ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸಿ : ನೆಲೋಗಿ ಶ್ರೀ

ಜೇವರ್ಗಿ : ಜ.4:ವೀರಶೈವ-ಲಿಂಗಾಯತ ಸಮಾಜದ ಅಭಿವೃದ್ದಿಗೆ ಮುಖಂಡರು ಬಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ನೆಲೋಗಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಪದಾಧಿಕಾರಿಗಳ ಸನ್ಮಾನ ಹಾಗೂ ಸಮಾಜದ ಅಧ್ಯಕ್ಷ ರಾಜಶೇಖರ ಸೀರಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಹಾಸಭಾ ಶ್ರಮಿಸಬೇಕು. ಪಟ್ಟಣದಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ ಸ್ಥಾಪನೆ ಮಾಡಬೇಕು ಹಾಗೂ ಅಣ್ಣ ಬಸವಣ್ಣನವರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು. ವೀರಶೈವ ಲಿಂಗಾಯತ ಮಹಾಸಭಾ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಸಂಘಟನೆ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ರಾಜಶೇಖರ ಸೀರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೊನ್ನ ವಿರಕ್ತ ಮಠದ ಡಾ.ಶಿವಾನಂದ ಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ, ಶಖಾಪೂರದ ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ಮಳ್ಳಿ ಶ್ರೀ, ಮಾವನೂರ ಶ್ರೀ, ಸೌಳಹಳ್ಳ ಶ್ರೀ, ಶಾಸಕ ಡಾ.ಅಜಯಸಿಂಗ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಲ್ಲಮಪ್ರಭು ಪಾಟೀಲ ನೆಲೋಗಿ, ವೀರಶೈವ ಸಮಾಜದ ಅಧ್ಯಕ್ಷ ಸಿದ್ಧು ಸಾಹು ಅಂಗಡಿ, ಕಾಶಿಂ ಪಟೇಲ ಮುದಬಾಳ, ಷಣ್ಮುಖಪ್ಪಗೌಡ ಹಿರೇಗೌಡ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಭಗವಂತ್ರಾಯ ಶಿವಣ್ಣವರ್, ಶಿವಕುಮಾರ ಕಲ್ಲಾ, ಚಂದ್ರಶೇಖರ ಪುರಾಣಿಕ, ವಿಜಯಕುಮಾರ ಬಿರಾದಾರ, ಶಿವಶರಣಪ್ಪ ಕೋಬಾಳ, ಸದಾನಂದ ಪಾಟೀಲ, ಬಿ.ಸಿ.ಗದ್ದಗಿಮಠ, ಶರಣು ಬಿದನೂರ, ರವಿ ಅವಂಟಿ, ಶಾಂತಗೌಡ ನರಿಬೋಳ, ಗುರು ರಾವೂರ, ರುದ್ರಗೌಡ ಬಿದನೂರ, ವಿಶ್ವ ಮಧಕರಿ, ನೀಲಕಂಠ ಅವಂಟಿ, ಕಿರಣ ದೇಸಾಯಿ, ಕಾಶಿರಾಯಗೌಡ ಯಲಗೋಡ, ಮರೆಪ್ಪ ಕೋಬಾಳಕರ್, ನಿಂಗಣ್ಣಗೌಡ ನಂದಿಹಳ್ಳಿ, ಸಂಗಣ್ಣ ಹೂಗಾರ, ಮಂಜುನಾಥ ಪ್ರಭಾಳಕರ್ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.
ಹಾಲು-ಹಣ್ಣು ವಿತರಣೆ : ರಾಜಶೇಖರ ಜನ್ಮದಿನ ಅಂಗವಾಗಿ ಅಭಿಮಾನಿಗಳ ವತಿಯಿಂದ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಹಣ್ಣು ವಿತರಣೆ ಮಾಡಲಾಯಿತು.