ಸಮಾಜದ ಪ್ರಗತಿಗೆ ಶಿಕ್ಷಣವೇ ಆಧಾರ

ಚಿತ್ರದುರ್ಗ. ಸೆ.೯; ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವಾಗ ತಾವು ಕಲಿತ ವಿದ್ಯಾಸಂಸ್ಥೆ, ತಮ್ಮ ತಂದೆ ತಾಯಿಯ ಆಶಯಗಳನ್ನು ಮರೆಯಬಾರದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವೆ ಡಾ. ಅನಿತಾ ಎಚ್ಎಸ್ ಅವರು ಹೇಳಿದರು  ನಗರದ ಎಸ್ ಆರ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಮತ್ತು ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗುರುಗಳ ಮತ್ತು ಪೋಷಕರ ಬಗೆಗೆ ವಿದ್ಯಾರ್ಥಿಗಳಿಗೆ ಇರಬೇಕಾದ ಗೌರವ ಸಮುದಾಯ ಮತ್ತು ಸಮಾಜವನ್ನು ಹೇಗೆ ಮುನ್ನಡೆಸಬೇಕು ಎನ್ನುವ ಜವಾಬ್ದಾರಿ ಮತ್ತು ಕಾಳಜಿ ವಿದ್ಯರ‍್ಥಿಗಳಲ್ಲಿರಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ಮಹತ್ವವನ್ನು ಕುರಿತು ಮಾತನಾಡುತ್ತಾ ರಾಷ್ಟ್ರೀಯ ಶಿಕ್ಷಣ ನೀತಿ 2020 ಶಿಕ್ಷಣ ಮಸೂದೆಗೂ ಮುನ್ನ ಹಲವಾರು ಶಿಕ್ಷಣ ಸಮಿತಿಗಳು ಶಿಕ್ಷಣದ ಬಗೆಗೆ ಮತ್ತು ಶಿಕ್ಷಣದ ಸುಧಾರಣೆಯ ಬಗ್ಗೆ ತಮ್ಮ ತಮ್ಮ ವರದಿಗಳನ್ನು ಸಲ್ಲಿಸಿವೆ. ಕೊಠಾರಿ ಆಯೋಗ ಮುರಳಿಧರನ್ ಸಮಿತಿ ಕಸ್ತೂರಿರಂಗನ್ ಸಮಿತಿ ಹೀಗೆ ಹಲವು ಶಿಕ್ಷಣ ಮಸೂದೆಗಳು ತಮ್ಮ ವರದಿಗಳ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಶಿಫಾರಸ್ಸನ್ನು ಮಾಡಿದ್ದು 1986ರಿಂದ ಈವರೆಗೆ ಸುಮಾರು 34 ರ‍್ಷಗಳ ನಂತರ 2020ರಲ್ಲಿ ಹೊಸ ಶಿಕ್ಷಣ ನೀತಿಯನ್ನು ದೇಶಾದ್ಯಂತ ಜಾರಿಗೊಳಿಸಲಾಯಿತು. ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ರ‍್ನಾಟಕ ಎಂಬ ಹೆಗ್ಗಳಿಕೆ ರಾಜ್ಯದ್ದಾದರೆ ರ‍್ನಾಟಕದಲ್ಲಿ ಮೊದಲು ಈ ನೀತಿಯನ್ನು ಜಾರಿಗೆ ತಂದ ವಿಶ್ವವಿದ್ಯಾಲಯ ಎನ್ನುವ ಖ್ಯಾತಿಯನ್ನು ನಮ್ಮ ವಿಶ್ವವಿದ್ಯಾಲಯ ಪಡೆದುಕೊಂಡಿದೆ ಆದರೆ ಜಾರಿಗೊಳಿಸುವಾಗ ಸಾಕಷ್ಟು ಸವಾಲುಗಳು ಕೂಡ ನಮ್ಮ ಮುಂದಿವೆ. ಹಾಗೆಯೇ ಗೊಂದಲಗಳಿವೆ ಇವುಗಳನ್ನೆಲ್ಲಾ ನಾವು ಸರಿಪಡಿಸಿಕೊಳ್ಳಲು ಸುಮಾರು ನಾಲ್ಕು ರ‍್ಷಗಳನ್ನು ಪರ‍್ವಸಿದ್ಧತಾ ರ‍್ಷಗಳು ಎಂದು ಪರಿಗಣಿಸುತ್ತೇವೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯರ‍್ಥಿಗಳಿಗೆ ಹೆಚ್ಚೆಚ್ಚು ಉಪಯೋಗವಾಗಲಿ ಎಂದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ‍್ಯರಾದ ಡಾ. ಯಶೋಧರ ಜಿ ಎನ್ ವಹಿಸಿದ್ದರು ಅಧ್ಯಾಪಕರಾದ ಪ್ರೊ. ಸಜ್ಜಾತ್, ಕೆ ಗುರುಪ್ರಸಾದ್ ಟಿ ಆರ್,ಡಾ. ಈರಣ್ಣ ಜಿ,ಶ್ರೀಕಾಂತ ಟಿ ಎನ್, ಶ್ರೀಮತಿ ಸಾಧನ ಎ ಜಿ,ಕು ಮೇಘ ಎಂ,ಡಾ. ವರದರಾಜ್, ಪ್ರಜ್ವಲ್ ಬಿಎಂ ಇತರರು  ಉಪಸ್ಥಿತರಿದ್ದರು.