇಶನ ವಿತರಣೆ ಸಂದರ್ಭದಲ್ಲಿ ಫಲಾನುಭವಿಗಳ ಆಯ್ಕೆಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಭಾಷಣಕಾರಾಗಿ ಆಗಮಿಸಿದ ಹಿರಿಯ ಪತ್ರಕರ್ತರ ಅಂಶಿ ಪ್ರಸನ್ನಕುಮಾರ್ ಮಾತನಾಡಿ ಸರಕಾರದಲ್ಲಿ ನಾಲ್ಕನೇ ಅಂಗ ಎಂದು ಪತ್ರಿಕಾರಂಗವನ್ನು ಗುರುತಿಸಿದರೆ ಈಗ ಐದನೇ ಅಂಗವಾಗಿ ಸಾಮಾಜಿಕ ಜಾಲತಾಣಗಳು ಗುರುತಿಸಿಕೊಳ್ಳುತ್ತಿವೆ. ಹಿಂದೆ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ನಿವೇದನೆ ಮಾಡಿಕೊಳ್ಳುತ್ತಿದ್ದರು ಆದರೆ ಇಂದು ಪೈಪೆÇೀಟಿಯ ನಾಗಾಲೋಟಕ್ಕೆ ಬಿದ್ದಿರುವ ಟಿ.ವಿ.ಗಳು ವೇದನೆ ಮತ್ತು ಪ್ರಚೋದನೆಗೆ ಹೆಚ್ಚು ಒತ್ತು ಕೊಡುತ್ತಿವೆ. ಮಾದ್ಯಮಗಳು ಸಾಮಾಜಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಈ ವಿಚಾರದಲ್ಲಿ ಪತ್ರಿಕೆಗಳು ಇಂದಿಗೂ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬರುತ್ತಿವೆ. ಪತ್ರಕರ್ತರಾದವರು ತಮ್ಮ ನೆಲದ ಇತಿಹಾಸ ಪರಂಪರೆ ಎಲ್ಲವನ್ನು ಅರಿತಿರಬೇಕು ಎಂದು ತಿಳಿಸಿದರು.
ಬಹುಮಾನ ವಿತರಣೆ
ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿ ಇಂಪನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಬಹುಮಾನ, ಆದಿತ್ಯ ಅಕ್ಷರ ಪಿ.ಯು.ಕಾಲೇಜು ದ್ವಿತೀಯ ಬಹುಮಾನ ನೀಡಲಾಯಿತು. ಉಳಿದಂತೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
ಹಿರಿಯ ಪತ್ರಕರ್ತ ಪಿ.ಎಸ್.ವೀರೇಶ್‍ರನ್ನು ಸಂಘದವತಿಯಿಂದ ಸನ್ಮಾನಿಸಲಾಯಿತು. ಕಾರ್ಯ ಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಣ್ಣಪ್ಪ, ಜಿಲ್ಲಾ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ, ರಾಷ್ಟ್ರೀಯ ಪತ್ರಿಕಾ ಮಂಡಳಿ ಸದಸ್ಯ ಕಿರಣ್‍ಕುಮಾರ್, ಜಿಲ್ಲಾ ಸಂಘದ ನಿರ್ದೇಶಕ ಬಿ.ಆರ್.ಗಣೇಶ್, ತಾ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್.ಸತೀಶ್ ಆರಾಧ್ಯ, ಕಾರ್ಯದಶಿ ಪಿ.ಡಿ. ಪ್ರಸನ್ನ, ಉಪಾಧ್ಯಕ್ಷ ರವಿಚಂದ್ರ, ಗ್ರಾ.ಮಾ.ಕಾರ್ಯದರ್ಶಿ ಅಶೋಕ, ಖಜಾಂಜಿ ಪಿ.ಎನ್.ದೇವೇಗೌಡ, ಮಾಜಿ ತಾ.ಅಧ್ಯಕ್ಷ ಸಿ.ಎನ್.ವಿಜಯ್, ಸೇರಿದಂತೆ ಮತ್ತಿತರರು ಹಾಜರಿದ್ದರು.