ಸಮಾಜದ ಅಭಿವೃದ್ಧಿಗೆ ಶ್ರಮಿಸಲು ಕರೆ

ಹಿರಿಯೂರು : ಮಾ. 26- ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ವಾಸವಿ ಕ್ಲಬ್ ಮೂಲಕ ಗಮನಹರಿಸಬೇಕು ಎಂದುವಾಸವಿ ಇಂಟರ್ ನ್ಯಾಷನಲ್ ಕ್ಲಬ್ ಜಿಲ್ಲಾ ಗವರ್ನರ್ ಅಂಬಾಟಿ ಪ್ರಸಾದ್ ಬಾಬು ಹೇಳಿದರು.ನಗರದ ಶ್ರೀಕನ್ಯಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯೂರು ವಾಸವಿ ಕ್ಲಬ್ 2023 ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು. ವೃದ್ಧಾಶ್ರಮಗಳಿಗೆ ಸಹಕಾರ, ಅಂಗವಿಕಲರಿಗೆ ಸಹಾಯ ಹಸ್ತ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ  ನೀಡಬೇಕು ಎಂದರು  ಹಾಗೂ ಕ್ರೀಡಾ ಚಟುವಟಿಕೆಗಳನ್ನು ಸಹ ನಡೆಸುವಂತೆ ಸಂಘದ ಸದಸ್ಯರಿಗೆ ತಿಳಿಸಿದರು.ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಸಂದ್ಯಾ ಅಮರೇಶ್  ಮಾತನಾಡಿ ತಮ್ಮ ಅವಧಿಯಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದೀರಾ ಹಾಗೆಯೇ ಮುಂದೆಯೂ  ಸಹ ಇನ್ನು ಹೆಚ್ಚಿನ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಲು ಸಹಕಾರ ನೀಡುವುದಾಗಿ ತಿಳಿಸಿದರು. ಹಿರಿಯೂರು ವಾಸವಿ ಕ್ಲಬ್ ಗೆ ನೂತನ  ಅಧ್ಯಕ್ಷರಾಗಿ ವಿ. ಜಗದೀಶ್, ಕಾರ್ಯದರ್ಶಿಯಾಗಿ ಆಂಜನೇಯ ಅರಳಿಕಟ್ಟೆ, ಖಜಾಂಚಿಯಾಗಿ ಪುನೀತ್ ರಂಗನಾಥ್ ಹಾಗೂ ಸದಸ್ಯರು ಅಧಿಕಾರ ಸ್ವೀಕರಿಸಿದರು. ಆರ್ಯವೈಶ್ಯ ಮಂಡಳಿಯ ಹಿರಿಯ ಮುಖಂಡರಾದ ಕೆ ಆರ್ ವೆಂಕಟೇಶ್ ಹೆಚ್.ಎಸ್.ನಾಗರಾಜಗುಪ್ತ, ಕಾರ್ಯದರ್ಶಿ ಪಿ.ವಿ.ನಾಗರಾಜ್  ಕನ್ಯಕಾ ಪರಮೇಶ್ವರಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಈ ಆರ್ ರಮೇಶ್ ಬಾಬು ಮತ್ತಿತರರು ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವಾಸವಿ ಕ್ಲಬ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷರಾದ ಸಿ.ಎ.ವರದರಾಜಗುಪ್ತ, ರೀಜಿನಲ್ ಚೇರ್ಮನ್ ಜಿ.ಮಹೇಶ್ ಕುಮಾರ್ ಜೋನ್ ಚೇರ್ಮನ್ ಭಾಸ್ಕರ್ ರಾವ್, ಕೋ ಆರ್ಡಿನೇಟರ್ ಗಳಾದ ಬಿ.ಎನ್.ನಾಗಭೂಷಣ್ , ಭವಾನಿ ಶ್ರೀನಿವಾಸ್ ,  ಹಾಗೂ ಚಂದ್ರವದನ ಸತ್ಯಮೂರ್ತಿ, ನಾಗಸುಂದರಮ್ಮ ಸುಬ್ಬಣ್ಣ ಶೆಟ್ಟಿ, ಪದ್ಮಜಾ ಮಹಾಬಲೇಶ್ವರ್ ಶೆಟ್ಟಿ ಮತ್ತು ವಾಸವಿ ಕ್ಲಬ್ ನ ಸದಸ್ಯರು ಆರ್ಯವೈಶ್ಯ  ಸಮಾಜದ ಅನೇಕ ಮುಖಂಡರು ಪಾಲ್ಗೊಂಡಿದ್ದರು.