ಸಮಾಜದಿಂದ ಬೃಹತ್ ಶಕ್ತಿ ಪ್ರದರ್ಶನ

ಲಾಳಗೊಂಡ ಜಿಲ್ಲಾ ಸಮಾವೇಶ
ಮಾನ್ವಿ,ಫೆ.೨೧- ನಮ್ಮ ಸಮಾಜದವನ್ನು ಅಧಿಕೃತ ಜಾತಿ ಪಟ್ಟಿಯಲ್ಲಿ ಸೇರಿಸುವಂತೆ ಈಗಾಗಲೇ ಅನೇಕ ಬಾರಿ ಸರ್ಕಾರಕ್ಕೆ ಒತ್ತಾಯದ ಮೂಲಕ ಮನವಿ ಮಾಡಲಾಗಿದ್ದರೂ ಕೂಡ ನಮ್ಮ ಸಮಾಜದ ವಿಷಯವನ್ನು ಗಂಭೀರವಾಗಿರವಾಗಿ ಪರಿಗಣಿಸದ ಕಾರಣದಿಂದ ಪೆಬ್ರವರಿ ೨೬ ರಂದು ರಾಯಚೂರು ಜಿಲ್ಲಾ ಲಾಳಗೊಂಡ ಸಮಾಜದಿಂದ ಬೃಹತ್ ಸಮಾವೇಶದೊಂದಿಗೆ ರಾಜ್ಯ ಸರ್ಕಾರಕ್ಕೆ ನಮ್ಮ ಸಮಾಜದ ಶಕ್ತಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಅಧ್ಯಕ್ಷ ಮಹಾದೇವಪ್ಪ ಗೌಡ ಕಟಾಲಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ನಮ್ಮ ಜನಾಂಗದವರಿಗೆ ಪ್ರತ್ಯೇಕ ಜಾತಿ ಮೀಸಲು ಮಾಡುವಂತೆ ಅನೇಕ ಬಾರಿ ಮನವಿ ಮಾಡಿದ್ದು ವಿಫಲವಾಗಿದೆ ಆದರಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರಣಕ್ಕಾಗಿ ರಾಯಚೂರು ಜಿಲ್ಲಾ ಲಾಳಗೊಂಡರ ಸಮಾವೇಶವನ್ನು ಪೆಬ್ರವರಿ ೨೬ ರಂದು ಕರಡಿಗುಡ್ಡ ವೃತ್ತದಲ್ಲಿ ಜನಾಂಗದ ಮಾತೆಯಾದ ನೀಲಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಮೆರವಣಿಗೆ ಆರಂಭ ಮಾಡಿ ಬಸವವೃತ್ತದ ಮೂಲಕ ಆಗಮಿಸಿ ಟಿ ಎ ಪಿ ಸಿ ಎಂ ಎಸ್ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತದೆ ಎಂದರು.
ನಂತರ ತಾ ಪಂ ಮಾಜಿ ಅಧ್ಯಕ್ಷ ಚನ್ನಬಸವಗೌಡ ಬೆಟ್ಟದೂರು ಮಾತಾನಾಡಿ ಸಾಮಾಜದ ಏಕೈಕ ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ ಸೇರಿದಂತೆ ಸಮಾಜದ ಸ್ವಾಮಿಯವರು,ರಾಜಕೀಯ ಗಣ್ಯರು,ಮುಖಂಡರು ಸೇರಿದಂತೆ ಕನಿಷ್ಠ ಎರಡು ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಮಾವೇಶವನ್ನು ಮಾಡಲಾಗುತ್ತದೆ ದಯವಿಟ್ಟು ರಾಯಚೂರು ಜಿಲ್ಲೆಯ ನಮ್ಮ ಸಮಾಜದವರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲು ಕೋರಿದರು.
ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ವೀರಭದ್ರಪ್ಪಗೌಡ ಆಲ್ದಾಳ್, ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಗುಂಡಪ್ಪ ಗೌಡ, ಜಿ ಪಂ ಮಾಜಿ ಸದಸ್ಯ ವೀರಭದ್ರಪ್ಪಗೌಡ,ಚಂದ್ರಶೇಖರ ಗೌಡ,ಅಮರೇಶ ಪಾಟೀಲ, ಸಾಯಿಸುಮನ್ ಪಾಟೀಲ, ಸತೀಶ್ ಪಾಟೀಲ ಇದ್ದರು.