ಸಮಾಜದ ನೌಕರ ಸೇವೆ ಮಾಡುವೆ: ಮಂಜುನಾಥ

ಸಿಂಧನೂರು,ಮಾ.೦೧- ಸಮಾಜದ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ, ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ನಿಜಶರಣ ಶ್ರೀ ಅಂಬಿಗರ ಚೌಡಯ್ಯ ನೌಕರರ ಸಂಘ ನೂತನ ತಾಲೂಕಾಧ್ಯಕ್ಷರಾದ ಮಂಜುನಾಥ್ ಸೋಮಲಾಪುರ ಹೇಳಿದರು.
ನಗರದ ಸರ್ಕಿಟ್ ಹೌಸ್‌ನಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ನೌಕರರ ಸಂಘದ ಸಭೆಯಲ್ಲಿ ನೂತನ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ನೌಕರರು ಹಾಗೂ ಜಿಲ್ಲಾಧ್ಯಕ್ಷರಾದ ರಂಗನಾಥ್ ದೇಸಾಯಿಯವರು ನನ್ನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದಕ್ಕೆ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ಜಾಡರ್, ಖಜಾಂಚಿಯಾಗಿ ಅಯ್ಯಪ್ಪ ಉದ್ಬಾಳ್, ಸಹ ಕಾರ್ಯದರ್ಶಿಯಾಗಿ ಡಾ.ಮಲ್ಲಿಕಾರ್ಜುನ್ ಕಮತಗಿ, ಉಪಾಧ್ಯಕ್ಷರಾಗಿ ಅಮರೇಶ್ ಶಿಕ್ಷರು, ಅಮರೇಶ ಪೂಜಾ ಫೋಟೋ ಸ್ಟುಡಿಯೋ, ಬಸವರಾಜ್ ಮೇಟಿ ಎಪಿಎಂಸಿ, ವೆಂಕಟೇಶ್ ಕೆಇಬಿ,ಶೇಖರಪ್ಪ ನಗರಸಭೆ, ಸಂಘಟನಾ ಕಾರ್ಯದರ್ಶಿಗಳಾಗಿ ಮಲ್ಲಯ್ಯ ಕಂದ ಕೆಎಎಸ್, ನಜೀರ್ ಸ್ವಾಮಿ ಕೋರಿ, ಮಾರುತಿ ಸೋಮಲಾಪುರ, ಸುರೇಶ್ ಬಾರ್ಕೇರ್, ಹನುಮೇಶ್ ಗುಡದೂರ್, ಕಾನೂನು ಸಲಹೆಗಾರರಾಗಿ ಜಿ ರಾಯಪ್ಪ ವಕೀಲರು, ಟಿ.ಮಲ್ಲಯ್ಯ ವಕೀಲರು, ಸಿದ್ದಲಿಂಗಪ್ಪ ವಕೀಲರು, ಯಮನೂರಪ್ಪ ವಕೀಲರು, ಕಾರ್ಯಾಧ್ಯಕ್ಷರಾಗಿ ಪಂಪಾಪತಿ ಆರ್.ಎಸ್.ಎನ್ ಸಾಲ್ಗುಂದಾ, ಗೌರವಾಧ್ಯಕ್ಷರಾಗಿ ಬಾಳಪ್ಪ, ನೇಮಕವಾದರು.
ಜಿಲ್ಲಾ ಉಪಾಧ್ಯಕ್ಷರಾದ ಪ್ರಭು, ಈರಣ್ಣ, ಅಂಬಿಗರ ಯುವ ಸೇನಾ ಅಧ್ಯಕ್ಷ ಅಮರೇಶ್ ಬಾಗೋಡಿ, ವೀರೇಶ್ ಪೂಜಾರ್, ಪಿಎಸ್‌ಐ ದುರ್ಗಪ್ಪ ಆಡಿನ್, ಉಪನ್ಯಾಸಕ ಬಿ. ರವಿಚಂದ್ರ, ವೆಂಕೋಬ ಬೂದಿಹಾಳ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.