ಸಮಾಜದ ಪ್ರತಿಯೊಬ್ಬ ವ್ಯಕ್ತಿ ವೃತ್ತಿ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕುಃ ಎನ್.ಎ. ನಾವಿ

ವಿಜಯಪುರ, ಜು.14-ಶ್ರೀ ಹಡಪದ ಅಪ್ಪಣ್ಣ ವಿವಿದೋದ್ದೇಶಗಳ ಸಹಕಾರಿ ಸಂಘ ನಿಯಮಿತ ವಿಜಯಪುರ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣನವರ 888ನೇ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ನಿಂಗಪ್ಪ ಆನಪ್ಪ ನಾವಿ ಮಾತನಾಡಿ, ಬಸವಣ್ಣನವರ ಕಾಲಘಟ್ಟದಲ್ಲಿ, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರು ಜಾತೀಯತೆ, ಶೋಷಣೆಗಳ ವಿರುದ್ಧ ಹೋರಾಟ, ಸಾಮಾಜಿಕ ಸುಧಾರಣೆ, ಸಮಾನತೆಗಾಗಿ ಹೋರಾಡಿದ ಶರಣರಲ್ಲಿ ಒಬ್ಬರಾಗಿದ್ದಾರೆ. ಇಂತಹ ಶರಣರ ಅನುಯಾಯಿಗಳಾದ ನಮ್ಮ ಪೂರ್ವ ಜನ್ಮದ ಪುಣ್ಯವಾಗಿದೆ. ಶರಣರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ಜೀವನದಲ್ಲಿ ಸರಳತೆ, ಸಮನ್ವಯತೆ, ಭಾತೃತ್ವ, ಕಾಯಕ ನಿಷ್ಠೆಯನ್ನು ಪಾಲಿಸಿಕೊಂಡು ಹೋಗಬೇಕಾಗಿದೆ. ಕುಲಕಸಬನ್ನು ಕೀಳಾಗಿ ನೋಡದೇ ವೃತ್ತಿ ಗೌರವವನ್ನು ಪಾಲಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಮನುಷ್ಯ ತನ್ನ ಜೀವನದಲ್ಲಿ ಎಷ್ಟೇ ಗೌರವ ಸ್ಥಾನಗಳನ್ನು ಹೊಂದಿದ್ದರೂ ಸಹ ವೃತ್ತಿ ಗೌರವ ಎಂದಿಗೂ ಮರೆಯಬಾರದು. ಅದೇ ರೀತಿ 234 ವಚನಗಳನ್ನು ರಚಿಸಿರುವ ಅಪ್ಪಣ್ಣನವರು ಎಲ್ಲಿಯೂ ತಮ್ಮ ಜಾತಿ, ಕುಲಕಸುಬಿನ ಬಗ್ಗೆ ಕೀಳಾಗಿ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ಅದರನ್ವಯ ನಾವು ಸಹ ವೃತ್ತಿ ಗೌಪ್ಯತೆಯನ್ನು ಕಾಪಾಡಿಕೊಂಡು ಇತರರಿಗೆ ಮಾರ್ಗದರ್ಶಿಗಳಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಹಡಪದ ಅಪ್ಪಣ್ಣ ವಿವಿದೋದ್ದೇಶಗಳ ಸಹಕಾರಿ ಸಂಘದ ನಿರ್ದೇಶಕರಾದ ಶಿವಾನಂದ ಆರ್. ನಾವಿ, ಚಿದಾನಂದ ಹ. ತೊರವಿ, ಪರಮಾನಂದ ಶಿ. ಹಡಪದ, ಸಂಜೀವ ನಿ. ಹಡಪದ, ಅಶೋಕ ಬ. ಕಟ್ಟಿ, ಕಾರ್ಯನಿರ್ವಾಹಕರಾದ ಓಂಕಾರ ಸಂ.ನಾವಿ, ಪಿಗ್ಮಿದಾರರಾದ ಬಸಗೊಂಡ ಸಿ. ನಾವಿ, ಪತ್ರಕರ್ತ ಎಮ್.ಎಸ್. ಹಿರೇಮಠ ಇನ್ನಿತರರು ಉಪಸ್ಥಿತರಿದ್ದರು.