ಸಮಾಜದ ಪ್ರಗತಿಗೆ ಸಂಘಟನೆ ಅತಿ ಮುಖ್ಯ

ಧಾರವಾಡಫೆ.17: ಯಾವುದೇ ಸಮಾಜದ ಪ್ರಗತಿಗೆ ಸಂಘಟಣೆ ಮಹತ್ವದಾಗಿರುತ್ತದೆ. ಸವಿತಾ ಮಹರ್ಷಿಗಳ ಸಂದೇಶ ಮತ್ತು ಪ್ರೇರಣೆಯಿಂದ ಸವಿತಾ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಶಿಕ್ಷಣ ಮತ್ತು ಸಂಸ್ಕಾರಕ್ಕೆ ಆದ್ಯತೆ ನೀಡಲಾಗಿದೆ ಎಂದು ಧಾರವಾಡ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ ಅವರು ಹೇಳಿದರು.
ಅವರು ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕ್ರತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದಲ್ಲಿ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಇಂದು ಅನೇಕ ಸಮಾಜಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದರಿಂದ ಸಾಮಾಜಿಕ ಬದಲಾವಣೆ ಹಾಗೂ ಉದ್ಯೋಗಗಳಲ್ಲಿ ವೈವಿಧ್ಯತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಎಲ್ಲರಲ್ಲೂ ಸಮಾನತೆ ಮೂಡುತ್ತಿದ ಎಂದು ಹೇಳಿದರು.
ಪಾರಂಪರಿಕ ಅಥವಾ ಕುಲಕಸಬು ಹೆಸರಿನಲ್ಲಿ ಆಗುತ್ತಿದ್ದ ಶೋಷಣೆ, ಸಮಾಜಿಕ ಅಸಾಮನತೆ ಇಂದು ಕಡಿಮೆಯಾಗಿದೆ. ಜನರಲ್ಲಿ ಉದ್ಯೋಗವು ಐಚ್ಚಿಕ ಆಯ್ಕೆಯಾಗಿದೆ ಎಂದು ತಹಶೀಲ್ದಾರ ಹೂಗಾರ ಅವರು ತಿಳಿಸಿದರು.
ಬಾಗಲಕೋಟೆ ರನ್ನಬೇಳಗಲಿಯ ಯೋಗ ಶಿಕ್ಷಕ ಹಾಗೂ ಉಪನ್ಯಾಸಕ ರಾಘವೇಂದ್ರ ನೀಲನ್ನವರ ಅವರು ಶ್ರೀ ಸವಿತಾ ಮಹರ್ಷಿಗಳ ಕುರಿತು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾಜದ ಮುಖಂಡರಾದ ಕೃμÁ್ಣ ಎಂ ಉಪ್ಪೇರ, ಪರಶುರಾಮ ಬದ್ದೆಪಲ್ಲಿ, ಮೋಹನ ಗೋಲಿ, ಎಂ ವಿಜಯ ಭಾಸ್ಕರ, ಜೀವಣ್ಣಾ ರಾಂಪೂರ ಮತ್ತು ಸಮಾಜದ ಹಿರಿಯರು, ನಾಗರಿಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.