ಸಮಾಜದಿಂದ ಸಂಭ್ರಮಾಚರಣೆ. ಶ್ರಮಿಕಜೀವಿಗಳಾದ ನೀವು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ

ಸಿರವಾರ.ಫೆ೨೨- ೧೨ ನೇ ಶತಮಾನದ ಬಸವಣ್ಣನವರ ನೆಚ್ಚಿನ ಶಿಷ್ಯರಾಗಿದ ಹಡಪದ್ ಅಪ್ಪಣ್ಣ ಅವರ ಸಮಾಜದವರಾದ ನೀವುಗಳು ಇನೂ ಸಹ ಕುಲ ಕಸಬನ್ನೆ ನಂಬಿಕೊಂಡಿದಿರಿ, ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಈಗ. ನಿಗಮ ಮಂಡಳಿ ಮಂಜೂರು ಮಾಡಿದ್ದಾರೆ, ಸೌಲಭ್ಯ ಪಡೆದು ಅಭಿವೃದ್ಧಿಯಾಗಿ ಎಂದು ಮಾಜಿ ಶಾಸಕರಾದ ಗಂಗಾಧರ ನಾಯಕ ಹೇಳಿದರು. ಹಡಪದ ಹಪ್ಪಣ್ಣ ಅಭಿವೃದ್ಧಿ ನಿಗಮ ಮಾಡಿ ಆಧೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸಿರವಾರ ಹಡಪದ ಅಪ್ಪಣ್ಣ ಸಮಾಜದಿಂದ ಸಂಭ್ರಮಾಚರಣೆಯನ್ನು ಪಟ್ಟಣದ ಬಸವೇಶ್ವರ ವೃತ್ತ ದಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅನೇಕ ವರ್ಷಗಳಿಂದ ನಿಮ್ಮ ಕುಲಕಸಬನ್ನೆ ನೆಚ್ಚಿಕೊಂಡಿ ಇದಿರಿ, ಕೇಲವರು ಮಾತ್ರಶಿಕ್ಷಣವಂತರಾಗಿದ್ದಾರೆ. ಎಲ್ಲಾರೂ ಶಿಕ್ಷಣ ಪಡೆದು ಸರ್ಕಾರ ಹುದ್ದೆಗಳನ್ನು ಅಲಂಕರಿಸಬೇಕು. ಈಗ ನಮ್ಮ ಸರ್ಕಾರ ನಿಗಮ ಪ್ರಾರಂಭಿಸಿದೆ ಸಾಲ, ಸೌಲಭ್ಯ ಪಡೆದು ಅಭಿವೃದ್ದಿಯಾಗಿ ಎಂದರು. ಜೆ.ಶರಣಪ್ಪಗೌಡ, ಎನ್.ಉದಯಸಾಹುಕರ, ಮಲ್ಲಿಜಾರ್ಜುನ ಜಕ್ಕಲದಿನ್ನಿ, ಶಿವಶರಣಗೌಡ ಲಕ್ಕಂದಿನ್ನಿ ಮಾತನಾಡಿದರು. ಪ.ಪಂ ಸದಸ್ಯ ಕೃಷ್ಣ ನಾಯಕ, ಜೆ.ಬಸವರಾಜಗೌಡ, ತಾಲೂಕು ಗೌರವ ಅಧ್ಯಕ್ಷರು ಶರಣಪ್ಪ ಗಣದಿನ್ನಿ ಸಿರವಾರ ನಗರ ಘಟಕದ ಗೌರವಾಧ್ಯಕ್ಷ ಶರಣಪ್ಪ ನಗನೂರ ತಾಲೂಕ ಅಧ್ಯಕ್ಷರು ಬಸವರಾಜ ಚಿಂಚಿರಿಕಿ ಮತ್ತು ಸಿರವಾರ ನಗರ ಘಟಕದ ಅಧ್ಯಕ್ಷರು ಚಂದ್ರಶೇಖರ್,ತಾಲೂಕು ಪ್ರಧಾನ ಕಾರ್ಯದರ್ಶಿ ಅಮರೇಶ ಕನಸಾವಿ ಮತ್ತು ಸಿರವಾರ ನಗರದ ಘಟಕದ ಕಾರ್ಯದರ್ಶಿ ಬಸವರಾಜ್ ಹರವಿ ಸಮಾಜದ ತಾಲೂಕು ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಮುಖಂಡರು ಸರ್ವ ಸದಸ್ಯರು ಇದರು.