
ಸಿಂಧನೂರು,ಜು.೨೭- ಸಮಾಜದ ಕಟ್ಟಕಡೆಯ ವ್ಯಕ್ತಿಯು ಉತ್ತಮ ಆರೋಗ್ಯ ಪಡೆಯುವ ಹಕ್ಕು ಹೊಂದ್ದಿದ್ದಾರೆ ಆದರೆ ತಿಳುವಳಿಕೆಯ ಕೊರತೆಯಿಂದ ವೈದ್ಯರ ಬಳಿ ತೋರಿಸಿಕೊಳ್ಳದೆ ಹಲವಾರು ತೊಂದರೆಗಳಿಂದ ಬಳಲುತ್ತಿದ್ದಾರೆ ಎಂದು ಖ್ಯಾತ ವೈದ್ಯರಾದ ಡಾ.ಪದ್ಮನಿ ಪ್ರಸಾದ ಹೇಳಿದರು.
ಭರವಸೆ ಚಾರಿಟೇಬಲ್ ಫೌಂಡೇಶನ್ ಬೆಂಗಳೂರು ಹಾಗೂ ಉಮಶಂಕರ ಫೌಂಡೇಷನ್ ಸಿಂಧನೂರ ಸಂಯುಕ್ತ ಆಶ್ರಯದಲ್ಲಿ ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜೇಶ ಹಿರೇಮಠ ಯವರ ೫೦ ನೇ ಹುಟ್ಟುಹಬ್ಬದ ಸುವರ್ಣ ಸಂಭ್ರಮದ ಪ್ರಯುಕ್ತ ಮಹಿಳೆಯರಿಗಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಯಾವುದೆ ಸಮಸ್ಯೆಗಳಿದ್ದಲ್ಲಿ ಮುಚ್ಚಿಟ್ಟುಕೊಳ್ಳದೆ ವೈದ್ಯರ ಬಳಿ ಹೇಳಿಕೊಳ್ಳುಬೇಕು ಎಂದು ಹೇಳಿದರು.
ಯಾರಿಗು ಯಾವುದೆ ರೀತಿಯ ಆರೋಗ್ಯದ ಸಮಸ್ಯೆ ಇದ್ದರೆ ಅದನ್ನು ಮುಚ್ಚಿಟುಕೊಂಡು ವೈದ್ಯರ ಬಳಿ ತೊರಿಸದೆ ನಿರ್ಲಕ್ಷ್ಯ ಹಾಗು ತಿಳುವಳಿಕೆಯ ಕೊರತೆಯಿಂದ ಬಹಳಷ್ಟು ಜನರು ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಸಮಾಜದಲ್ಲಿ ಬದುಕುವ ಎಲ್ಲರಿಗೂ ಪರಿಪೂರ್ಣ ಆರೋಗ್ಯ ಪಡೆದುಕೊಳ್ಳುವ ಹಕ್ಕು ಹೊಂದಿದ್ದಾರೆ. ಲೈಂಗಿಕ ಸಮಸ್ಯೆ ಬಂಜೆತನ, ಮುಟ್ಟು ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಮಹಿಳೆಯರು ಬಳಲುತ್ತಿದ್ದು ಇವಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರ ಬಳಿ ಬಂದು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡು ಸಮಾಜದಲ್ಲಿ ಆರೋಗ್ಯವಂತರಾಗಿ ಬದುಕು ಸಾಗಿಸಬೇಕು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆಯ ಶಿಬಿರ ಮಾಡುವ ರಾಜೇಶ ಹಿರೇಮಠ ರವರ ಸಾಮಾಜಿಕ ಸೇವೆ ಶ್ಲಾಘನೀಯ ಎಂದು ಡಾ.ಪದ್ಮನಿ ಪ್ರಸಾದ ಹೇಳಿದರು.
ಪ್ರತಿವರ್ಷ ನನ್ನ ಕುಟುಂಬಸ್ಥರ ಜೊತೆ ನಾನು ನನ್ನ ಹುಟ್ಟುಹಬ್ಬ ಆರಿಸಿಕೊಳ್ಳುತ್ತಿದ್ದೆ ಈ.ವರ್ಷ ನನ್ನ ಗೆಳೆಯರ ಸಲಹೆ ಸಹಕಾರದಿಂದ ಅವರ ಒತ್ತಡ ಕ್ಕೆ ಮಣಿದು ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರ ಮಾಡುವ ಮುಖಾಂತರ ನನ್ನ ಹುಟ್ಟುಹಬ್ಬ ಆರಿಸಿಕೊಳ್ಳುತ್ತಿದ್ದೆನೆ ಎಂದು ರಾಜೇಶ ಹಿರೇಮಠ ಹೇಳಿದರು ನಾವು ದುಡಿದ ಹಣದಲ್ಲಿ ಇತರರಿಗೆ ಸ್ವಲ್ಪ ಹಂಚಿಕೊಳ್ಳುವ ಮನಸ್ಸು ಮಾಡಿದ್ದೇನೆ ಹೊರತು ಇದರಲ್ಲಿ ಯಾವದೆ ರಾಜಕೀಯ ಇಲ್ಲ ಎಂದರು.
ಡಾ.ಅಯ್ಯನಗೌಡ, ಡಾ.ನಾಗರಾಜ ಕಾಟವ. ಡಾ.ಮಲ್ಲಿಕಾರ್ಜುನ ಹಚ್ಚೋಳಿ, ಡಾ.ಅಬಿನೇತ್ರಿ, ಡಾ.ಗೀತಾಂಜಲಿ ಡಾ.ಯೋಗಿತಾ, ಗೀತಾ ರಾಜೇಶ ಹಿರೇಮಠ, ಅಶೋಕ ಕುಮಾರ ಗೌಡ ಜಯಣ್ಣ ,ಬಲವಂತರಾವ್, ಕುಲಕರ್ಣಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗು ರಾಜೇಶ ಹಿರೇಮಠ ಯವರ ಅಭಿಮಾನಿಗಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.