ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಿಗಧಿತ ಸಮಯದೊಳಗೆ ಲಸಿಕೆ ನೀಡಿ : ಶಖಾಪುರ

ಶಹಾಪುರ:ಜೂ.11:18 ವರ್ಷ ಮೇಲ್ಪಟ್ಟ ನಾಗರೀಕರಿಗೆ ಉಚಿತ ಕೋವಿಡ್ ಲಸಿಕೆ ನೀಡುವುದಾಗಿ ಸರ್ಕಾರಗಳು ಘೋಷಣೆ ಮಾಡಿ ಸಮರ್ಪಕವಾಗಿ ಲಸಿಕೆ ಪೂರೈಕೆ ಮಾಡÀದೇ ಸರ್ಕಾರವೂ ವಿಫಲಗೊಂಡಿದ್ದು. ನಿಮ್ಮ ವಿಫಲತೆಯೆ ಜನರಿಗೆ ಜೀವಕ್ಕೆ ಕುತ್ತು ತಂದು ಶಾಪವಾಗಿ ಪರಿಣಮಿಸಬಾರದು. ದೇಶದ ಪ್ರತಿ ಪ್ರಜೆಗೂ ಲಸಿಕೆ ನೀಡಿ ಎಂದು ಕರವೇ ತಾಲೂಕು ಅಧ್ಯಕ್ಷ ಭೀಮಣ್ಣ ಶಖಾಪುರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಹಸಿಲ್ದಾರ ಕಚೇರಿ ಎದುರು ಲಸಿಕೆ ಕೋಡಿ ಇಲ್ಲವೆ ಅಧಿಕಾರ ಬೀಡಿ ಎಂಬ ಘೋಷವಾಖ್ಯದೊಂದಿಗೆ ತಹಸಿಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ಲಸಿಕೆಯೆಂಬುದು ದೇಶದ ಪ್ರತಿ ಪ್ರಜೆಯ ಹಕ್ಕು. ಅದರ ಹಂಚಿಕೆ ಸಮಾನತೆಯ ಆಧಾರದಲ್ಲಿ ಇರಬೇಕು. ಎಲ್ಲಾ ರಾಜ್ಯಗಳಿಗೂ ಜನಸಂಖ್ಯೆ ಆಧಾರದಲ್ಲಿ ಲಸಿಕೆ ವಿತರಣೆಯಾಗಬೇಕು. ಉತ್ತರದ ರಾಜ್ಯಗಳಿಗೆ ಹೆಚ್ಚು, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಎಂಬ ತಾರತಮ್ಯ ಭಾವನೆ ಸಲ್ಲದು. ಪ್ರತಿ ರಾಜ್ಯವು ಕೇಂದ್ರ ಸರ್ಕಾರಕ್ಕೆ ತೆರಿಗೆ ಕಟ್ಟುತ್ತೆವೆ. ಆದರೆ ಹೆಚ್ಚು ಕಡಿಮೆ ಏಕೆ ಈ ಅನ್ಯಾಯ ಕೊನೆಗೊಳ್ಳಬೇಕು. ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ಕೊಡುವುದಾಗಿ ಘೋಷಿಸಿದೆ ಆದರೆ ಎಷ್ಟು ದಿನಗಳೊಳಗೆ ನೀಡುತ್ತೆವೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕೋವಿಡ್ ಮೂರನೇ ಅಲೆ ಅಕ್ಟೋಬರ್‍ನಲ್ಲಿ ಬರುವ ಸಾಧ್ಯತೆ ಇದೆ ಅಷ್ಟರೊಳಗೆ ಎರಡೂ ಡೋಸ್ ಲಸಿಕೆ ಎಲ್ಲಾ ನಾಗರಿಕರಿಗೂ ಸಿಗಬೇಕು. ಇಲ್ಲದಿದ್ದರೆ ಲಸಿಕೆಗೆ ಅರ್ಥವಿರುವುದಿಲ್ಲ. ಚುನಾವಣೆಗಳ ಮಾದರಿಯಲ್ಲೇ ಜನರಿಗೆ ಲಸಿಕೆ ಬೂತ್‍ಗಳನ್ನು ಸ್ಥಾಪಿಸಿ ಜೂನ್‍ನಲ್ಲಿ ಮೊದಲ ಡೋಸ್, ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನಿಗೂ ಸಿಗಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಶೇ.25 ರಷ್ಟು ಲಸಿಕೆ ಕೊಡುವ ಕಾರ್ಯಕ್ರಮ ಮುಂದುವರೆದರೆ ಅದು ಕಾಳಸಂತೆ ವ್ಯವಹಾರಗಳು, ದುಬಾರಿ ಬೆಲೆಯ ಹೊರೆ, ಅನಾರೋಗ್ಯಕರ ಸ್ಪರ್ಧೆ ಏರ್ಪಡುವುದರಿಂದ, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಲಸಿಕೆ ಹಣ ಪಾವತಿಸಿ ಅಲ್ಲೂ ಸಹ ಉಚಿತವಾಗಿಯೇ ಸಾರ್ವಜನಿಕರಿಗೆ ಲಸಿಕೆ ನೀಡಬೇಕು ಎಂದು ಆಗ್ರಹಿಸಿದರು.

ಯುವ ಘಟಕ ಅಧ್ಯಕ್ಷ ಸಿದ್ದು ಪಟ್ಟೆದಾರ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.