ಸಮಾಜದ ಬದಲಾವಣೆಗಳ ಮೂಲ ಕಾರಣಕರ್ತ ಗುರು

ಹಗರಿಬೊಮ್ಮನಹಳ್ಳಿ: ನ.೧೫ ಸಮಾಜದ ಎಲ್ಲಾ ಬದಲಾವಣೆಗಳ ಮೂಲ ಕಾರಣಕರ್ತ ಗುರು, ಈ ಗುರುವಿಗೆ ಇರುವಂತಹ ಶ್ರೇಷ್ಠ ಸ್ಥಾನ ಜಗತ್ತಿನಲ್ಲಿ ಬೇರೆ ಯಾರಿಗೂ ಇಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಎಂ ಹೊರಪೇಟೆ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಮಕ್ಕಳ ಮೇಷ್ಟ್ರು ಎಲ್.ರೆಡ್ಡಿನಾಯ್ಕ ಫೌಂಡೇಷನ್ (ರಿ) ಬೆಂಗಳೂರು ಇವರಿಂದ ತೆರೆಯಲಾದ ಮಕ್ಕಳ ಅಧ್ಯಯನ ಕೇಂದ್ರದ ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಖಾಸಗಿ ಶಾಲೆ, ಆಂಗ್ಲ ಭಾಷೆಯಲ್ಲಿ ಶಿಕ್ಷಣ ಕಲಿತರೆ ಅದರಿಂದಲೇ ನಮ್ಮ ಮಕ್ಕಳ ಬದುಕು ಎಲ್ಲಾ ರೀತಿಯಲ್ಲೂ ಬದಲಾಗುತ್ತದೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ, ಆಂಗ್ಲ ಮಾಧ್ಯಮ ಒಂದು ಭಾಷೆಯಷ್ಟೇ. ಸಕರ್ಾರಿ ಶಾಲೆಗಳ ಬಗ್ಗೆ ನಕರಾತ್ಮಕ ಭಾವನೆಗಳನ್ನು ಬಿಟ್ಟು ಸಕರಾತ್ಮಕವಾಗಿ ವಿಚಾರ ಮಾಡಬೇಕಾಗಿದೆ. ಬದಲಾವಣೆಯನ್ನು ನಮ್ಮ ನಮ್ಮ ಮನೆಗಳಿಂದಲೇ ಪ್ರಾರಂಭಿಸಿದರೆ ಸಮಾಜ ತನ್ನಿಂದ ತಾನೇ ಬದಲಾಗುತ್ತದೆ ಮಕ್ಕಳ ಮೇಷ್ಟ್ರು ಎಲ್.ರೆಡ್ಡಿನಾಯ್ಕ ಫೌಂಡೇಷನ್ ನಿಂದ ತರೆಯಲಾದ ಮಕ್ಕಳ ಅಧ್ಯಯನ ಕೇಂದ್ರದ ಮೂಲಕ ಶಿಕ್ಷಕರಾದ ಎಲ್.ರೆಡ್ಡಿನಾಯ್ಕರವರು ಬಡ ಮಕ್ಕಳ ಭವಿಷ್ಯ ರೂಪಿಸಲು ನೆರವಾಗುತ್ತಿರುವುದು ಶ್ಲಾಘನೀಯ ವಿಚಾರ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಫೌಂಡೇಷನ್ನ ರಾಜ್ಯ ಅಧ್ಯಕ್ಷ ಜೆ.ಎಂ ವೀರಸಂಗಯ್ಯ ಹಸಿವಿನಿಂದ ಬಳಲಿ, ಕಷ್ಟ ನೋವುಗಳನ್ನು ಅನುಭವಿಸದವನು ಮಾತ್ರ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬಲ್ಲ. ರೆಡ್ಡಿನಾಯ್ಕರಿಗೆ ಹಸಿವು, ನೋವುಗಳ ಅರಿವು ಇರುವುದರಿಂದ ಇಂದು ಮಕ್ಕಳ ಅಧ್ಯಯನ ಕೇಂದ್ರ ತೆರೆದಿದ್ದಾರೆ. ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ಸ್ಪಧರ್ಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಈ ಕೇಂದ್ರ ನೆರವು ನೀಡಲಿದೆ ಎಂದರು.
ಹಿರಿಯ ಸಾಹಿತಿಗಳಾದ ಹುರುಕಡ್ಲಿ ಶಿವಕುಮಾರ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅಕ್ಕಿ ತೋಟೇಶರವರು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿದ್ದ ನಂದಿಪುರದ ಡಾ|| ಮಹೇಶ್ವರ ಸ್ವಾಮಿಯವರು ಮಾತನಾಡುತ್ತಾ ತ್ಮ ಚಿಕ್ಕಂದಿನಲ್ಲಿ ಸಹಪಾಠಿಯಾಗಿದ್ದ ರೆಡ್ಡಿನಾಯ್ಕರನ್ನು ಸ್ಮರಿಸಿ ಹಂಪಸಾಗರದಲ್ಲಿ ತಮ್ಮ ಶಾಲಾ ಗುರುಗಳ ಮನೆಯಲ್ಲಿ ನಾವಿಬ್ಬರೂ ಸೇವೆ ಸಲ್ಲಿಸುತ್ತಾ ವಿದ್ಯಾಭ್ಯಾಸ ಮಾಡಿದೆವು ಎಂದರು. ಹ.ಬೊ.ಹಳ್ಳಿಯ ಶ್ರೀ ಹಾಲ ಶಂಕರ ಸ್ವಾಮಿಗಳು ಶುಭ ಆಶೀರ್ವದಿಸಿದರು.
ಮಕ್ಕಳ ಮೇಷ್ಟ್ರು ಎಲ್.ರೆಡ್ಡಿನಾಯ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಮಕ್ಕಳ ಮೇಷ್ಟ್ರು ಎಲ್.ರೆಡ್ಡಿನಾಯ್ಕರು ಮಕ್ಕಳ ಅಧ್ಯಯನ ಕೇಂದ್ರಕ್ಕೆ ಒಂದು ಲಕ್ಷ ರೂಪಾಯಿಗಳ ಚೆಕ್ನ್ನು ಫೌಂಡೇಷನ್ನ ರಾಜ್ಯಾಧ್ಯಕ್ಷರಾದ ಜೆ.ಎಂ.ವೀರಸಂಗಯ್ಯನವರಿಗೆ ನೀಡಿದರು.
ಪ್ರಾರಂಭದಲ್ಲಿ ಮಕ್ಕಳ ಮೇಷ್ಟ್ರು ಎಲ್.ರೆಡ್ಡಿನಾಯ್ಕ ಫೌಂಡೇಷನ್ (ರಿ) ಬೆಂಗಳೂರು ಇದರ ಪದಾಧಿಕಾರಿಗಳು ಗುರುಹಿರಿಯರ ಸಮಕ್ಷಮದಲ್ಲಿ ಪದಗ್ರಹಣ ಮಾಡಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಲ್.ಡಿ.ರವಿನಾಯ್ಕ, ಪುರಸಭೆ ಸದಸ್ಯ ಅಲ್ಲಾಭಕ್ಷಿ, ತಾ.ಪ್ರಾ.ಶಿ.ಸಂಘದ ಅಧ್ಯಕ್ಷ ಹೆಚ್.ಲೋಕಪ್ಪ, ದಾವಣಗೆರೆಯ ಎಂ.ಗುರುಸಿದ್ದಸ್ವಾಮಿ, ಹೆಚ್.ಚಂದ್ರಪ್ಪ, ಮತ್ತಿತರರು ವೇದಿಕೆ ಮೇಲಿದ್ದರು.
ಮಕ್ಕಳ ದಿನಾಚರಣೆ ಅಂಗವಾಗಿ ಪಟ್ಟಣದ ಶಿಕ್ಷಕ ಸುಬಾನಿಯವರ ಮಗಳಾದ ಕರಾಟೆಪಟು ಕುಮಾರಿ ಸಾನಿಯ ಇವರು ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಫಧೆ ಭಾಗವಹಿಸಿ ಸಾಧನೆ ಮಾಡಿದ್ದರಿಂದ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಫೌಂಡೇಷನ್ ರಾಜ್ಯ ಕಾರ್ಯದರ್ಶಿ ನೌಲಿ ರಮೇಶ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಬಿ.ಕೊಟ್ರಪ್ಪ ಸ್ವಾಗತಿಸಿದರು. ಶಿಕ್ಷಕ ಎಸ್.ಕೊಟ್ರೇಶ್ ವಂದಿಸಿದರು
ಖ್ಯಾತ ಸುಗಮ ಸಂಗೀತಗಾರ ಪ್ರಕಾಶ್ ಜೈನ್ರು ಪ್ರಾರ್ಥನೆ ಕನ್ನಡ ಗೀತೆಗಳನ್ನು ಹಾಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅನೇಕ ಶಿಕ್ಷಕರು, ಸಾರ್ವಜನಿಕರು ಜನ ಭಾಗವಹಿಸಿದ್ದರು.