ಸಮಾಜದ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಈಶ್ವರ ಖಂಡ್ರೆ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ:ಮಾ.17: ಸಮಾಜದ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು. ಪಟ್ಟಣದ ಬಿಕೆಐಟಿ ಕಾಲೇಜಿನ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘಟನೆಯ ತಾಲೂಕು ಘಟಕದ ನಾಮನಿದೇರ್ಶಿತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ಶಿಕ್ಷಕ ಪದಾಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಶಿಕ್ಷಕರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಭವಿಷತ್ತಿನ ನಾಯಕರನ್ನು ತಯ್ಯಾರಿಸುವ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ ಎಂದರು. ಕಟ್ಟಡದ ಅಡಿಪಾಯ ಗಟ್ಟಿಯಾಗಿದ್ದರೆ, ಕಟ್ಟಡ ಸದೃಢವಾಗಿ ನಿಲ್ಲುವುದು. ಹಾಗೆಯೇ ಪ್ರಾಥಮಿಕ ಮತ್ತು ಪ್ರೌಢಹಂತದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಗಟ್ಟಿಯಾಗಿ ನಿಲ್ಲಿಸುವ ಕಾರ್ಯಮಾಡಬೇಕು. ಎಲ್ಲಾ ಕ್ಷೇತ್ರಗಳು ಕಲುಶಿತಗೊಂಡಿವೆ. ಇಂತಹ ವಾತಾವರಣದಲ್ಲಿ ಶಿಕ್ಷಕರು ಶ್ರಮಪಟ್ಟು ಕಾರ್ಯನಿರ್ವಹಿಸಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಬೇಕು. ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ರಾಜಕೀಯ ಹಸ್ತಕ್ಷೇಪ ಮಾಡಬಾರದು. ಶಿಕ್ಷಕರು ಉತ್ತಮ ಮನಸ್ಕರಾಗಿರಬೇಕು. ಒಬ್ಬ ಶಿಕ್ಷಕ ನೂರು ಪಾದ್ರಿಗಳಿಗೆ ಸಮ. ಹೀಗಾಗಿ ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದರೋಂದಿಗೆ ಅಕ್ಷರ ಅಭ್ಯಾಸ ಮಾಡಿಸಬೇಕು. ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಹಳೆಯ ಪಿಂಚಣಿ ಮರು ಜಾರಿ ಗೊಳಿಸುವಬಗ್ಗೆ ಒತ್ತು ನೀಡಲಾಗುವುದು. ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೋಸ್ಕರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕಟ್ಟಡ ಸೇರಿದಂತೆ ವಿವಿಧ ರೀತಿಯ ಮೂಲ ಭೂತ ಸೌಕರ್ಯಗಳು ಒದಗಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶೇಖ ಮಹಬೂಪ ಪಟೇಲ ಮಾತನಾಡಿ, ಶಿಕ್ಷಕರ ಎಲ್ಲಾ ಸಮಸ್ಯಗಳಿಗೆ ಸಂಘಟನೆ ಸದಾ ಬೆಂಬಲವಾಗಿ ನಿಲ್ಲುವುದು. ಶಿಕ್ಷಕರು ಓದಿನಲ್ಲಿ ಹೆಚ್ಚು ಗಮನ ಕೊಡಬೇಕು. ಮಕ್ಕಳಿಗೆ ತಿಳಿಯದ ವಿಷಯ ಕೂಲಂಕುಶವಾಗಿ ಅಭ್ಯಾಸ ಮಾಡಿ ತಿಳಿಸಬೇಕು. ಸ್ವತ: ತಾವು ಜ್ಞಾನ ಹೆಚ್ಚಿಸಿಕೊಂಡು ಮಕ್ಕಳಿಗೆ ಆ ಜ್ಞಾನವನ್ನು ಧಾರೆ ಎರಿಯಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ದತ್ತು ಕಾಟಕರ ಪ್ರಾಸ್ವಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೀತೇಂದ್ರ ಬಿರಾದಾರ, ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಹಣಮಂತರಾವ ಚವ್ಹಾಣ, ನಗರ ಘಟಕದ ಅಧ್ಯಕ್ಷ ನಸೀರ ಅಹಮದ, ಹಣಮಂತ ಕಾರಾಮುಂಗೆ, ಅ.ಭಾ.ವಿ.ಶೈ.ಮ.ಸಭಾದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಡಾ| ಕಾಶಿನಾಥ ಚಲವಾ, ನಿರಂಜಪ್ಪ ಪಾತ್ರೆ, ಶಿವಕುಮಾರ ಘಂಟೆ, ಸುಧಾಕರ ಗಾಯಕವಾಡ, ಜಿಪ್ಸನ್ ಕೋಟೆ, ಕಿರಣಕುಮಾರ ಭಾಟಸಿಂಗೆ, ಪುಷ್ಪಾವತಿ ಚಕುರ್ತೆ ಉಪಸ್ಥಿತರಿದ್ದರು.
ಪಿ.ಎಸ್.ಬಿರಾದಾರ ಸ್ವಾಗತಿಸಿದರು. ಹಣಮಂತ ಕಾರಾಮುಂಗೆ ಮತ್ತು ಜಿಪ್ಸನ್ ಕೋಟೆ ನಿರೂಪಿಸಿದರು. ಮಾರುತಿ ಸಗರ ಒಂದಿಸಿದರು.