ಸಮಾಜದ ಬಡ ವಿದ್ಯಾರ್ಥಿಗಳ ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಮುಂದಾಗುವಂತೆ ಪರಮೇಶ್ವರಪ್ಪ ಕರೆ

ಚಾಮರಾಜನಗರ, ಜ. 06- ಸರ್ಕಾರಿ ನೌಕÀರಿಯಲ್ಲಿರುವ ಪದಾಧಿಕಾರಿಗಳು ಸಮಾಜದಲ್ಲಿರುವ ಬಡ ವಿದ್ಯಾರ್ಥಿಗಳ ಪ್ರಗತಿಗೆ ಹಾಗೂ ಗ್ರಾಮಾಂತರ ಪ್ರದೇಶ ಯುವಕರಿಗೆ ಮಾರ್ಗದರ್ಶಕರಾಗಿ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ದಿ ಪಡಿಸಲು ಮುಂದಾಗಬೇಕು ಎಂದು ಜಿಲ್ಲಾ ವೀರಶೈವ- ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಡಾ. ಪರಮೇಶ್ವರಪ್ಪ ತಿಳಿಸಿದರು.
ನಗರದ ಮಹಾಮನೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘ ಹಾಗೂ ಗ್ರಾಮಲೆಕ್ಕಿಗರ ಸಂಘಕ್ಕೆ ಆಯ್ಕೆಯಾಗಿರುವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಘಟನೆ ಪ್ರಬಲಗೊಳಿಸುವ ಮೂಲಕ ನಮ್ಮ ಛಾಪು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಇದಕ್ಕಾಗಿ ಮಹಾಮನೆ ಸದಾ ಸಿದ್ದವಿದೆ. ತಮ್ಮಗಳ ಯಾವುದೇ ಸಮಸ್ಯೆ ಹಾಗೂ ಸಂಘಟನೆ ವಿಚಾರದಲ್ಲಿ ನಮ್ಮಗಳ ಸಲಹೆ, ಸಹಕಾರ ಇರುತ್ತದೆ ಎಂದು ಅಭಯ ನೀಡಿದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘ ಸಮುದಾಯ ಇದ್ದು, ಒಗ್ಗಟ್ಟಿನಿಂದ ಹೆಚ್ಚು ಮಂದಿಯನ್ನು ಗೆಲ್ಲಿಸುವ ಮೂಲಕ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದೀರಿ. ಅದೇ ರೀತಿ ಇತರೇ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಬಸವಣ್ಣನವರ ಸಮಾನತೆ ತತ್ವವನ್ನು ಪಾಲನೆ ಮಾಡಬೇಕು. ನಮ್ಮ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಸಮಾಜವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಮುಂದಾಗಬೇಕು. ಈಗ ಪದಾಧಿಕಾರಿಗಳು ಬಹಳಷ್ಟು ಮಂದಿ ತಮ್ಮ ಕೆಲಸದ ಒತ್ತಡದಲ್ಲಿ ಮಹಾಮನೆಯತ್ತ ಬರುವುದು ಕಷ್ಟ ಸಾಧ್ಯವಾಗುತ್ತಿದೆ. ಅದರೂ ಸಹ ಸಂಘಟನೆ ದೃಷ್ಟಿಯಿಂದ ಇದು ಸಮಾಜದ ಸ್ವತ್ತು ಆಗಿದ್ದು, ತಾವೆಲ್ಲರು ಭಾಗವಹಿಸಬೇಕು ಎಂದು ಪರಮೇಶ್ವರಪ್ಪ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ಕೆ.ಎಸ್. ಮಾದಪ್ಪ, ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಮಲ್ಲಿಕಾರ್ಜುನ ಕುಂಟೋಜಿ, ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಆರ್. ಉಲ್ಲಾಸ್, ಶಿಕ್ಷಕರ ಸಂಘದ ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಸಹ ಕಾರ್ಯದರ್ಶಿ ಗೀತಾ, ಗುಂಡ್ಲುಪೇಟೆ ತಾಲೂಕು ಸಂಘದ ಅಧ್ಯಕ್ಷ ಶಿವಪ್ರಸಾಧ್, ಪ್ರಧಾನ ಕಾರ್ಯದರ್ಶಿ ಭರತ್‍ಭೂಷನ್, ಸಹ ಕಾರ್ಯಧರ್ಶಿಗಳಾದ ಸವಿತಾರಾಣಿ, ಸಿ. ಮಹದೇವಸ್ವಾಮಿ, ಬಿ. ಮನು, ನಿರ್ದೇಶಕರಾದ ಮಹೇಶ್, ಸಿದ್ದಲಿಂಗಮೂರ್ತಿ, ಸಿ. ಅನಿತಾ, ಉಮೇಶ್ ಅವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸಿದ್ದಮಲ್ಲಪ್ಪ, ಕಾರ್ಯದರ್ಶಿ ಎನ್. ಮಹದೇವಸ್ವಾಮಿ ಐಟಿಐ, ಖಜಾಂಚಿ ಎಸ್. ಮಹದೇವಸ್ವಾಮಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗ ಪ್ರಕಾಶ್, ಪದಾಧಿಕಾರಿಗಳಾದ ಬಸಪ್ಪ, ಅರ್ಕಪ್ಪ, ಆರ್.ಎಸ್. ಲಿಂಗಸ್ವಾಮಿ, ಶಿವಕುಮಾರ್, ಕೆ.ಎಸ್. ಮಹದೇವಸ್ವಾಮಿ ಪರಶಿವಮೂರ್ತಿ, ನಾಗರಾಜು, ನಂಜುಂಡಸ್ವಾಮಿ ಮೊದಲಾದವರು ಇದ್ದರು.