ಸಮಾಜದ ಏಳಿಗೆಯಲ್ಲಿ ವಕೀಲರ ಪಾತ್ರ ಮುಖ್ಯ: ಶ್ರೀನಿವಾಸ ಬದ್ರಾಪುರ

ಇಂಡಿ:ಡಿ.6: ಸಮಾಜದ ಏಳಿಗೆಗಾಗಿ ಶ್ರಮಿಸುವಲ್ಲಿ ವಕೀಲರ ಪಾತ್ರ ದೊಡ್ಡದಿದೆ. ವಕೀಲರು ವೃತ್ತಿ ಬಗ್ಗೆ ಅಪಾರ ಗೌರವ ಹೊಂದಿರಬೇಕು. ಕಕ್ಷೀದಾರರಿಗೆ ಸೂಕ್ತ ನ್ಯಾಯ ಒದಗಿಸಿ ಕೊಡುವಲ್ಲಿ ನಿರಂತರವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ಬದ್ರಾಪುರ ಸಲಹೆ ನೀಡಿದರು.

ಪಟ್ಟಣದ ವಕೀಲರ ಭವನದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನ್ಯಾಯವಾದಿ ಎಸ್.ಬಿ.ನ್ಯಾಯವಾದಿ ಮಾತನಾಡಿ ಸ್ವಾತಂತ್ರ್ಯಸಂಗ್ರಾಮದಲ್ಲಿ ಗಾಂಧೀಜಿ, ರಾಜೇಂದ್ರ ಪ್ರಸಾದ, ಡಾ,ಅಂಬೇಡ್ಕರ ಸೇರಿದಂತೆ ಅನೇಕರು ವಕೀಲರಾಗಿದ್ದು ಅವರ ಪಾತ್ರ ಮಹತ್ವದ್ದಾಗಿತ್ತು ಎಂದರು. ಸಮಾಜದಲ್ಲಿ ನಡೆಯುವ ಶೋಷಣೆ, ದಬ್ಬಾಳಿಕೆ ವಿರುದ್ಧ ಹೋರಾಡಿ ಸಮಾಜವನ್ನು ಕಾಯುವಲ್ಲಿ ವಕೀಲರ ಪಾತ್ರ ದೊಡ್ಡದಿದೆ ಎಂದರು.

ಜಿ.ಎಸ್.ಜೋಶಿ, ಎಮ್.ಎಸ್.ತೇಲಿ, ಜೆ.ಬಿ.ಬೆನೂರ ಮಾತನಾಡಿದರು.

ಕಿರಿಯ ಶ್ರೇಣಿ ನ್ಯಾಯಾಧೀಶ ಎ.ಎಚ್.ಕಣಗಾವಿ, ವಕೀಲರ ಸಂಘದ ಅಧ್ಯಕ್ಷ ಪಿ.ಬಿ.ಪಾಟೀಲ, ಕಾರ್ಯದರ್ಶಿ ಎಸ್.ಆರ್.ಬಿರಾದಾರ, ಬಿ.ಕೆ.ಮಸಳಿ, ಬಿ.ಬಿ.ಬಿರಾದಾರ, ಎಂ.ಸಿ.ಬಿರಾದಾರ, ಡಿ.ಜಿ.ಜೊತಗೊಂಡ ಮತ್ತಿತರಿದ್ದರು.