ಸಮಾಜದ ಎಲ್ಲರೊಂದಿಗೆ ಸಹ ಬಾಳುವೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ

ಕಲಬುರಗಿ:ಅ.30: ನಗರದ ಬಹಮನಿ ಫೌಡೆಂಷನ್ ವತಿಯಿಂದ ಗುಲ್ಬರ್ಗಾ ಅನ್ಮೋಲ್ ರತ್ನ ಪ್ರಸಸ್ತಿ – ಪುರಸ್ಕಾರ ಕಾರ್ಯಕ್ರಮವನ್ನು ರವಿವಾರ ರಂದು ಸಭಾ ಗಾರ್ಡನ್ ಫಂಕ್ಷನ್ ಹಾಲ್ ಜರುಗಿತು.
ಸೈಯದ್ ಶಾಹಾ ಯಾದುಲ್ಲಾ ಹುಸೇನಿ ನಿಜಾಂ ಬಾಬಾ ಸಾಹೇಬ್, ಅವರು ಜೀವ ಮಾನ ಸಾದನೆಗೆ ನೀಡುವ ಗುಲ್ಬರ್ಗಾ ಅನ್ಮೊಲ ಪ್ರಸಸ್ತಿ ಪುರಸ್ಕಾರ ವಿತರಣೆ ಮಾಡಿ ಮಾತಾಡಿದರು. ಸಮಾಜಿಕ ವ್ಯವಸ್ಥೆಯಲ್ಲಿ ಅವಿಭಕ್ತ ಕುಟುಂಬ ಎಲ್ಲಾ ಸದಸ್ಯರು ಹಿರಿಯರ ಅನುಭವ ಮಾರ್ಗದರ್ಶನ ಕಿರಿಯರು ತಿಳುವಳಿಕೆ ಮಾಡುತ್ತಿದ್ದು ಕುಟುಂಬ ಸಮಾಜ ಶಾಂತಿ ಸೌಹಾರ್ದತೆ ಕೂಡಿ ಬಾಳುವ ಬದುಕು ಇತ್ತು ನಾವು ಎಲ್ಲರು ಇತರ ಸಮಾಜದ ಎಲ್ಲರೊಂದಿಗೆ ಸಹಾ ಬಾಳುವೆ ಮಾಡುವ ಜವಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಹೇಳಿದರು.
ಪ್ರಾಸ್ತಾವಿಕ ಬಹಮನಿ ಫೌಂಡೆಷನ್ ಸಂಯೋಜಕ ರಿಜ್ವಾನ್ ಸಿದ್ದಿಖಿ ಮಸೂದ್ ಮಾತನಾಡಿದ ಗುಲ್ಬರ್ಗಾ ಅನ್ಮೊಲ ಪ್ರಸಸ್ತಿ ಪುರಸ್ಕಾರವನ್ನು ಶಿಕ್ಷಣ, ಆರೋಗ್ಯ, ಪತ್ರಿಕೆ, ಸಾಹಿತ್ಯ, ಸಮಾಜಿಕ ಸೇವೆಯಲ್ಲಿ ಜೀವ ಮಾನ್ಯ ಸೇವೆಗೈದ ಹತ್ತು ಜನರಿಗೆ ಪುರಸ್ಕಾರ ಮಸ್ತಾನ್ ಬಿರಾದರ (ಸಮಾಜ ಸೇವೆ), ರಾಜಶೇಖರ ಎಸ್. (ಚಿತ್ರಕಲಾವಿದರು), ಜಾಖೀರ ಹುಸೇನ್ ಉಸ್ತಾರ್ (ನ್ಯಾಯಾಂಗ್), ಡಾ|| ಗುಲಾಮ್ ರಬ್ಬಾನಿ (ಶಿಕ್ಷಣ), ನಧೀರಾ ಬೇಗಂ (ಶಿಕ್ಷಣ), ಮೊಹ್ಮದ ಅಕ್ತರ ಭಾಷಾ, ಅಬ್ದುಲ್ ಸೈಯದ್, ಜಮೀರ ಅಹ್ಮೆದ್ (ಇಂಜಿನಿಯರ) ಹಾಗೂ ಜಡ್.ಎನ್ ಜಾಗೀರದಾರ (ವಿಜ್ಞಾನ) ಅವರಿಗೆ ವಿತರಿಸಲಾಯಿತು.
ಹುಸೇನಿ ಸಿದ್ದಿಖಿ ಶಾಹೀದ್ ಅಧ್ಯಕ್ಷರು ಶಿದ್ದಿಖಿ ಶಿಕ್ಷಣ ಟ್ರಸ್ಟ್, ಡಾ|| ಖಾಜಿ ಹಮ್ಮಿದ್ ಫಾಸಲಾ ಸಿದ್ದಿಖಿ. ಸೈಂಟ್ ಮೇರಿ ಫಾದರ್ ಪ್ರವೀಣ, ಪ್ರೊ. ಸಂಜಯ ಮಾಕಾಲ್, ಡಾ|| ಅಸ್ಲಾಂ ಸಜ್ಜಾದೆ, ಡಾ|| ಫೀರಜಾದೆ ಅಧ್ಯಕ್ಷರು ಅಂಜುಮನ್ ಟ್ರಸ್ಟ್, ಮೊಹ್ಮದ್ ಅಜೀಮೋದ್ದಿನ್ ವಕೀಲರು ಹಾಗೂ ಟೀಪ್ಪು ಸುಲ್ತಾನ ಏಜುಕೇಷನ್ ಟ್ರಸ್ಟ್, ಫಜಲ ಅಹ್ಮೇದ್ ತೀಮ್ಮಾಪೂರಿ ಅಧ್ಯಕ್ಷರು ತಂಜಿಂ ಉರ್ದು ಶಾಲೆ, ಹಕ್ಕಿಮ್ ಶಖೀರ್, ಸೈಯದ್ ನಿಜಾಮೊದ್ದಿನ್ ಮುತುವಲಿ, ಅಲೀಮ್ ಅಹ್ಮೇದ್ ಸಂಯುಜಕರು, ಮುಬೀನ್ ರಿಯಾಜ್ ನಿವೃತ್ತ ಕೃಷಿ ಅಧಿಕಾರಿಗಳು, ಸಲಾಮ್ಮೊದಿನ್ ಗುತ್ತೇದಾರ್ ಫೌದಾ ಟ್ರಾನ್ಸಪೋರ್ಟ, ವಿದ್ಯಾರ್ಥಿಗಳಿಗೆ ಪ್ರಬಂಧ್ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ಸಾವಿರಾರು ವಿಧ್ಯಾರ್ಥಿ ಬಾಗವಹಿಸರು ಹಾಗೂ ಪ್ರಸಸ್ತಿ ವಿತರಣೆ ಜರುಗಿತು.