ಸಮಾಜದ ಋಣ ತೀರಿಸುವ ಕಾರ್ಯ ಅಗತ್ಯ-ಪಾಟೀಲ

ಲಕ್ಷ್ಮೇಶ್ವರ, ನ 12- ಸಂಘಟನೆಯಿಂದ ಮಾತ್ರ ಸಮಾಜದ ಉದ್ದಾರ ಸಾಧ್ಯ. ಸಮಾಜದ ಸುಧಾರಣೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಋಣ ತೀರಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದು ಪಂಚಮಸಾಲಿ ಕೋ ಆಪರೇಟೀವ್ ಬ್ಯಾಂಕ್ ಅಧ್ಯಕ್ಷ ಎಸ್.ಪಿ.ಪಾಟೀಲ ಹೇಳಿದರು. ಪಟ್ಟಣದ ಪಂಚಮಸಾಲಿ ಸಮಾಜದಿಂದ ಪುರಸಭೆಗೆ ಅಧ್ಯಕ್ಷೆಯಾಗಿ ಆಯ್ಕಗೊಂಡ ಪೂರ್ಣಿಮಾ ಪಾಟೀಲ ಹಾಗೂ ಸದಸ್ಯರಾದ ಮಹದೇವಪ್ಪ ಅಣ್ಣಿಗೇರಿ, ನೀಲಮ್ಮ ಮೆಣಸಿನಕಾಯಿ, ಪ್ರವೀಣ ಬಾಳಿಕಾಯಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಯುವಕರು ಸಮಾಜದ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜದ ಬಲವರ್ಧನೆಗೆ ಶ್ರಮಿಸಬೇಕು, ಪಂಚಮಸಾಲಿ ಸಮಾಜವನ್ನು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಇನ್ನಷ್ಟು ಬಲಗೊಳ್ಳುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ಸಮಾಜದ ಶಕ್ತಿ ಹೆಚ್ಚುವಂತೆ ಮಾಡುವ ಕಾರ್ಯ ಮಹಿಳಯರಿಂದ ಆಗಬೇಕಿದೆ. ಪಟ್ಟಣದ ಪುರಸಭೆ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಪೂರ್ಣಿಮಾ ಪಾಟೀಲ ಅವರಿಗೆ ಉತ್ತಮ ಕಾರ್ಯಗಳಿಗೆ ಸಮಾಜದ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮಣ್ಣ ಮುಳಗುಂದ ಮಾತನಾಡಿ ಪಟ್ಟಣದ ಅಭಿವೃದ್ದಿಗೆ ಹೆಚ್ಚಿನ ಗಮನ ನೀಡುವ ಮೂಲಕ ಸಮಾಜದ ಕೀರ್ತಿ ಹೆಚ್ಚಿಸುವ ಮತ್ತು ಗೌರವ ತರುವ ಕಾರ್ಯವನ್ನು ತಾವುಗಳು ಮಾಡಬೇಕು ಎಂದು ಅಲಹೆ ನೀಡಿದರು.
ಚೆಂಬಣ್ಣ ಬಾಳಿಕಾಯಿ, ಎಸ್.ಎಫ್.ಶಿಗ್ಲಿ, ಸೋಮಣ್ಣ ಡಾಣಗಲ್, ಕುಬೇರಪ್ಪ ಮಹಾಂತಶೆಟ್ಟರ, ಸುರೇಶ ರಾಚನಾಯ್ಕರ್, ಮಹಾದೇವಪ್ಪ ಒಣರೊಟ್ಟಿ, ಶಿವರಾಜಗೌಡ ಪಾಟೀಲ, ನೀಲಪ್ಪ ಕನವಳ್ಳಿ, ನೀಲಪ್ಪ ಕರ್ಜಕಣ್ಣವರ, ಬಂಗಾರೆಪ್ಪ ಮುಳಗುಂದ, ರುದ್ರಪ್ಪ ನರೇಗಲ್, ವಿಜಯಲಕ್ಷ್ಮೀ ಬಾಳಿಕಾಯಿ, ಶಕುಂತಲಾ ಹೊರಟ್ಟಿ, ಮಲ್ಲಮ್ಮ ಚಿಂಚಲಿ, ಬಸವರಾಜ ಮೆಣಸಿನಕಾಯಿ, ಗಂಗಾಧರ ಜಬಡಿ, ನಾಗರಾಜ ತೋಟದ, ಫಕ್ಕೀರಪ್ಪ ತೋಟದ, ಫಕ್ಕೀರಪ್ಪ ಅಣ್ಣಿಗೇರಿ ಇದ್ದರು.
ಪೊಟೋ-ಪಟ್ಟಣದ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಪೂರ್ಣಿಮಾ ಪಾಟೀಲ, ಸದಸ್ಯರಾದ ಮಹಾದೇವಪ್ಪ ಅಣ್ಣಿಗೇರಿ, ಪ್ರವೀಣ ಬಾಳಿಕಾಯಿ, ನೀಲಮ್ಮ ಮೆಣಸಿನಕಾಯಿ ಅವರುಗಳಿಗೆ ಪಂಚಮಸಾಲಿ ಸಮಾಜದವತಿಯಿಂದ ಸನ್ಮಾನಿಸಲಾಯಿತು.