ಸಮಾಜದ ಒಳತಿಗಾಗಿ ಶ್ರಮಿಸಿದ ಬಸವಣ್ಣನವರು

ಇಂಡಿ:ಎ.24:ಸಮಾಜದಲ್ಲಿನ ಮೌಢ್ಯಗಳನ್ನು ತೊಲಗಿಸಿ, ಅನುಭವ ಮಂಟಪದ ಮೂಲಕ ಜಗತ್ತಿನ ಮೊದಲು ಸಂಸತ್ತು ರಚಿಸಿ, ಸಾಮಾಜಿಕ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಣ್ಣ ಬಸವಣ್ಣನವರು ಅಗ್ರಗಣ್ಯರು. ಲೋಕದ ಅಂಕುಡೊಂಕುಗಳನ್ನು ತಿದ್ದಿ, ಜ್ಞಾನದ ದಿವಿಗೆಯನ್ನು ಪಸರಿಸಿ ,ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿ, ತಮ್ಮ ಜೀವನದುದ್ದಕ್ಕೂ ಸಮಾಜದ ಒಳತಿಗಾಗಿ ಶ್ರಮಿಸಿದ ಮಹಾನ ಚೇತನ್ ವಿಶ್ವಗುರು ಬಸವಣ್ಣನವರು ಎಂದು ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು.

ಅವರು ಪಟ್ಟಣದ ಮಿನಿ ವಿಧಾನಸೌಧ ಮತ್ತು ಬಸವೇಶ್ವರ ವೃತ್ತದಲ್ಲಿ ತಾಲೂಕು ಆಡಳಿತ ವತಿಯಿಂದ ಬಸವ ಜಯಂತಿ ನಿಮಿತ್ಯ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್. ವಿ.ಪಾಟೀಲ ಮಾತನಾಡಿ ಕಲಹಗಳನ್ನು ತಪ್ಪಿಸಿ ಸೋದರತ್ವದ ಸಮಾನತೆಯ ಸ್ವಾತಂತ್ರ್ಯದ ಬದುಕನ್ನು, ಭಾರತವನ್ನು ವಿಶ್ವವನ್ನು ಕಟ್ಟಲು ಮಹಾಮನೆ, ಮಹಾಮನಸ್ಸು ಸೃಷ್ಟಿಸಿದವರು ಬಸವಣ್ಣನವರು ಎಂದರು.

ತಹಸೀಲ್ದಾರ ನಾಗಯ್ಯ ಹಿರೇಮಠ, ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮೇತ್ರಿ, ಶಿರಸ್ತೆದಾರ ಆರ್.ಬಿ.ಮೂಗಿ ,ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ದೈಹಿಕ ಶಿಕ್ಷಣಾಧಿಕಾರಿ ಎ.ಎಸ್.ಲಾಳಸೇರಿ, ಪಿ.ಎಮ್.ಮಠಪತಿ, ಸಂತೋಷ ಹೊಟಕರ, ಸಂಕೇತ ಪಾಟೀಲ, ಎಚ್.ಎಸ್.ಪ್ಯಾಟಿ, ಡಬ್ಲು.ಆಯ್.ಇಂಡಿಕರ, ಶ್ರೀಮತಿ ಎಸ್.ಎಂ.ಕಟ್ಟಿಮನಿ, ಶ್ರೀಮತಿ ಬಿ.ಎ.ಗುನ್ನಾಪುರ, ಶ್ರೀಮತಿ ಯು.ಎಸ್.ಕೊಳುರಗಿ ಮತ್ತಿತರಿದ್ದರು. ರಾಜ್ಯ ನೌಕರರ ಸಂಘದ ಕಾರ್ಯಾಲಯದಲ್ಲಿ ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ, ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಪಾಟೀಲ, ಆರ್.ಎಸ್.ಮೇತ್ರಿ, ಆರ್.ವಿ.ಪಾಟೀಲ ಮತ್ತಿತರಿದ್ದರು.

ಬಸವೇಶ್ವರ ವೃತ್ತದಲ್ಲಿ ತಾಲೂಕು ಬಸವ ಸಮಿತಿ,ಬಸವದಳ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು.