ಸಮಾಜದ ಧಾರ್ಮಿಕ ಗುರುಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ.

ಸಂಜೆವಾಣಿ ವಾರ್ತೆ
ಹೊಸಪೇಟೆ : ಅಂಜುಮನ್ ಖಿದ್ಮತೆ-ಎ- ಇಸ್ಲಾಂ ನೇತೃತ್ವದಲ್ಲಿ ಹೊಸಪೇಟೆ ನಗರವನ್ನು ಮುಸ್ಲಿಂ ಸಮುದಾಯದ ಮೇಲಾಗುತ್ತೀರುವ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಸುರಿಯುವ ಮಳೆಯನ್ನು ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮಾಜದ ಮುಖಂಡರು ಅದರಲ್ಲೂ ಮುಖ್ಯವಾಗಿ ಯುವಕರು ಸಮಾಜದ ಮೇಲಾಗುತ್ತೀರುವ ದಬ್ಬಾಳಿಕೆಯನ್ನು ಖಂಡಿಸಿದರು ಇಂತಹ ವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಜಾತ್ಯತೀತ ಮನೋಭಾವದ ಭಾರತೀಯ ನಾಗರಿಕರ ಸಹಕಾರದೊಂದಿಗೆ  ಸ್ವಯಂ ಪ್ರೇರಿತವಾಗಿ ಪ್ರತಿಭಟನೆ ಮಾಡುವ ಮುಖಾಂತರ ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳ ವಿರುದ್ಧ ಹಾಗೂ ಮುಸ್ಲಿಂ ಜನಾಂಗದ ಮೇಲೆ ನಡೆಯುತ್ತಿರುವಂತಹ ದಬ್ಬಾಳಿಕೆಯನ್ನು ಪ್ರತಿಭಟನಾ ಸಭೆಯಲ್ಲಿ ಉಗ್ರವಾಗಿ ಖಂಡಿಸಲಾಯಿತು.
ಅಂಜುಮನ್ ಖಿದ್ಮತೆ-ಎ- ಇಸ್ಲಾಂ
ಹೊಸಪೇಟೆ ಪದಾಧಿಕಾರಿಗಳು, ಮಾಜಿ ನಗರಸಭಾ ಸದಸ್ಯರು, ಸಮಾಜದ ವಿವಿದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Attachments area