
ಭಾಲ್ಕಿ:ಜ.21: ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವಶಕ್ತಿ ಹೊಂದಿರುವ ಭಾರತೀಯರಾದ ನಾವು ಸಮಾಜದ ಋಣ ತೀರಿಸುವ ಗುರಿ ಹೊಂದಬೇಕು ಎಂದು ಹಲಬರ್ಗಾ, ಶಿವಣಿ ಮತ್ತು ಹೈದ್ರಾಬಾದ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ಪ್ರತಿಪಾದಿಸಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಈಶ್ವರಿ ಮಹಿಳಾ ಮಂಡಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವದಿನ ಹಾಗು ಯುವ ಸಪ್ತಾಹ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮಲ್ಲಿ ಯುವಕರು ದುಶ್ಚಟಗಳ ದಾಸರಾಗಿ ಹಾಳಾಗುತ್ತಿದ್ದಾರೆ. ಇದನ್ನು ತಡೆಯುವ ಕೆಲಸವಾಗಬೇಕು. ಸ್ವಾಮಿ ವಿವೇಕಾನಂದರ ಸಂದೇಶದಂತೆ ನಾವೆಲ್ಲರೂ ಸಮಾಜದ ಋಣ ತೀರಿಸುವ ಗುರಿ ಹೊಂದಿ, ಆ ಗುರಿ ಮುಟ್ಟುವ ತನಕ ನಿಲ್ಲಬಾರದು. ದೇಶಾಭಿಮಾನಿಗಳಾಗ ಬಾಳಬೇಕು. ಅಂದಾಗ ಮಾತ್ರ ಸ್ವಾಮಿ ವಿವೇಕಾನಂದರ ಕನಸಾದ ಭವ್ಯ ಭಾರತ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಅಭಿವೃದ್ದಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಶಿವಯ್ಯಾಸ್ವಾಮಿ, ನಾವೆಲ್ಲರೂ ಇನ್ನೊಬ್ಬರ ದುಡ್ಡಿಗೆ ಆಸೆ ಪಡದೇ ಉತ್ತಮ ಕಾರ್ಯ ಮಾಡಬೇಕು. ನಾವು ಮಾಡುವ ಕಾಯಕದಿಂದಲೇ ನಾವು ಕೈಲಾಸ ಕಾಣಬೇಕು. ಯುವಕರು ವಿದ್ಯಾವಂತರಾದರೆ ಸಾಲದು, ವಿದ್ಯದ ಜೊತೆಗೆ ವಿನವಂತರಾಗಬೇಕು ಎಂದು ಹೇಳಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಓಂಪ್ರಕಾಶ ರೊಟ್ಟೆ ಮಾತನಾಡಿ, ದೇಶವನ್ನು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ಮುಕ್ತಗೊಳಿಸಲು ಯುವಕರು ಪಣ ತೊಡಬೇಕು. ಯವಶಕ್ತಿ ಗುಟಕಾ ಸಂಸ್ಕøತಿ ಬಿಟ್ಟು ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಕಿವಿಮಾತು ಹೇಳಿದರು.
ಸ್ವಾಮಿವಿವೇಕಾನಂದ ಸ್ವಯಂ ಸೇವಾ ಸಂಸ್ಥೆಯ ಸದಸ್ಯ ಮಹಾದೇವ ಸ್ವಾಮಿ ಕಮಲನಗರ ವಿಶೇಷ ಉಪನ್ಯಾಸ ಮಂಡಿಸಿದರು. ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೀಪಕ ಗಾಯಕವಾಡ, ಶಿವಶರಣಪ್ಪ ಸೊನಾಳೆ, ಪ್ರವೀಣ ಸಿಂಧೆ, ನಾಗರಾಜ ಕೋಟೆ, ಆನಂದ ಖಂಡಗೊಂಡ ಉಪಸ್ಥಿತರಿದ್ದರು.
ಶಿವರಾಜ ರಾಜಗೀರೆ ಸ್ವಾಗತಿಸಿದರು. ಕಿರಣಕುಮಾರ ಭಾಟಸಾಂಗವಿ ನಿರೂಪಿಸಿದರು. ಓಂ ಝೆಡ್ ಬಿರಾದಾರ ವಂದಿಸಿದರು.